ಹಿರಿಯ ನಟ ರಮೇಶ್ ಭಟ್ ಅವರು ಮೇರು ನಟ ಡಾ ರಾಜ್‌ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ನನಗೆ ಡಾ ರಾಜ್‌ಕುಮಾರ್ ಜೊತೆ ನಟಿಸೋಕೆ ಸಿಕ್ಕಿದ್ದು...
ಕನ್ನಡದ ಹಿರಿಯ ನಟ ರಮೇಶ್ ಭಟ್ (Ramesh Bhat) ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ? ಕನ್ನಡದಲ್ಲಿ ಅಸಂಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ರಮೇಶ್ ಭಟ್. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ರಮೇಶ್ ಭಟ್. ಅವರು ಇತ್ತೀಚೆಗೆ ಮೇರು ನಟ ಡಾ ರಾಜ್‌ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..
'ನನಗೆ ಡಾ ರಾಜ್‌ಕುಮಾರ್ ಜೊತೆ ನಟಿಸೋಕೆ ಸಿಕ್ಕಿದ್ದು ಒಂದೇ ಒಂದು ಸಿನಿಮಾ. ಅದು ಶಂಕರ್ ನಾಗ್ ನಿರ್ದೇಶನದ 'ಒಂದು ಮುತ್ತಿನ ಕಥೆ'. ಈ ಚಿತ್ರದಲ್ಲಿ ನಾನು ಅಣ್ಣಾವ್ರ ಜೊತೆ ನಟಿಸಿದ್ದೇನೆ ಎಂಬ ಖುಷಿಯಿದೆ. ಆಗ ನನಗೆ ಅವರ ಸಾಂಗತ್ಯ ದೊರಕಿದ್ದು ಬಿಟ್ಟರೆ ಬೇರೆ ಸಿನಿಮಾಗಳಲ್ಲಿ ಒಟ್ಟಿಗೇ ಕೆಲಸ ಮಾಡುವ ಭಾಗ್ಯ ಸಿಗಲಿಲ್ಲ. ಅದೇ ರೀತಿ ಪುನೀತ್ ಅವರ ಜೊತೆಯಲ್ಲೂ ನಾನು ನಟಿಸಿದ್ದು ಒಂದೇ ಚಿತ್ರ, ಅದು ಬಿಂದಾಸ್. ಅವರಿಬ್ಬರ ಜೊತೆಯಲ್ಲೂ ಸಿನಿಮಾದಲ್ಲಿ ಹೆಚ್ಚು ಕೆಲಸ ಮಾಡುವ ಭಾಗ್ಯ ನನಗೆ ಸಿಗಲೇ ಇಲ್ಲ. ನಾನು ಆ ವಿಷಯದಲ್ಲಿ ನತದೃಷ್ಟ' ಎಂದಿದ್ದಾರೆ ರಮೇಶ್ ಭಟ್.
'ಅಪ್ಪು' ಸಿನಿಮಾ ಮತ್ತೆ ನೋಡಿದ ರಮ್ಯಾ 'ಫಸ್ಟ್ ರಿಯಾಕ್ಷನ್' ಇದು.. ಏನ್ ಅಂದ್ರು ಕ್ವೀನ್..!?
ಜೊತೆಗೆ, 'ಸಿನಿಮಾದಲ್ಲಿ ಅವರ ಜೊತೆಯಲ್ಲಿದ್ದು ಹೆಚ್ಚು ಕೆಲಸ ಮಾಡಲಾಗದಿದ್ದರೂ ವೈಯಕ್ತಿಕವಾಗಿ ನಾನು ಅವರೊಂದಿಗೆ ಬಹಳಷ್ಟು ಭೇಟಿ ಮಾಡಿದ್ದೇನೆ. ನಮ್ಮ ಮಧ್ಯೆ ಬಹಳಷ್ಟು ಮಾತುಕತೆ ನಡೆದಿದೆ. ಅವೆಲ್ಲವೂ ಈಗ ಸವಿನನೆನಪುಗಳಾಗಿ ಉಳಿದಿವೆ. ನಾಳೆ, ಅಂದರೆ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ. ಈ ವೇಳೆ ಇಡೀ ಕರ್ನಾಟಕ ಅವರ ನಾಮವನ್ನು ಜಪಿಸುತ್ತಿದೆ, ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಡಾ ರಾಜ್‌ಕುಮಾರ್ ಅವರು ಕನ್ನಡನಾಡಿನಲ್ಲಿ ಒಂದು ದಂತಕತೆ. ಅವರಿಬ್ಬರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವೇ ಇಲ್ಲ, ಎಲ್ಲರಿಗೂ ತಿಳಿದಿದೆ' ಎಂದಿದ್ದಾರೆ ನಟ ರಮೇಶ್ ಭಟ್.
ಅಂದಹಾಗೆ, ನಟ ರಮೇಶ್ ಭಟ್ ಅವರು ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ಅವರ '360' ಸಿನಿಮಾದಲ್ಲಿ ನಟಿಸಿದ್ದಾರೆ. 'ಈ ಸಿನಿಮಾದಲ್ಲಿ ಗ್ರಾಫಿಕ್ಸ್ ತುಂಬಾ ಚೆನ್ನಾಗಿದೆ, ಕನ್ನಡ ಸಿನಿಮಾಗಳಲ್ಲಿ ಈ ಮಟ್ಟಿಗಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ನಿಜಕ್ಕೂ ಗ್ರೇಟ್' ಎಂದಿದ್ದಾರೆ ನಟ ರಮೇಶ್ ಭಟ್. ಕನ್ನಡದಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ ಹಿರಿಯ ನಟ ರಮೇಶ್ ಭಟ್.
ಡಾ ಭುಜಂಗ ಶೆಟ್ಟಿ ಬಳಿ ನೇತ್ರದಾನದ ಬಗ್ಗೆ ಡಾ ರಾಜ್‌ಕುಮಾರ್ ಹೇಳಿದ್ದು..! ಪುನೀತ್ ಸಹ..