'23 ವರ್ಷದ ಹಿಂದೆ ಅಪ್ಪು ಬಿಡುಗಡೆ ಆದಾಗ ನಾನು ಚಿತ್ರ ನೋಡಲು ಥಿಯೇಟರ್‌ಗೆ ಬಂದಿದ್ದೆ. ಅಂದು ಈ ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್ ಹೇಗಿತ್ತೋ ಹಾಗೇ ಇಂದೂ ಕೂಡ ಇದೆ. ಅಂದು ಅಪ್ಪು ಫ್ಯಾನ್ಸ್ 'ತಾಲಿಬಾನ್ ಅಲ್ಲ ಅಲ್ಲ..' ಹಾಡು..
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಅಪ್ಪು (Appu) ಚಿತ್ರವು ಮರುಬಿಡುಗಡೆ ಆಗಿದೆ. ಮೊನ್ನೆ 14 ಮಾರ್ಚ್ 2025ರಂದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಅಪ್ಪು ಚಿತ್ರವು ರೀ-ರಿಲೀಸ್ ಆಗಿದ್ದು ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಆಕಾಶ್' ಚಿತ್ರದ ನಟಿ ರಮ್ಯಾ (Sandalwood Queen Ramya) ಅವರು ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಫಸ್ಟ್ ರಿಯಾಕ್ಷನ್ ಏನು? ಇಲ್ಲಿದೆ ನೋಡಿ..
ನಟಿ ರಮ್ಯಾ ಅವರು ಈ ಬಗ್ಗೆ '23 ವರ್ಷದ ಹಿಂದೆ ಅಪ್ಪು ಬಿಡುಗಡೆ ಆದಾಗ ನಾನು ಚಿತ್ರ ನೋಡಲು ಥಿಯೇಟರ್‌ಗೆ ಬಂದಿದ್ದೆ. ಅಂದು ಈ ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್ ಹೇಗಿತ್ತೋ ಹಾಗೇ ಇಂದೂ ಕೂಡ ಇದೆ. ಅಂದು ಅಪ್ಪು ಫ್ಯಾನ್ಸ್ 'ತಾಲಿಬಾನ್ ಅಲ್ಲ ಅಲ್ಲ..' ಹಾಡು ಬಂದಾಗ ಹೇಗೆ ಥಿಯೇಟರ್ ಒಳಗೆ ಸ್ಕ್ರೀನ್ ಮುಂದೆ ಡಾನ್ಸ್ ಮಾಡಿದ್ರೋ ಹಾಗೇ ಇಂದೂ ಕೂಡ ಮಾಡಿದ್ದಾರೆ. ಈಗಲೂ ಅಪ್ಪು ಬಗ್ಗೆ ಅಷ್ಟೇ ಕ್ರೇಜ್ ಅಭಿಮಾನಿಗಳಿಗೆ ಇದೆ. ಅದನ್ನು ನೋಡಿದ್ರೆ ಕೆಲವೊಮ್ಮೆ ಭಯ ಆಗುತ್ತೆ.. ಆದ್ರೆ, ಪುನೀತ್ ಕ್ರೇಜ್ ಕಮ್ಮಿ ಆಗಿಲ್ಲ ಅಂತ ಹೇಳೋದಕ್ಕೆ ಇದನ್ನ ಹೇಳಿದೆ ಅಷ್ಟೇ' ಎಂದಿದ್ದಾರೆ.
ಪುನೀತ್ ರಾಜ್‌ಕುಮಾರ್ 'ಅಪ್ಪು' ರೀ-ರಿಲೀಸ್, ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದ ನಟಿ ರಮ್ಯಾ!
ಜೊತೆಗೆ, ನಾನು ಪುನೀತ್ ರಾಜ್‌ಕುಮಾರ್ ಅಭಿನಯದ ಎರಡನೇ ಚಿತ್ರವಾದ 'ಆಕಾಶ್'ದಲ್ಲಿ ಅವರ ಜೊತೆ ನಟಿಸಿದ್ದೇನೆ.' ಎಂದು ಆ ಕ್ಷಣವನ್ನೂ ಕೂಡ ನೆನಪು ಮಾಡಿಕೊಂಡಿದ್ದಾರೆ ನಟಿ ರಮ್ಯಾ. ಇಂದು ಮೀಡಿಯಾದವರು ಕೇಳಿದ ಪ್ರಶ್ನೆಗೆ, ಅಪ್ಪು ಬಗ್ಗೆ ಇನ್ನೂ ಸಾಕಷ್ಟು ಸಂಗತಿಗಳನ್ನು ಹೇಳಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ. ಒಟ್ಟಿನಲ್ಲಿ, ರಮ್ಯಾ ಮಾತಿನಲ್ಲಿ ಪುನೀತ್ ಅಭಿನಯದ ಅಪ್ಪು ಸಿನಿಮಾವನ್ಉ ಮತ್ತೆ ನೋಡಿದ ಖುಷಿಯಿತ್ತು. ಹಾಗೂ, ಮತ್ತೆ ಪುನೀತ್ ಅವರನ್ನು ತೆರೆಯ ಮೇಲೆ ನೋಡಿದ ಖುಷಿ ಇತ್ತು.
ನಾಳೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 'ಅಪ್ಪು' ಸಿನಿಮಾ ಮರುಬಿಡುಗಡೆಯಾಗಿದ್ದು ಗೊತ್ತೇ ಇದೆ. ಆ ಹಿನ್ನೆಲೆಯಲ್ಲಿ ಇಂದು ವೀರೇಶ್ ಚಿತ್ರಮಂದಿರದ ಎದುರು ನೂರಾರು ಅಪ್ಪು ಅಭಿಮಾನಿಗಳು ಜಮಾಯಿಸಿ ಹಾಡು-ನೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯವಾಗಿ, ಪುನೀತ್ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ನೃತ್ಯ ಮಾಡುತ್ತಿದ್ದಾರೆ. ನಾಳೆ ಪುನೀತ್ 50ನೇ ವರ್ಷದ ಹುಟ್ಟು ಹಬ್ಬ ಹಿನ್ನೆಲೆಯಯಲ್ಲಿ ಇಂದು ಅಪ್ಪು ಅಭಿಮಾನಿಗಳ ಖುಷಿ ಆಕಾಶಕ್ಕೇರಿದೆ. ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಗಳನ್ನು ಪ್ರದರ್ಶಿಸುತ್ತಿರುವ ಅಭಿಮಾನಿಗಳು, ಅಪ್ಪು ನೆನಪಲ್ಲಿ ಮಿಂದೇಳುತ್ತಿದ್ದಾರೆ.
ಡಾ ಭುಜಂಗ ಶೆಟ್ಟಿ ಬಳಿ ನೇತ್ರದಾನದ ಬಗ್ಗೆ ಡಾ ರಾಜ್‌ಕುಮಾರ್ ಹೇಳಿದ್ದು..! ಪುನೀತ್ ಸಹ..
ಇಂದು ವೀರೇಶ್ ಚಿತ್ರಮಂದಿರಕ್ಕೆ ಪುನೀತ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಆಗಮಿಸಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಪುನೀತ್ ಅಭಿಮಾನಿಗಳ ಖುಷಿ ಹೆಚ್ಚಾಗಿದೆ. ಅಪ್ಪು ಅಭಿಮಾನಿಗಳ ಜೊತೆ ಕುಳಿತು ನಟಿ ರಮ್ಯಾ, ಯುವ ಹಾಗೂ ವಿನಯ್ ರಾಜ್‌ಕುಮಾರ್ ಅವರು ಅಪ್ಪು ಚಿತ್ರವನ್ನು ಇಂದು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಎಮೋಶನಲ್ ಆಗುತ್ತಿದ್ದಾರೆ, ಇದು ಸಹಜ ಕೂಡ.
ಹೌದು, ನಾಳೆ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಬದುಕಿದ್ದರೆ ಅವರೇ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರೇನೋ! ಆದರೆ, ಅವರಿಲ್ಲದೇ ಅವರ ಹುಟ್ಟುಹಬ್ಬವನ್ನು ಅವರ ಪತ್ನಿ ಅಶ್ವಿನಿ (Ashwini Puneeth Rajkumar) ಹಾಗೂ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಪ್ಪು ದಿವಂಗತರಾಗಿ 3 ವರ್ಷಗಳೇ ಕಳೆದುಹೋಗಿವೆ. ಆದರೂ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟುಹಬ್ಬ ಎಂಬಂತೆ ಆಚರಿಸುತ್ತ ಅದನ್ನು ಕರ್ನಾಕದ ಹಬ್ಬ ಎನ್ನವಂತೆ ಮಾಡಿದ್ದಾರೆ.
ಪಾರ್ವತಮ್ಮ ಅದೆಷ್ಟೇ ಕಾದರೂ ಶಿವರಾಜ್‌ಕುಮಾರ್ 'ಆ ಚಿತ್ರ'ಕ್ಕೆ ಈ ನಟಿಯ ಡೇಟ್ಸ್ ಸಿಗಲೇ ಇಲ್ಲ, ಕೊನೆಗೆ..
ಒಟ್ಟಿನಲ್ಲಿ, ನಾಳೆ (17 March) ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಆಚರಣೆ. ಬೆಂಗಳೂರು, ಹೊಸಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ 'ಕರ್ನಾಟಕ ರತ್ನ' ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಪುನೀತ್ ನಮ್ಮ ಜೊತೆಗಿಲ್ಲ ಎಂಬ ಕೊರಗು, ನೋವಿನ ಜೊತೆಜೊತೆಗೇ ಅವರ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಅಂದಹಾಗೆ, ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ನಿನ್ನೆ ನಟಿ ರಕ್ಷಿತಾ ಪ್ರೇಮ್ (ಅಪ್ಪು ಚಿತ್ರದ ನಾಯಕಿ) ಆಗಮಿಸಿದ್ದರು.