ಮಾಸ್ಕ್​ಮ್ಯಾನ್ ಬಘೀರನ ಹಿಂದಿದ್ಯಾ ಸೀಕ್ರೆಟ್; ಬಘೀರನಿಗೆ ಸ್ಫೂರ್ತಿನಾ ಬಾಲಿವುಡ್ ಬಿಗ್ ಬಿ?

Published : Oct 25, 2024, 11:34 AM ISTUpdated : Oct 25, 2024, 11:37 AM IST
ಮಾಸ್ಕ್​ಮ್ಯಾನ್ ಬಘೀರನ ಹಿಂದಿದ್ಯಾ ಸೀಕ್ರೆಟ್; ಬಘೀರನಿಗೆ ಸ್ಫೂರ್ತಿನಾ ಬಾಲಿವುಡ್ ಬಿಗ್ ಬಿ?

ಸಾರಾಂಶ

ಬಘೀರ ಸಿನಿಮಾದ ಸ್ಪೆಷಾಲಿಟಿ ಅಂದ್ರೆ ಇದಕ್ಕೆ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯನ್ನ ಬರೆದಿದ್ದಾರೆ. ಉಗ್ರಂ ಬಳಿಕ ಶ್ರೀಮುರಳಿ ಇಮೇಜ್‌ಗೆ ಸೂಟ್ ಆಗುವಂಥಾ ಮಾಸ್ ಕಹಾನಿಯನ್ನ ರೆಡಿ ಮಾಡಿಕೊಟ್ಟಿದ್ದಾರೆ. ಡಾ.ಸೂರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 

ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali) ನಟನೆಯ ಬಘೀರ ಸಿನಿಮಾ (Bagheera) ಇನ್ನೇನು ದೀಪಾವಳಿಗೆ ತೆರೆಗೆ ಬರ್ತಾ ಇದೆ. ಬಘೀರನ ಟ್ರೈಲರ್ ನೋಡಿದವರು ಈ ಸಿನಿಮಾದ ಕಹಾನಿ ಏನಿರಬಹುದು ಅನ್ನೋದನ್ನ ಗೆಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾಗೆ ಬಿಗ್ ಬಿ ಅಮಿತಾಭ್ ನಟನೆಯ ಸಿನಿಮಾ ಸ್ಪೂರ್ತಿ ಇರಬಹುದಾ ಅಂತ ಊಹೆ ಕೂಡ ಮಾಡ್ತಾ ಇದ್ದಾರೆ.

ಬಘೀರನಿಗೆ ಸ್ಫೂರ್ತಿನಾ ಬಿಗ್ ಬಿ ನಟನೆಯ ಆ ಸಿನಿಮಾ..? ಹೀಗೊಂದು ಪ್ರಶ್ನೆ ಎದ್ದಿದೆ. ಟ್ರೇಲರ್ ನೋಡಿದವರ ತಲೆಯಲ್ಲಿ ಬಂದಿರೋ ಪ್ರಶ್ನೆಯಿದು. ಹೌದು, ಇದೇ ದೀಪಾವಳಿಗೆ ರೋರಿಂಗ್ ಸ್ಟಾರ್ ಶ್ರೀಮರುಳಿ ನಟನೆಯ ಬಘೀರ ಸಿನಿಮಾ ತೆರೆಗೆ ಬರ್ತಾ ಇದೆ. ಹೊಂಬಾಳೆ ಫಿಲಂಸ್ ನಿರ್ಮಿಸಿರೋ ಈ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಕನ್ನಡ ಮತ್ತು ತೆಲುಗುನಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಾ ಇದೆ.

ಶ್ರೀವಲ್ಲಿ-ಪುಷ್ಪರಾಜ್ ಬರೋ ದಿನ ಫಿಕ್ಸ್ ಆಗಿದ್ದು ನಿಜ; ಟವೆಲ್ ಹಿಡಿದೇ ನಿಂತ ಫ್ಯಾನ್ಸ್!

ಬಘೀರ ಸಿನಿಮಾದ ಸ್ಪೆಷಾಲಿಟಿ ಅಂದ್ರೆ ಇದಕ್ಕೆ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯನ್ನ ಬರೆದಿದ್ದಾರೆ. ಉಗ್ರಂ ಬಳಿಕ ಶ್ರೀಮುರಳಿ ಇಮೇಜ್‌ಗೆ ಸೂಟ್ ಆಗುವಂಥಾ ಮಾಸ್ ಕಹಾನಿಯನ್ನ ರೆಡಿ ಮಾಡಿಕೊಟ್ಟಿದ್ದಾರೆ. ಡಾ.ಸೂರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 

ಇನ್ನೂ ಈ ಸಿನಿಮಾ ಟ್ರೈಲರ್ ನೋಡಿದವರಿಗೆ ಇದ್ರಲ್ಲಿ ಶ್ರೀಮುರಳಿ ರಕ್ಷಕನೂ ಹೌದು ರಾಕ್ಷಸನೂ ಹೌದು ಅನ್ನೋದು ಗೊತ್ತಾಗಿದೆ. ಒಂದು ಕಡೆ ಖಾಕಿಧಾರಿ ರಕ್ಷಕನಾಗಿ ಮಿಂಚಿದ್ರೆ ಮತ್ತೊಂದೆಡೆ ಮಾಸ್ಕ್ ಧಾರಿ ಬಘೀರನಾಗಿ ರಕ್ಕಸನ ಅವತಾರದಲ್ಲಿ ಮಿಂಚಿದ್ದಾರೆ.

ಇದನ್ನ ನೋಡ್ತಾ ಇದ್ರೆ ಬಿಗ್ ಬಿ ಅಮಿತಾಭ್ ನಟನೆಯ ಹಳೆಯ ಸಿನಿಮಾವೊಂದು ನೆನಪಾಗ್ತಾ ಇದೆ. 1990ರಲ್ಲಿ ಬಂದ 'ಅಜೂಬಾ' ಸಿನಿಮಾದಲ್ಲಿ ಅಮಿತಾಭ್ ಇದೇ ರೀತಿ ಮಾಸ್ಕ್ ಮ್ಯಾನ್ ಸೂಪರ್ ಹೀರೋ ಆಗಿ ಬಂದು ದುಷ್ಟರನ್ನ ಶಿಕ್ಷಿಸ್ತಾ ಇರ್ತಾರೆ.

ರಶ್ಮಿಕಾ-ಸಲ್ಮಾನ್ ಖಾನ್ ಸುತ್ತ ಜ್ಯೂನಿಯರ್ ಆರ್ಟಿಸ್ಟ್​​ಗಳಿಗಿಂತಲೂ ಸೆಕ್ಯೂರಿಟಿಗಳೇ ಜಾಸ್ತಿ!

ಇದೂ ಸೇರಿದಂತೆ ಅನೇಕ ಸೂಪರ್ ಹೀರೋ ಸಿನಿಮಾಗಳ ಜೊತೆಗೆ ಬಘೀರನನ್ನ ಹೋಲಿಕೆ ಮಾಡಲಾಗ್ತಾ ಇದೆ. ಸೋ ಬಘೀರ ಬಗ್ಗೆ ಫ್ಯಾನ್ಸ್ ನಡುವೆ ಇದೇ ಕಾರಣಕ್ಕೆ ದೊಡ್ಡ ಕುತೂಹಲವೂ ಸೃಷ್ಟಿಯಾಗ್ತಾ ಇದೆ. ಅಕ್ಟೋಬರ್ 31ಕ್ಕೆ ಬಘೀರ ತೆರೆಗೆ ಬರಲಿದ್ದು, ಈ ಕುರಿತ ಕುತೂಹಲಗಳಿಗೆಲ್ಲಾ ಉತ್ತರ ಸಿಗಲಿದೆ. ಒಟ್ಟಿನಲ್ಲಿ, ಪ್ರಶಾಂತ್ ನೀಲ್ ಹಾಗೂ ಶ್ರೀ ಮುರಳಿ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡುತ್ತಾ ಎಂಬ ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?