ಈಗಲೂ ಚಿರು ಜೊತೆ ಮಾತನಾಡುತ್ತೀನಿ; ಹಾಸ್ಯ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಮೇಘನಾ ರಾಜ್!

Published : Aug 08, 2023, 02:34 PM IST
ಈಗಲೂ ಚಿರು ಜೊತೆ ಮಾತನಾಡುತ್ತೀನಿ; ಹಾಸ್ಯ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಮೇಘನಾ ರಾಜ್!

ಸಾರಾಂಶ

ಚಿರು ಇಲ್ಲೇ ಇದ್ದಾರೆ ನನ್ನ ಧ್ವನಿ ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಮೇಘನಾ ರಾಜ್. ರಾಯನ್ ಕೊಟ್ಟ ಶಕ್ತಿಯಿಂದ ಕೆಲಸ ಮಾಡುತ್ತಿರುವೆ ಎಂದ ನಟಿ.... 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಕಮ್ ಬ್ಯಾಕ್‌ ಸಿನಿ ರಸಿಕರಿಗೆ ದೊಡ್ಡ ಸಿಹಿ ಸುದ್ದಿ. ಪನ್ನಗಾಭರಣ ನಿರ್ದೇಶನ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದರು ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿರುವ ನಟಿ ಒಮ್ಮೆ ನಾನು ಚಿರು ಜೊತೆ ಮಾತನಾಡುತ್ತೀನಿ ಎಂದು ಹೇಳಿದ್ದರು ಆಗ ಸಾಕಷ್ಟು ಟೀಕೆಗಳು ಎದುರಾಗಿತ್ತು. ಏನಿದು ಹಾಸ್ಯ ಮಾಡುತ್ತಿದ್ದಾರೆ ಫೋಟೋ ಮುಂದೆ ನಿಂತು ಮಾತನಾಡಬಹುದು ಎನ್ನುತ್ತಿದ್ದರು. ಹೀಗಾಗಿ ಮೇಘನಾ ಸ್ಪಷ್ಟನೆ ನೀಡಿದ್ದಾರೆ. 

'ಪ್ರತಿ ದಿನ ಚಿರು ಜೊತೆ ಮಾತನಾಡುತ್ತೀನಿ. ಮಾತನಾಡುವುದು ಅಂದ್ರೆ ಎದುರಿಗಿರುವ ವ್ಯಕ್ತಿ ಜೊತೆ ನೇರ ನೇರ ಮಾತನಾಡುವ ರೀತಿ ಅಲ್ಲ ನನ್ನ ತಲೆಯಲ್ಲಿ ನನ್ನ ಮನಸ್ಸಿನಲ್ಲಿ ಚಿರುಗೆ ಏನು ಹೇಳಬೇಕು ಅದನ್ನು ಮಾತನಾಡುವ ರೀತಿ ಹೇಳುವೆ. ಚಿರು ಕೇಳಿಸಿಕೊಳ್ಳುತ್ತಿದ್ದಾರೆ. ಒಂದೊಂದು ಸಲ ಕೋಪ ಬಂದಾಗ ಬೈದಿರುತ್ತೀನಿ ಅದು ಅವರಿಗೆ ಗೊತ್ತಾಗಿರುತ್ತದೆ ಅವರಿಗೆ ಕೇಳಿಸಿರುತ್ತೆ ಅರ್ಥವಾಗುತ್ತದೆ ಅನ್ನೋದು ನನ್ನ ಅನಿಸಿಕೆ. ಕೂತು ಮಾತನಾಡುವ ರೀತಿ ಅಲ್ಲ ಮನಸ್ಸಿನಲ್ಲಿ ಮಾತನಾಡುವುದು' ಎಂದು ಮೇಘನಾ ರಾಜ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಧ್ರುವ ನನ್ನ ಸಂಬಂಧ ಯಾರಿಗೂ ಅರ್ಥವಾಗಲ್ಲ, ಸೊಸೈಟಿ ಬಗ್ಗೆ ಕೇರ್ ಮಾಡಲ್ಲ: ಮೇಘನಾ ರಾಜ್

'ನಾಲ್ಕು  ತಿಂಗಳ ಅಂತರದಲ್ಲಿ ಮರಣ ಮತ್ತು ಜನನ ನೋಡಿದ್ದೀನಿ. ಆ ಸಮಯವನ್ನು ಹೇಗೆ ಎದುರಿಸಿದೆ ಗೊತ್ತಿಲ್ಲ ಆದರೆ ನನಗೆ ಮಗು ಹುಟ್ಟುತ್ತದೆ ನನ್ನ ಎಲ್ಲಾ ಗಮನ ಮಗು ಮೇಲೆ ಇರಬೇಕು ಎಂದು ಮಾತ್ರ ಗೊತ್ತಿತ್ತು. ಮೆಡಿಕಲ್‌ ಆಗಿ ಕೆಲವರು ಹೇಳುತ್ತಾರೆ ಅಥವಾ ನನಗೆ ಅನಿಸುತ್ತಿತ್ತೋ ಗೊತ್ತಿಲ್ಲ ಆ ಸಮಯದಲ್ಲಿ ನನಗೆ ಶಕ್ತಿ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಆದರೆ ತಾಯಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಿನಲ್ಲಿದ್ದರೆ ಗರ್ಭದಲ್ಲಿರುವ ಮಗು ಒಂದು ವಿಶೇಷ ಹಾರ್ಮೋನ್ ರಿಲೀಸ್ ಮಾಡುತ್ತದೆ ಆ ಹಾರ್ಮೋನ್‌ನಿಂದ ನನಗೆ ಶಕ್ತಿ ಬಂತು. ಸಿನಿಮಾರಂಗಕ್ಕೆ ನಾನು ಮತ್ತೆ ಬರಬೇಕು ಸಿನಿಮಾ ಮಾಡಬೇಕು ಜೀವನ ಚೆನ್ನಾಗಿ ನಡೆಸಬೇಕು ಅನ್ನೋದಕ್ಕೆ ಶಕ್ತಿ ಕೊಟ್ಟಿದ್ದು ರಾಯನ್' ಎಂದು ಮೇಘನಾ ರಾಜ್ ಹೇಳಿದ್ದಾರೆ.

ಕೂತ್ಕೊಂಡು ಮಜಾ ನೋಡೋಕೆ ಕಾಯುತ್ತಿದ್ದರು; ಸರ್ಜಾ ಫ್ಯಾಮಿಲಿ ಜೊತೆ ಮನಸ್ತಾಪ ಬಗ್ಗೆ ಮೇಘನಾ ರಾಜ್ ಕ್ಲಾರಿಟಿ!

ಕಾಫಿಗೆ 11 ಸಾವಿರ:

ಇದು ಮೂರ್ನಾಲ್ಕು ವರ್ಷಗಳ ಹಿಂದೆ ನಡೆದಿರುವ ಘಟನೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಜಾಲಿ ಮಾಡಲು ಪ್ಯಾರಿಸ್‌ ಟ್ರಿಪ್ ಮಾಡಿದ್ದಾರೆ. ಅಲ್ಲಿನ ಜನಪ್ರಿಯ ಜಾಗಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಪ್ರತಿ ದಿನ ಸಂಜೆ ಮೇಘನಾ ತಪ್ಪದೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ ಮೇಘನಾ ಕಾಫಿ ಬೇಕು ಎಂದು ಕೇಳಿದಾಗ ಪ್ಯಾರಿಸ್‌ ಸ್ಟ್ರೀಟ್‌ನಲ್ಲಿ ಸಾಕಷ್ಟು ಸೆಫೆಗಳಿರುತ್ತದೆ ಅಲ್ಲಿನ ಒಂದು ಜಾಗದಲ್ಲಿ ಮೇಘನಾ ಕಾಫಿ ಕುಡಿದಿದ್ದಾರೆ. ಕಾಫಿ ಸಿಕ್ಕರೆ ಸಾಕ ಎನ್ನುವ ಮೇಘನಾಗೆ ಸರ್ಗವೇ ಸಿಕ್ಕಂತೆ ಅಗಿದೆ. ಎಂಜಾಯ್ ಮಾಡಿ ರೂಮ್‌ಗೆ ಹೋದ ಮೇಲೆ ಬಿಲ್‌ 11 ಸಾವಿರ ಆಗಿದೆ ಎಂದು ಚಿರು ತಿಳಿಸಿದ್ದಾರೆ. ಶಾಕ್‌ನಲ್ಲಿದ್ದ ಮೇಘನಾ ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಿದಾಗ ನೀನು ಬೇಸರ ಮಾಡಿಕೊಳ್ಳಬಹುದು ಇರಲಿ ನಿನಗೆ ಒಂದು ಕಾಫಿ ಕೊಡಿಸಿರುವ ಖುಷಿ ಇದೆ ಎನ್ನುತ್ತಿದ್ದರಂತೆ. 

'ನಿಜ ಹೇಳಬೇಕು ಅಂದ್ರೆ ಆ ಕಾಫಿಗೆ ಅಷ್ಟು ಹಣ ಎಂದು ನನಗೆ ಗೊತ್ತಿರಲಿಲ್ಲ ಅಲ್ಲಿದ ಹಣ ನೋಡಿಕೊಂಡು ನಾವು ಒಂದು ಲೆಕ್ಕ ಮಾಡಿಕೊಂಡು ಹೋಗಿ ಕಾಫಿ ಕುಡಿದಿದ್ದು. ಕಾಫಿ ಕುಡಿದ ಸ್ವಲ್ಪ ಹೊತ್ತಿಗೆ ಚೆನ್ನಾಗಿಲ್ಲ ಎಂದು ನಾನು ಹೋಟೆಲ್‌ನವರಿಗೆ ಹೇಳಿದೆ ಆದರೂ ತೆಗೆದುಕೊಂಡಿರುವುದಕ್ಕೆ ಕುಡಿದು ಬಂದೆ. ಆಗ ಎಷ್ಟು ಹೇಳಿದರು ಅದನ್ನು ಚಿರು ಕೊಟ್ಟು ಬಂದಿದ್ದಾರೆ. ರೂಮ್‌ಗೆ ಬಂದ ನಂತರ ಎಲ್ಲಿ ಎಷ್ಟು ಖರ್ಚು ಆಗಿದೆ ಅಂತ ನೋಡುವಾದ ಕೆಫೆ ಬಿಲ್‌ ನೋಡಿದ್ದಾರೆ...ಅಲ್ಲಿ ಒಂದು ಕಾಫಿಗೆ 11 ಸಾವಿರ ರೂಪಾಯಿ ಆಗಿತ್ತು. ದೇವರೆ ಒಂದು ಕಪ್ ದಬ್ಬ ಕಾಫಿಗೆ ಅಷ್ಟು ಎಂದು ಕೇಳಿ ಬೇಸರ ಆಯ್ತು. ಆದರೆ ಇರಲಿ ಬಿಡು ಬೇಬಿ ನನಗೆ ಅಲ್ವಾ ಕಾಫಿ ನೀನು ಕೇಳಿದೆ ನಾನು ಕೊಡಿಸಿದೆ' ಎಂದು ಚಿರು ಹೇಳಿದರಂತೆ. ಈ ಘಟನೆಯನ್ನು ಖಾಸಗಿ ಟಿವಿ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ba Ma Harish Son Death: ನಿಶ್ಚಿತಾರ್ಥ ಮಾಡ್ಕೊಂಡಿದ್ದ ಬಾ ಮಾ ಹರೀಶ್‌ ಪುತ್ರ 28ರ ಉಲ್ಲಾಸ್‌ ಗೌಡ ನಿಧನ
Deepika Padukone-Indrajit Lankesh: 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!