ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಪತ್ರ ಬರೆದ ಶ್ರೀದೇವಿ. ಕೊನೆ ಸಂದರ್ಶನದ ಬಗ್ಗೆ ಬರೆದಿದ್ದು ನೋಡಿ ಜನರು ಶಾಕ್ ಆಗಿದ್ದಾರೆ. 


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬವನ್ನು ಸಿಕ್ಕಾಪಟ್ಟೆ ಜೋರಾಗಿ ಆಚರಿಸಲಿದ್ದಾರೆ ಅಭಿಮಾನಿಗಳು. ಕಂಠೀರವ ಸ್ಟುಡಿಯೋದಲ್ಲಿ ಕುಟುಂಬಸ್ಥರು ಸಮಾಧಿ ಪೂಜೆ ಸಲ್ಲಿಸಲಿದ್ದಾರೆ. ನಿನ್ನೆ ಅಪ್ಪು ಮನೆಯಲ್ಲಿ ಸಣ್ಣದಾಗಿ ಹೋಮಾ ಪೂಜೆ ಹಮ್ಮಿಕೊಂಡಿದ್ದರು. ರಾಘವೇಂದ್ರ ರಾಜ್‌ಕುಮಾರ್ ಸೊಸೆ ಶ್ರೀದೇವಿ ಬೈರಪ್ಪ ವಿದೇಶದಲ್ಲಿ ವಿದ್ಯಾಭ್ಯಾಸದ ಜೊತೆ ಕೆಲಸ ಮಾಡುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬದಂದು ಎಮೋಷನಲ್ ಪೋಸ್ಟ್‌ ಬರೆದುಕೊಂಡಿದ್ದಾರೆ. 

'ಅಪ್ಪು ಕೇವಲ ಹೆಸರಲ್ಲ.ನನ್ನಂತೆ ಅದೆಷ್ಟೋ ಕನ್ನಡಿಗರಿಗೆ ಒಂದು ಎಮೋಷನ್ ಎನ್ನಬಹುದು.ಹಲವು ವರ್ಷಗಳ ಕಾಲ ಅವರೊಟ್ಟಿಗೆ ಸಮಯ ಕಳೆದು ಅವರ ಎನರ್ಜಿ ಸುತ್ತ ಇರುವುದಕ್ಕೆ ಪುಣ್ಯ ಮಾಡಿದ್ದೆ. ಅಪ್ಪು ಅಗಲುವ ಹಿಂದಿನ ದಿನ ಮಾತನಾಡಿದ್ದು ನನಗೆ ನೆನಪಿದೆ. ಅರ್ಥವಿಲ್ಲದ ಸಿನಿಮಾಗಳು, ಪದೇ ಪದೇ ಅದೇ ಡೈಲಾಗ್ ಹಾಗೂ ಸಮಾಜವನ್ನು ನೆಗೆಟಿವ್ ಆಗಿ ಶೇಪ್ ಮಾಡುವ ಕಥೆಗಳನ್ನು ಬೇಸರವಾಗಿದೆ ಎನ್ನುತ್ತಿದ್ದರು. ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ಹಣ ಮಾಡಲು ಹಾಗೂ ಈಗೋಗೋಸ್ಕರ ಸಿನಿಮಾ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದರು. ನಮ್ಮ ಸಮಾಜದ ಮೆಂಟಾಲಿಟಿಯನ್ನು ಪ್ರಶ್ನೆ ಮಾಡಿದ್ದರು. ಅವರು ಲೀಡರ್‌ಶಿಪ್‌ನ ತುಂಬಾ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿತ್ತು ' ಎಂದು ಶ್ರೀದೇವಿ ಬೈರಪ್ಪ ಬರೆದುಕೊಂಡಿದ್ದಾರೆ.

Latest Videos

ಕಡಿಮೆ ವರ್ಷಗಳ ಕಾಲ ಇಂಡಸ್ಟ್ರಿಯಿಂದ ಹಣ ಬರುವುದು, 50% ಸಂಭಾವನೆ ನನ್ನ ಮೇಲೆ ಖರ್ಚು ಮಾಡಿಕೊಳ್ಳುತ್ತೀನಿ: ದೀಪಿಕಾ ದಾಸ್

'ಅವರದ್ದೇ ನಿರ್ಮಾಣ ತೆರೆದು ಹೊಸಬರಿಗೆ ಅವಕಾಶ ಕೊಟ್ಟ ಸಿನಿಮಾ ಮಾಡುವ ಶೈಲಿಯನ್ನು ಬದಲಾಯಿಸಿದ್ದರು. ರೆಕಾರ್ಡ್ ಬ್ರೇಕ್ ಮಾಡಿದ ಸೂಪರ್ ಸ್ಟಾರ್, ಕನ್ನಡ ಇಂಡಸ್ಟ್ರಿಯಲ್ಲಿ ಯಾರೂ ಬ್ರೇಕ್ ಮಾಡದ ದಾಖಲೆ ಇವರದ್ದು. ಅವರ ಅತಿಯಾಗಿ ಇಷ್ಟ ಪಟ್ಟು ಮಾಡಿದ್ದು ಗಂಧದ ಗುಡಿ ಸಿನಿಮಾ. ಈ ಡಾಕ್ಯೂಮೆಂಟ್‌ನಲ್ಲಿ ತಮ್ಮ ನೆಲ ಮತ್ತು ಜನರ ಬಗ್ಗೆ ತೋರಿಸಿದ್ದಾರೆ' ಎಂದು ಶ್ರೀದೇವಿ ಹೇಳಿದ್ದಾರೆ.

ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

'ಎಡ್‌ಟೆಕ್‌ ಕಾರ್ಪೊರೆಷನ್‌ ಆಫರ್ ಮಾಡಿದ ಮಿಲಿಯನ್ ಡಾಲರ್ ಆಫರ್‌ನ ಒಂದು ನಿಮಿಷವೂ ಯೋಚನೆ ಮಾಡದೆ ರಿಜೆಕ್ಟ್‌ ಮಾಡಿದ್ದರು. ಫ್ರೀ ಆಗಿ ಜಾಹೀರಾತು ಚಿತ್ರೀಕರಣ ಮಾಡಿಕೊಟ್ಟರು ಕಾರಣ ವಿದ್ಯಾಭ್ಯಾಸ ಪ್ರಮೋಟ್ ಮಾಡಲು. ಅವರು  ಮಾಡುತ್ತಿದ್ದ ಕೆಲಸದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದರು. ಇನ್‌ಫಿನಿಟಿ ವರ್ಲ್ಡ್‌ ಸ್ಟುಡಿಯೋವನ್ನು ಪ್ರತಿನಿಧಿಸಿದ್ದರು ಕಾರಣ ಹಲವು ಬಗೆಯ ಕಥೆಗಳನ್ನು ಜನರಿಗೆ ಪರಿಚಯಿಸಿಕೊಡಲು. ನಿಮ್ಮ 50ನೇ ಹುಟ್ಟುಹಬ್ಬದಂದು ನಿಮ್ಮನ್ನು ನಂಬಿದ ನನ್ನಂತ ಅದೆಷ್ಟೋ ಅಭಿಮಾನಿಗಳಿಗೆ ಸ್ಫೂರ್ತಿಯ ದಿನ ಆಗಿರಲಿದೆ. ನಮ್ಮ ಹೊಸ ಪ್ರಾಜೆಕ್ಟ್‌ನ ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೀವಿ' ಎಂದಿದ್ದಾರೆ ಶ್ರೀದೇವಿ.

 

click me!