ಸ್ಪಂದನಾ ನಿಧನದಿಂದ ಶೋಕಸಾಗರದಲ್ಲಿ ಕರುನಾಡು, ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಆ್ಯಂಬುಲೆನ್ಸ್!

By Suvarna NewsFirst Published Aug 8, 2023, 9:51 PM IST
Highlights

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದಿಂದ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಇದೀಗ ಸ್ಪಂದನಾ ಪಾರ್ಥೀವ  ಶರೀರವನ್ನು ತರಲು ಆ್ಯಂಬುಲೆನ್ಸ್ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆ. ಜೊತೆ ಸ್ಪಂದನಾ ಸಹೋದರ ಹಾಗೂ ಕುಟುಂಬಸ್ಥರು ತಲುಪಿದ್ದಾರೆ.

ಬೆಂಗಳೂರು(ಆ.06) ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಮತ್ತೆ ಸ್ಯಾಂಡಲ್‌ವುಡ್ ಹಾಗೂ ಕರುನಾಡಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಬ್ಯಾಂಕಾಕ್ ಪ್ರವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ ಪಾರ್ಥೀವ ಶರೀರ ಇಂದು ಮಧ್ಯರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದೆ. ಹೀಗಾಗಿ ಸಹೋದರ ರಕ್ಷಿತ್ ಶಿವರಾಂ ಹಾಗೂ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆ್ಯಂಬುಲೆನ್ಸ್ ಕೂಡ ಆಗಮಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಿದೆ. 

ಬ್ಯಾಂಕಾಕ್‌ನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿರುವ ವಿಜಯ್ ರಾಘವೇಂದ್ರ ಕುಟುಂಬ, ಮೃತದೇಹದೊಂದಿದೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಬೆಂಗಳೂರಿನ ಏರ್ ಕಾರ್ಗೋ ಟರ್ಮಿನಲ್ ಪಾರ್ಥೀವ ಶರೀರ ಹೊತ್ತ ವಿಮಾನ ಆಗಮಿಸಲಿದೆ. ಸ್ಪಂದನಾ ಪಾರ್ಥಿವ ಶರೀರ ಬರುವ ಕಾರ್ಗೋ ಟರ್ಮಿನಲ್ ಬಳಿ ಸಿದ್ಧತೆ ಮಾಡಲಾಗಿದೆ. ಎಂಟ್ರಿ ಗೇಟ್ ಬಳಿ‌ ಬ್ಯಾರಿಕೇಡ್ ಹಾಕಿರುವ ಸಿಬ್ಬಂದಿ, ಜನರ ನಿಯಂತ್ರಣಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ.  ರಾತ್ರಿ 11.25 ಕ್ಕೆ  ಥಾಯ್ ಏರ್ ವೇಸ್ 325 ವಿಮಾನ ಬೆಂಗಳೂರಿನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ವಿಜಯ್ ರಾಘವೇಂದ್ರ ಹಾಗೂ ಸ್ನೇಹಿತರು ಲ್ಯಾಂಡ್ ಆದ ನಂತರ ಕಾರ್ಗೋ ಸೆಕ್ಷನ್‌ ನಲ್ಲಿ ಪಾರ್ಥಿವ್ ಶರೀರ ಪಡೆಯಲಿದ್ದಾರೆ. ಕ್ಲಿಯರೆನ್ಸ್ ಸರ್ಟಿಫಿಕೇಟ್, ಕಸ್ಟಮ್ ಕ್ಲಿಯರೆನ್ಸ್ ನಂತರ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಸುಮಾರು 12.30 ಕ್ಕೆ ಪಾರ್ಥಿವ ಶರೀರ ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. 

Latest Videos

ಸ್ಪಂದನಾ ಅವರ ಅಂತ್ಯಸಂಸ್ಕಾರ ಬುಧವಾರ ಮಧ್ಯಾಹ್ನ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಪೂರ್ವಾಹ್ನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತದೆ.

ಸ್ಪಂದನಾ ಅವರ ಅಂತ್ಯಸಂಸ್ಕಾರ ಬುಧವಾರ ಮಧ್ಯಾಹ್ನ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಪೂರ್ವಾಹ್ನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತದೆ.

'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಸ್ಪಂದನಾ !

ಮಂಗಳವಾರ ರಾತ್ರಿಯೇ ಪ್ರಕ್ರಿಯೆಗಳನ್ನೆಲ್ಲಾ ಪೂರೈಸಿ ಥಾಯ್ಲೆಂಡ್‌ ಏರ್‌ಲೈನ್ಸ್‌ನ ವಿಶೇಷ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ಥಾಯ್ಲೆಂಡ್‌ನಲ್ಲಿದ್ದ ವಿಜಯ ರಾಘವೇಂದ್ರ, ಬಿ.ಕೆ. ಶಿವರಾಮ್‌ ಹಾಗೂ ಸೋದರ ರಕ್ಷಿತ್‌ ಶಿವರಾಮ್‌ ಆಗಮನದ ಬಳಿಕ ಮುಂದೆ ನಡೆಸಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮಂಗಳವಾರ ರಾತ್ರಿಯಿಂದಲೇ ವಿಜಯ ರಾಘವೇಂದ್ರ ಹಾಗೂ ಶಿವರಾಮ್‌ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಗಣ್ಯರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.

ಮುದ್ದಿನ ಮಡದಿಗೆ ಕಳೆದ ಬಾರಿ ಬೆಳದಿಂಗಳಾಗಿ ಬಾ ಹಾಡು ಹಾಡಿದ್ದ ವಿಜಯ್‌ ರಾಘವೇಂದ್ರ !

ವಾರದ ಹಿಂದೆ ಸ್ನೇಹಿತರ ಜತೆಗೆ ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಪ್ರವಾಸದುದ್ದಕ್ಕೂ ಆರೋಗ್ಯವಾಗಿದ್ದರು. ಬ್ಯಾಂಕಾಕ್‌ನ ಹಾಲಿಡೇ ಇನ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಸ್ಪಂದನಾ ಭಾನುವಾರ ತಡರಾತ್ರಿ ಮಲಗಿದವರು ಬೆಳಗ್ಗೆ ಎದ್ದಿಲ್ಲ. ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಲೋ ಬಿಪಿ ಜತೆಗೆ ತೀವ್ರ ಹೃದಯಾಘಾತ ಆಗಿದ್ದರಿಂದ ಮಲಗಿದಲ್ಲೇ ಕೊನೆಯುಸಿರೆಳೆದಿದ್ದಾರೆ.

 

click me!