ಮಗನ ಸ್ಕೂಲ್ ಮೀಟಿಂಗ್‌ನಲ್ಲಿ ಟೀಚರ್‌ಗೆ ಕ್ಲಾಸ್ ತೆಗೆದುಕೊಂಡ ದರ್ಶನ್; ಫೀಸ್‌ನ ಗಿಡದಿಂದ ಕಿತ್ಕೊಂಡು ತರ್ತಿಲ್ಲ ಎಂದ ನಟ!

By Vaishnavi ChandrashekarFirst Published Oct 25, 2024, 10:40 AM IST
Highlights

ಪೇರೆಂಟ್ ಟೀಚರ್‌ ಮೀಟಿಂಗ್ ಕರೆದು ಸ್ಕೂಲ್‌ ಮೇಡಂಗೆ ಬುದ್ಧಿ ಹೇಳಿದ ದರ್ಶನ್. ಸರ್ಕಾರಿ ಶಾಲೆನೇ ಬೆಸ್ಟ್‌ ಎಂದ ನಟ.... 

ನಟ ದರ್ಶನ್ ಪುತ್ರ ವಿನೀಶ್ ಬೆಂಗಳೂರಿನ ಪ್ರತಿಷ್ಠಿತ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ವರ್ಷ ವರ್ಷ ಸ್ಕೂಲ್‌ನಲ್ಲಿ ನಡೆಯುವ ಮೀಟಿಂಗ್‌ಗೆ ಪೋಷಕರು ಬರಬೇಕು ಎನ್ನುತ್ತಿದ್ದ ಕಾರಣ ಒಮ್ಮೆ ತಂದೆಗೆ ಒತ್ತಾಯ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನಡೆದ ಘಟನೆಯನ್ನು ದರ್ಶನ್ ರಿವೀಲ್ ಮಾಡಿದ್ದಾರೆ. 

'ನನ್ನ ಮಗನ ಸ್ಕೂಲ್‌ನಲ್ಲಿ ನಡೆಯುವ ಪೇರೆಂಟ್ ಟೀಚರ್ ಮೀಟಿಂಗ್‌ಗೆ ನಾನು ಎಂದೂ ಹೋಗಿಲ್ಲ ಆದರೆ ಒಮ್ಮೆ ತುಂಬಾ ಹಠ ಮಾಡಿದ ಅಂತ ಭೇಟಿ ನೀಡಿದೆ. ನಮ್ಮಿಬ್ಬರಿಗೂ ಬಹಳ ಕಡಿಮೆ ಸಮಯ ಸಿಗುವುದು ಹೀಗಾಗಿ ನಾನು ಹೇಗಿದ್ಯಾ ಏನ್ ಮಾಡ್ತಿದ್ಯಾ ಆಮೇಲೆ ಪ್ರಾಣಿಗಳು ಬಗ್ಗೆ ಅಷ್ಟೆ ಮಾತನಡುವುದು. ಅವನ ಹಠಕ್ಕೆ ಹೋಗಿ ಟೀಚರ್ ಮುಂದೆ ಕುಳಿತುಕೊಂಡೆ ಆಗ ನಿಮ್ಮ ಮಗ ಚೆನ್ನಾಗಿ ಓಡುತ್ತಿದ್ದಾನಾ ಅಂದ್ರು ಹೌದು ಓದುತ್ತಿದ್ದಾನೆ ಅಂದ್ರೆ ಏಕೆಂದರೆ ನನಗೆ ಅಷ್ಟೇ ಗೊತ್ತಿರುವುದು. ನೀವು ಎಲ್ಲಾ ಪೇರೆಂಟ್ ಟೀಚರ್ ಮೀಟಿಂಗ್‌ಗೆ ಬರಬೇಕು ಅಂದ್ರು .. ಆಗ ಇಲ್ಲ ಮೇಡಂ ನನ್ನ ಪ್ರೋಫೆಷನ್ 9 -6 ಅಲ್ಲ..ಒಂದು ದಿನ 9 ಗಂಟೆಗೆ ಹೋದರೆ ಮರು ದಿನ ಬೆಳಗ್ಗೆ 6 ಗಂಟೆಗೆ ಬರುವುದು ಎಂದು ಹೇಳಿದೆ. ಮಗನ ಜೊತೆ ನೀವು ಎಷ್ಟು ಟೈಂ ಕಳೆಯುತ್ತೀರಾ ಅಂದ್ರು...ಕನಿಷ್ಟ 2 ಗಂಟೆ ಸಮಯ ಕೊಡುತ್ತೀನಿ ಏಕೆಂದರೆ ಕೆಲಸ ಮುಗಿಸಿ ನಾನು ಬಂದು ಅವನು ಮಲಗುವಷ್ಟರಲ್ಲಿ ಸಿಗುವುದು ಇಷ್ಟೇ ಸಮಯ ಎಂದೆ. ಇಲ್ಲ ಇಲ್ಲ ನೀವು ತುಂಬಾ ಟೈಂ ಕೊಡಬೇಕು ಹಾಗೆ ಹೀಗೆ ಅಂತ ಹೇಳಿದ್ರು....ಮನೆಯಲ್ಲಿ ಹೆಂಗಸರು ಇರುತ್ತಾರೆ ಅವರು ನೋಡಿಕೊಳ್ಳುತ್ತಾರೆ ಅಂತ ಹೇಳಿದೆ' ಎಂದು ದರ್ಶನ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

'ಕಸ್ಟಡಿ' ಸೇರಿದ ಭೀಮಾ ಚಿತ್ರದ ಖಡಕ್ ಪೊಲೀಸ್; ಅಷ್ಟಕ್ಕೂ ಪ್ರಿಯಾ ಏನ್ ಮಾಡಿದ್ರು?

'ಅದಿಕ್ಕೆ ಇಲ್ಲ ಇಲ್ಲ ನೀವು ನೋಡಿಕೊಳ್ಳಬೇಕು ಅಂತ ಹೇಳಿದ್ದರು. ಆಗ 'ಅಲ್ಲಮ್ಮಾ ನಾನು ವರ್ಷ ವರ್ಷ ಲಕ್ಷ ಲಕ್ಷ ಫೀಸ್ ಕಟ್ಟುತ್ತೀನಿ ಸ್ಕೂಲ್‌ಗೆ ಅದನ್ನು ನಾನು ಗಿಡದಿಂದ ಕಿತ್ತುಕೊಂಡು ಬರ್ತೀನಾ? ನಾನು ಅಲ್ಲಿ ಕೂಲಿಗೆ ಹೋದ್ರೆ ನನಗೆ ಕೂಲಿ ಕೊಡುತ್ತಾರೆ ಅದನ್ನು ತಂದು ನಿಮಗೆ ಕಟ್ಟುತ್ತಿರುವುದು..' ಎಂದು ಹೇಳಿದೆ. ಅಷ್ಟು ಆದ ಮೇಲೂ ಇಲ್ಲ ಇಲ್ಲ ಪೇರೆಂಟ್ ಟೀಚರ್‌ಗಳು ಹೀಗೆ ಇರಬೇಕು ಅಂತ ಏನ್ ಏನೋ ಹೇಳಿದರು, ಕೇಳುವಷ್ಟು ತಾಳ್ಮೆಯಿಂದ ಕೇಳಿದೆ. ದೇಶ ಕಾಯುವ ಸೈನಿಕ ಮಕ್ಕಳಿ ಹೇಗೆ ಸಮಯ ಕೊಡುತ್ತಾನೆ? ಮನೆಯಲ್ಲಿ ತಾಯಿ ಒಬ್ಬರೇ ಇರುವಾಗ ಎಂದು ನಾನು ಪ್ರಶ್ನೆ ಮಾಡಿದೆ. ಅದಿಕ್ಕೆ ಟೀಚರ್ ಇಲ್ಲ ಇಲ್ಲ ಅದು ಬೇರೆ ಇದು ಬೇರೆ ಎಂದು ಮಾತನಾಡಿದ್ದರು. ಅಲ್ಲೇ ನನ್ನ ಮಗನಿಗೆ ಹೇಳಿದೆ...ಮೊದಲು TC ತಗೋ ನಾನು ಕಾರ್ಪೊರೆಷನ್ ಸ್ಕೂಲ್‌ಗೆ ಸೇರಿಸುತ್ತೀನಿ ಅಂದೆ' ಎಂದು ದರ್ಶನ್ ಹೇಳಿದ್ದಾರೆ.

ಪ್ರತಿ ಸಲವೂ ವಿಭಿನ್ನ ಆಭರಣ ಧರಿಸಿರುವ ಕಾವ್ಯಾ ಗೌಡ; ಗಂಡನ ದುಡ್ಡಲ್ಲಿ ಜಾಲಿ ಜಾಲಿ ಎಂದು

'ನಾನು ಲಕ್ಷಗಟ್ಟಲೆ ಫೀಸ್ ಕಟ್ಟುವುದು ಅವರು ವಿದ್ಯಾಭ್ಯಾಸ ನೀಡಲಿ ಎಂದು..ಆದರೆ ಅವರು ಮನೆಯಲ್ಲಿಓದಿಸಿ ಅಂತಿದ್ದಾರೆ...ಮನೆಯಲ್ಲಿ ಓದಿಸುವುದಾದರೆ ನಾನು ಯಾಕೆ ಸ್ಕೂಲಿಗೆ ಸಳುಹಿಸಬೇಕು? ನಾನು 1ನೇ ಕ್ಲಾಸ್‌ನಿಂದ 10ನೇ ಕ್ಲಾಸ್‌ನಲ್ಲಿ ಇರುವವರೆಗೂ ನನ್ನ ತಂದೆ ಸ್ಕೂಲ್‌ ಮೀಟಿಂಗ್‌ಗೆ ಬಂದಿಲ್ಲ...ವರ್ಷದ ಕೊನೆಯಲ್ಲಿ ಮಾರ್ಕಸ್‌ ಕಾರ್ಡ್‌ ಪಡೆಯಲು ಅಮ್ಮ ಬರುತ್ತಿದ್ದರು ಏಕೆಂದರೆ ಫೇಲ್ ಆಗುತ್ತಿದ್ದೆ ಎಂದು' ಎಂದಿದ್ದಾರೆ ದರ್ಶನ್. 

click me!