ರಶ್ಮಿಕಾ-ಸಲ್ಮಾನ್ ಖಾನ್ ಸುತ್ತ ಜ್ಯೂನಿಯರ್ ಆರ್ಟಿಸ್ಟ್​​ಗಳಿಗಿಂತಲೂ ಸೆಕ್ಯೂರಿಟಿಗಳೇ ಜಾಸ್ತಿ!

Published : Oct 24, 2024, 07:31 PM ISTUpdated : Oct 24, 2024, 07:37 PM IST
ರಶ್ಮಿಕಾ-ಸಲ್ಮಾನ್ ಖಾನ್ ಸುತ್ತ ಜ್ಯೂನಿಯರ್ ಆರ್ಟಿಸ್ಟ್​​ಗಳಿಗಿಂತಲೂ ಸೆಕ್ಯೂರಿಟಿಗಳೇ ಜಾಸ್ತಿ!

ಸಾರಾಂಶ

ಇತ್ತೀಚೆಗೆ ಸಿಂಗಮ್ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಸಲ್ಮಾನ್ನ್‌ಗೆ ಸುತ್ತಲೂ ಬರೊಬ್ಬರಿ 120 ಜನ ಭದ್ರತಾ ಪಡೆಯಿಂದ ಸೆಕ್ಯೂರಿಟಿ ನೀಡಲಾಗಿತ್ತು. ಪೊಲೀಸರು, ಖಾಸಗಿ ಭದ್ರತಾ ಪಡೆ ಜೊತೆಗೆ ಸಿನಿಮಾ ತಂಡ ಕೂಡ ಬೌನ್ಸರ್​​ಗಳನ್ನ ಅರೇಂಜ್ ಮಾಡಿತ್ತು. ಈ ಭದ್ರತೆಯ ಕೋಟೆಯ ನಡೆವೆಯೇ ಸಲ್ಮಾನ್..


ಬಿಷ್ಣೋಯ್ ಗ್ಯಾಂಗ್​ನಿಂದ ಪ್ರಾಣಭೀತಿ ಎದುರಿಸ್ತಾ ಇರೋ ಬಾಲಿವುಡ್​​ ಟೈಗರ್​ ಸಲ್ಮಾನ್ ಖಾನ್ (Salman Khan) ಸುತ್ತ  ಭದ್ರತೆಯ ಕೋಟೆಯನ್ನೇ ಕಟ್ಟಲಾಗಿದೆ. ಸದ್ಯ ಬಿಗ್ ಬಾಸ್ ಶೂಟಿಂಗ್​ನಲ್ಲರೋ ಸಲ್ಮಾನ್ ಸಿಕಂದರ್ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಬೇಕಿದೆ. ಸಿಕಂದರ್​ನಲ್ಲಿ ಸಲ್ಮಾನ್ ಜೊತೆಯಾಗಿ ನಮ್ಮ ಕಿರಿಕ್ ಕ್ವೀನ್ ರಶ್ಮಿಕಾ (Rashmika Mandanna) ನಟಿಸಬೇಕಿದ್ದು, ರಶ್ಮಿಕಾಗೂ ಈಗ ಟೈಟ್ ಸೆಕ್ಯೂರಿಟಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಸಲ್ಮಾನ್ ಖಾನ್ ಜೊತೆ ರಶ್ಮಿಕಾಗೂ ಟೈಟ್ ಸೆಕ್ಯೂರಿಟಿ, ಸಿಕಂದರ್ ಸಿನಿಮಾ ಸೆಟ್​​ನಲ್ಲಿರೋರಿಗೆಲ್ಲಾ ಪ್ರಾಣಭೀತಿ ಶುರುವಾಗಿದೆ. ಯೆಸ್, ಬಾಲಿವುಡ್​ ಟೈಗರ್ ಸಲ್ಮಾನ್​ ಖಾನ್​ಗೆ ಜೀವಬೆದರಿಕೆ ಇರೋದು ನಿಮಗೆ ಗೊತ್ತೇ ಇದೆ. ಇತ್ತೀಚಿಗೆ ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ದಿಕಿಯನ್ನ ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ಮೇಲೆ ಸಲ್ಮಾನ್ ಸೆಕ್ಯೂರಿಟಿಯನ್ನ ಸಿಕ್ಕಾಪಟ್ಟೆ ಟೈಟ್ ಮಾಡಲಾಗಿದೆ. ಒಂದು ಕಡೆ ಸರ್ಕಾರ ವೈ ಪ್ಲಸ್ ಭದ್ರತೆ ಕೊಟ್ರೆ, ಸಲ್ಮಾನ್ ಖಾಸಗಿ ಭದ್ರತಾ ಪಡೆಯನ್ನೂ ಜೊತೆಗಿಟ್ಟುಕೊಂಡಿದ್ದಾರೆ. ಅತ್ಯಾಧುನಿಕ ಬುಲೆಟ್​ ಪ್ರೂಫ್ ಕಾರ್​ನಲ್ಲಿ ಓಡಾಡ್ತಾ ಇದ್ದಾರೆ.

ಸಾವಿನ ಭಯದಿಂದ ನಡುಗುತ್ತಿರೋ ಸಲ್ಲು, ಅಮ್ಮನ ಕಳ್ಕೊಂಡ ಆತ್ಮೀಯ ಕಿಚ್ಚನಿಗೂ ಹೇಳಲಿಲ್ಲ ಸಂತಾಪ!

ಇನ್ನು, ಇತ್ತೀಚೆಗೆ ಸಿಂಗಮ್ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಸಲ್ಮಾನ್ ಗೆ, ಸುತ್ತಲೂ ಬರೊಬ್ಬರಿ 120 ಜನ ಭದ್ರತಾ ಪಡೆಯಿಂದ ಸೆಕ್ಯೂರಿಟಿ ನೀಡಲಾಗಿತ್ತು. ಪೊಲೀಸರು, ಖಾಸಗಿ ಭದ್ರತಾ ಪಡೆ ಜೊತೆಗೆ ಸಿನಿಮಾ ತಂಡ ಕೂಡ ಬೌನ್ಸರ್​​ಗಳನ್ನ ಅರೇಂಜ್ ಮಾಡಿತ್ತು. ಈ ಭದ್ರತೆಯ ಕೋಟೆಯ ನಡೆವೆಯೇ ಸಲ್ಮಾನ್ ಚಿತ್ರೀಕರಣ ಮಾಡಿಮುಗಿಸಿದ್ರು. 

ಸದ್ಯ ಬಿಗ್ ಬಾಸ್ ಶೂಟಿಂಗ್ ಸೆಟ್​​ನಲ್ಲೂ ಸಲ್ಮಾನ್​ಗೆ ಟೈಟ್ ಸೆಕ್ಯೂರಿಟಿ ನೀಡಲಾಗ್ತಾ ಇದೆ. ಜೊತೆಗೆ ಸದ್ಯದಲ್ಲೇ ಸಲ್ಮಾನ್ ನಟನೆಯ ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಲಿದ್ದು , ಸಿಕಂದರ್ ಟೀಮ್​ ಕೂಡ ಭದ್ರತೆಗೆ ಪ್ರತ್ಯೇಕ ವ್ಯವಸ್ಥೆ ಮಾಡ್ತಾ ಇದೆ.
ಈಗ ಸಲ್ಲು-ರಶ್ಮಿಕಾ ಶೂಟಿಂಗ್ ಸ್ಪಾಟ್‌ನಲ್ಲಿ ಜ್ಯೂನಿಯರ್ ಆರ್ಟಿಸ್ಟ್​​ಗಳಿಗಿಂತ ಸೆಕ್ಯೂರಿಟಿಗಳೇ ಜಾಸ್ತಿ, ಇಡೀ ಸಿಕಂದರ್ ಸಿನಿಮಾ ಟೀಮ್​ಗೆ ಹೈ ಸೆಕ್ಯೂರಿಟಿ ನೀಡಲಾಗಿದೆ. 

ಪೋಷಕರು ಕಲಿಸಿದ ಲೈಫ್ ಲೆಸನ್ ಸೀಕ್ರೆಟ್ ಕೊನೆಗೂ ಬಾಯ್ಬಿಟ್ಟ ನಟಿ ಅದಿತಿ ಪ್ರಭುದೇವ!

ಹೌದು ಸಲ್ಮಾನ್ ಖಾನ್ ಮೇಲೆ ಯಾವಾಗ ಬೇಕಾದ್ರೂ ಅಟ್ಯಾಕ್ ಆಗುವ ಚಾನ್ಸ್ ಇರೋದ್ರಿಂದ , ಇಡೀ ಚಿತ್ರತಂಡ ಭೀತಿಯಲ್ಲಿ ಮುಳುಗಿದೆ. ಸೋ ಸಿಕಂದರ್ ಮೇಕರ್ಸ್ ಇಡೀ ಚಿತ್ರತಂಡಕ್ಕೆ ಸೆಕ್ಯೂರಿಟಿ ಅರೇಂಜ್ ಮಾಡಿದ್ದಾರೆ. ಮೂಲಗಳ ಪ್ರಕಾರ ಶೂಟಿಂಗ್ ಮಾಡುವವರಿಗಿಂತ ಗನ್ ಹಿಡಿದು ಸೆಕ್ಯೂರಿಟಿ ಕೊಡುವವರೇ ಸೆಟ್​​ನಲ್ಲಿ ಜಾಸ್ತಿ ಇರಲಿದ್ದಾರೆ. ಈ ಭದ್ರತೆಯ ಕೋಟೆ ನಡುವೆಯೇ ನಿರ್ದೇಶಕ ಎ,ಆರ್ ಮುರುಗದಾಸ್ ಸಿನಿಮಾ ಶೂಟಿಂಗ್ ಮಾಡಬೇಕಿದೆ.

ಅಸಲಿಗೆ ಸಿಕಂದರ್ ಸಿನಿಮಾದಲ್ಲಿ ಸಲ್ಲುಮಿಯಾಗೆ ನಾಯಕಿಯಾಗೋ ಚಾನ್ಸ್ ಸಿಕ್ಕಾಗ ರಶ್ಮಿಕಾ ಸಖತ್ ಖುಷ್ ಆಗಿದ್ರು. ಸೂಪರ್ ಸ್ಟಾರ್ ಸಲ್ಮಾನ್ ಜೊತೆ ನಟಿಸಿದ್ರೆ ತಾನು ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ನಂ.1 ಆದಂತೆ ಅಂತಲೇ ಎಣಿಸಿದ್ರು. ಆದ್ರೀಗ ಸಲ್ಮಾನ್ ಜೊತೆ ನಟಿಸೋಕೆ ಭಯಭೀಳುವ ಪರಿಸ್ಥಿತಿ ಬಂದಿದೆ. ಶೂಟಿಂಗ್ ಮಾಡೋ ಟೈಮ್​ನಲ್ಲಿ ಯಾರಾದ್ರೂ ಮಾಡಿದ್ರೆ ಏನಪ್ಪಾ ಮಾಡೋದು ಅಂತ ರಶ್ಮಿಕಾಗೆ ಟೆನ್ಶನ್ ಶುರುವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!
Rishab Shetty: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವು ಗುಟ್ಟು ಹಂಚಿಕೊಂಡ ರಿಷಬ್ ಶೆಟ್ಟಿ; ಸೀಕ್ರೆಟ್ ಮೂಟೆಯಲ್ಲಿ ಏನೇನಿದೆ ನೋಡಿ!