
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಶ್ರೀನಗರ ಕಿಟ್ಟಿ ಜೋಡಿಯಾಗಿ ಅಭಿನಯಿಸುತ್ತಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದ್ದು ಅಂದೇ ಫೋಟೋಶೂಟ್ ಕೂಡ ಮಾಡಿದ್ದಾರೆ. ರಚ್ಚು ಮತ್ತು ಕಿಟ್ಟಿ ವೈಟ್ ಆಂಡ್ ಡೆನಿಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಗ್ರೀನ್ ಮ್ಯಾಟ್ ಜಾಗದಲ್ಲಿ ಫೋಟೋಶೂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಮ್ಯಾ ಜಾಗಕ್ಕೆ ರಚ್ಚು ಓಕೆ ಎಂದು ಕೂಡ ಹೇಳುತ್ತಿದ್ದಾರೆ.
ಡ್ಯಾನ್ಸ್ ಕ್ರೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯ ಮತ್ತು ಶ್ರೀನಗರ ಕಿಟ್ಟಿ ರಚ್ಚು ಕೈ ಹಿಡಿದುಕೊಂಡು ಎತ್ತರ ಇರುವ ಕುರ್ಚಿ ಮೇಲೆ ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ಆಗ ಕುರ್ಚಿ ಮೇಲೆ ರಚಿತಾ ರಾಮ್ ಕಾಲು ಇಡುತ್ತಿದ್ದಂತೆ ಜಾರಿ ಬಿದ್ದಿದ್ದಾರೆ. ತಕ್ಷಣವೇ ಗ್ರಿಪ್ ಕೊಟ್ಟು ಹಿಡಿದಿದ್ದಾರೆ. ಗಾಬರಿ ಆದರೂ ರಚಿತಾ ರಾಮ್ ಕೂಲ್ ಆಗಿ ಹ್ಯಾಂಡಲ್ ಮಾಡಿದ್ದಾರೆ. ಅಲ್ಲಿದ್ದವರು ನಗು ನಗುತ್ತಲೇ ಸಹಾಯ ಮಾಡುತ್ತಾರೆ.ರಚ್ಚು ಶೂ ಹಾಕಿದ್ದಕ್ಕೆ ಸ್ವಲ್ಪ ಸೇಫ್ ಇಲ್ಲ ಅಂದ್ರೆ ತುಂಬಾ ಕಷ್ಟ ಆಗುತ್ತಿತ್ತು, ರಮ್ಯಾ ಜಾಗದಲ್ಲಿ ರಚ್ಚು ನೋಡುವುದಕ್ಕೆ ಖುಷಿಯಾಗುತ್ತಿದೆ, ರಚಿತಾ ಕಿಚ್ಚ ಕಾಂಬಿನೇಷನ್ ಸೂಪರ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಜಯಲಲಿತಾ ಸಮಾಧಿ ಬಳಿ ರಚಿತಾ ರಾಮ್; ದಿಢೀರ್ ಭೇಟಿಗೆ ಕಾರಣವೇನು?
ರಚಿತಾ ಯಾಕೆ?
'ಬಹಳ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಪ್ಲ್ಯಾನ್ ಮಾಡಿದ್ದೆ ಆದರೆ ಸಾಂಗ್ ಆಗಬೇಕಿತ್ತು ಏಕೆಂದರೆ ಸಾಂಗ್ಸ್ ಆಗಿಲ್ಲ ಅಂದ್ರೆ ಸಿನಿಮಾ ಕೂರುವುದಿಲ್ಲ. ಸಾಂಗ್ ಬಂದ್ಮೇಲೆ ಕಥೆ ಬಿಲ್ಡ್ ಮಾಡಿದ್ದು. ರಮ್ಯಾ ಅವರೇ ನಾಯಕಿ ಆಗಬೇಕು ಅನ್ನೋ ಆಸೆ ತುಂಬಾನೇ ಇತ್ತು ನನಗೆ ಆದರೆ ಇಲ್ಲ. ರಮ್ಯಾ ಇಲ್ಲ ಅನ್ನೋದೆ ನನಗೆ ನೋವು ಏಕೆಂದರೆ ಸಂಜು ವೆಡ್ಸ್ ಗೀತಾ ಅವರ ಲೇಬಲ್, ಸಂಪರ್ಕ ಮಾಡಬೇಕು ಅನ್ಕೊಂಡೆ ಆದರೆ ಅವರು ರಾಜಕೀಯದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ರಾಜಕೀಯದಲ್ಲಿ ಅವರು ಮೇಲೆ ಬರಬೇಕು ಅನ್ನೋ ಆಸೆ ಅವರ ಟೈಂ ವೇಸ್ಟ್ ಮಾಡುವುದು ಬೇಡ. ರಮ್ಯಾ ಇಲ್ಲ ಅಂದ್ರೆ ಯಾರು ಅನ್ನೋ ಯೋಚನೆ ಬಂದಿತ್ತು ಆಗ ತ್ರಿಷಾ ಅವರನ್ನು ಸಂಪರ್ಕ ಮಾಡಿದೆ ರಚಿತಾ ಕೂಡ ಕಥೆ ಕೇಳಿ ತುಂಬಾ ಎಕ್ಸೈಟ್ ಆಗಿಬಿಟ್ಟರು..ಕಲಾವಿದರಲ್ಲಿ ಆ ಎಕ್ಸೈಟ್ಮೆಂಟ್ ಬೇಕು ..ಸಿನಿಮಾ ಕಮರ್ಷಿಯಲ್ ಆದ್ರೆ ಮಾತ್ರ ಸಾಲದು ಪಾತ್ರ ಪೋಷಣೆ ಮಾಡಬೇಕು. ನಮ್ಮ ಅನುಕೂಲಕ್ಕೆ ತಕ್ಕಂತೆ ರಚಿತಾ ರಾಮ್ ಡೇಟ್ ಫಿಕ್ಸ್ ಮಾಡಿಕೊಟ್ಟಿದ್ದಾರೆ ಆಕೆ ಒಳ್ಳೆ ಕಲಾವಿದೆ ಖಂಡಿತಾ ಚೆನ್ನಾಗಿ ಅಭಿನಯಿಸುತ್ತಾರೆ' ಎಂದು ಖಾಸಗಿ ಟಿವಿ ಯುಟ್ಯೂಬ್ ಚಾನೆಲ್‌ನಲ್ಲಿ ನಾಗಶೇಖರ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.