ರೊಮ್ಯಾಂಟಿಕ್ ಆಗಿ 'ಓ ವೇದ ಓ ವೇದ' ಎಂದು ಹಾಡಿದ್ದೇಕೆ ಸೋನು ನಿಗಂ..?!

Published : Apr 10, 2025, 05:46 PM ISTUpdated : May 02, 2025, 09:18 AM IST
ರೊಮ್ಯಾಂಟಿಕ್ ಆಗಿ 'ಓ ವೇದ ಓ ವೇದ' ಎಂದು ಹಾಡಿದ್ದೇಕೆ ಸೋನು ನಿಗಂ..?!

ಸಾರಾಂಶ

ಜನಪ್ರಿಯ ಗಾಯಕ ಸೋನು ನಿಗಂ, 'ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ'‌ ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು..

ತಮ್ಮ ಅಮೋಘ ಕಂಠಸಿರಿಯಿಂದ ವಿಶ್ವದಾದ್ಯಂತ ಹೆಸರು ಮಾಡಿರುವ ಜನಪ್ರಿಯ ಗಾಯಕ ಸೋನು ನಿಗಂ, ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ' ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಗಗನ್ ಭಡೇರಿಯಾ ಸಂಗೀತ ನೀಡಿರುವ ಈ ಹಾಡನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರೆ ಬರೆದಿದ್ದಾರೆ. ಇತ್ತೀಚಿಗೆ ಈ ಹಾಡಿನ ಧ್ವನಿಮುದ್ರಣ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣವಾಗಲಿದೆ. ಭೂಷಣ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಶ್ರೀನಿವಾಸ್ ತಿಮ್ಮಯ್ಯ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ  ಭೀಮೇಶ್, ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ಗೋಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಲರ್ ಮಾಫಿಯಾ ಕುರಿತಾದ ಕಥಾಹಂದರ ಹೊಂದಿರುವ ಕಾರಣ ಈ ಚಿತ್ರಕ್ಕೆ 'ವರ್ಣವೇದಂ' ಎಂದು ಶೀರ್ಷಿಕೆ ಇಡಲಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಚಿತ್ರದಲ್ಲಿ ನಾಯಕಿಯ ಹೆಸರು ವರ್ಣ ಹಾಗೂ ನಾಯಕನ ಹೆಸರು ವೇದ ಎಂದು ಹೇಳಿದ್ದಾರೆ‌. ನೈಋತ್ಯ ಹಾಗೂ ಪ್ರತೀಕ್ಷ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೆಸರಾಂತ ಕಲಾವಿದರ ತಾರಾಬಳಗವಿರುವ "ವರ್ಣವೇದಂ" ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣವಿದೆ.

ಅಪ್ಪಾಜಿ ಜೊತೆ ಮನೆಯವ್ರೆಲ್ಲಾ ಒಂದೇ ರೂಮಿನಲ್ಲಿ ಮಲಗ್ತಿದ್ವಿ: ರಾಘವೇಂದ್ರ ರಾಜ್‌ಕುಮಾರ್
 
ಗಗನ್ ಭಡೇರಿಯಾ ಸಂಗೀತ ಸಂಯೋನೆಯಲ್ಲಿ ಆರು ಸುಮಧುರ ಹಾಡುಗಳು ಚಿತ್ರದಲ್ಲಿದ್ದು, ಸೋನು ನಿಗಂ ಸೇರಿದಂತೆ ಜನಪ್ರಿಯ ಗಾಯಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.ಈ ಚಿತ್ರದ ಬಗ್ಗೆ ಕನ್ನಡ ಚಿತ್ರರಸಿಕರು ಹಾಗೂ ಉದ್ಯಮದಲ್ಲಿ ಬಹಳಷ್ಟು ನಿರೀಕ್ಷೆ ಮೂಡಿದೆ. ಈಗ ಈ ಚಿತ್ರಕ್ಕೆ ಸೋನು ನಿಗಂ ಅವರು ಹಾಡಿರೋದ್ರಿಂದ ಸಹಜವಾಗಿಯೇ ಅವರ ಫ್ಯಾನ್ಸ್ ಕೂಡ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ಜೊತೆಗೆ, ಇನ್ನೂ ಹಲವು ಪ್ರಸಿದ್ಧ ಗಾಯಕರು ಈ ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 

ಅಂದಹಾಗೆ, ಇತ್ತೀಚೆಗೆ ಗಾಯಕ ಸೋನು ನಿಗಂ ಅವರಿಗೆ ಕನ್ನಡ ಚಿತ್ರಗಳಿಗೇ ಹಾಡಲು ಹೆಚ್ಚು ಅವಕಾಶಗಳು ಸಿಗುತ್ತಿವೆ ಎನ್ನಬಹುದು. ಕನ್ನಡ ಹಾಗೂ ಹಿಂದಿ ಬಿಟ್ಟು ಬೇರೆ ಭಾಷೆಗಳಲ್ಲಿ ಇತ್ತೀಚೆಗೆ ಸೋನು ನಿಗಮ್ ಅವರು ಹಾಡೋದು ಬಹಳಷ್ಟು ಕಡಿಮೆ ಆಗಿದೆ. ಅದನ್ನು ಸ್ವತಃ ಸೋನು ನಿಗಮ್ ಕೂಡ ಹಲವಾರು ವೇದಿಕೆಗಳಲ್ಲಿ ಹೇಳಿದ್ದಾರೆ. 'ಕನ್ನಡಿಗರು ನನ್ನ ಧ್ವನಿಯನ್ನು ಹೆಚ್ಚು ಇಷ್ಟಪಡುತ್ತಾರೆ, ಕನ್ನಡಿಗರೇ ನನ್ನನ್ನು ಹೆಚ್ಚು ಪಪ್ಯುಲರ್ ಮಾಡಿದ್ದಾರೆ. ಬಹುಶಃ ಕನ್ನಡದೊಂದಿಗೆ ನನಗೆ ಯಾವುದೋ ಜನ್ಮದ ಅನುಭಂಧ ಇದೆ' ಎಂದಿದ್ದಾರೆ ಸೋನು ನಿಗಂ.

ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?