
ಸ್ಯಾಂಡಲ್ವುಡ್ ನಟಿ, ಮಳೆ ಹುಡುಗಿ ಎಂದೇ ಪ್ರಸಿದ್ಧಿ ಪಡೆದಿರುವ ಪೂಜಾ ಗಾಂಧಿ (Pooja Gandhi), ಕನ್ನಡಿಗರ ಹೆಮ್ಮೆ. ಕರ್ನಾಟಕಕ್ಕೆ ಬಂದ್ಮೇಲೆ ಇಷ್ಟಪಟ್ಟು ಕನ್ನಡ ಕಲಿತಿರುವ ಪೂಜಾ, ಸುಂದರವಾಗಿ ಕನ್ನಡ ಮಾತನಾಡೋದಲ್ಲದೆ ಕನ್ನಡ ಹಾಡುಗಳನ್ನು ಹಾಡಿ ಎಲ್ಲರನ್ನು ಬೆರಗು ಗೊಳಿಸ್ತಾರೆ. ಕನ್ನಡ ಭಾಷೆ, ಕರ್ನಾಟಕಕ್ಕಾಗಿ ಅನೇಕ ಕೆಲಸಗಳನ್ನು ಮಾಡ್ತಿರುವ ಪೂಜಾ ಗಾಂಧಿ, ಸಿನಿಮಾದಿಂದ ದೂರವಿದ್ರೂ ಅಭಿಮಾನಿಗಳಿಂದ ದೂರವಾಗಿಲ್ಲ. ಈಗ ಪೂಜಾ ಗಾಂಧಿ, ಜಪಾನಿನಲ್ಲಿ ಕಾಣಿಸಿಕೊಂಡಿದ್ದಾರೆ.
ಜಪಾನ್ (Japan) ನಲ್ಲಿ ವ್ಲಾಗರ್ ಶ್ವೇತಾ (Vlogger Shweta) ವಿಡಿಯೋದಲ್ಲಿ ಕಾಣಿಸಿಕೊಂಡ ಪೂಜಾ ಗಾಂಧಿ, ಜಪಾನ್ ಸೌಂದರ್ಯವನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ ಶ್ವೇತಾ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸದ್ಯ ಜಪಾನ್ ನಲ್ಲಿ ಸಕೂರ ನಡೆಯುತ್ತಿದೆ. ಸುಂದರ ಹೂಗಳು ಅರಳಿ ನಿಂತಿದ್ದು, ಜಪಾನ್ ಸೌಂದರ್ಯವನ್ನು ಈ ಹೂಗಳು ದುಪ್ಪಟ್ಟು ಮಾಡಿವೆ. ಸಕೂರ ಹೂಗಳನ್ನು ಕಣ್ತುಂಬಿಕೊಂಡ ಪೂಜಾ ಗಾಂಧಿ, ಕನ್ನಡದಲ್ಲೇ ಮಾತನಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ಕನ್ನಡತಿ ಇನ್ ಜಪಾನ್ ಇನ್ಸ್ಟಾ ಖಾತೆಯಲ್ಲಿ ಪೂಜಾ ಗಾಂಧಿ ಹಾಗೂ ಶ್ವೇತಾ ಜೊತೆಗಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಮ್ಮ ಜೊತೆ ಯಾರಿದ್ದಾರೆ ನೋಡಿ ಎನ್ನುತ್ತಲೇ ಶ್ವೇತಾ ತಮ್ಮ ವಿಡಿಯೋ ಶುರು ಮಾಡ್ತಾರೆ. ಹಾಯ್ ನಾನು ನಿಮ್ಮ ಪೂಜಾ ಗಾಂಧಿ ಎನ್ನುತ್ತ ತಮ್ಮ ಪರಿಚಯ ಮಾಡಿಕೊಳ್ಳುವ ಪೂಜಾ ಗಾಂಧಿ, ಸಕೂರ ನೋಡಿ ಏನನ್ನಿಸ್ತು ಎಂಬುದನ್ನು ವಿವರಿಸಿದ್ದಾರೆ. ಜಪಾನ್ ಪಿಂಕ್ ಸಿಟಿಯಾಗಿದೆ. ಎಲ್ಲ ಕಡೆ ಹೂಗಳು ಸುಂದರವಾಗಿ ಕಾಣಿಸ್ತಾ ಇದೆ. ಜಪಾನ್ ತುಂಬಾ ಸುಂದರವಾಗಿದ್ದು, ಸ್ವಚ್ಛವಾದ ದೇಶ. ಜನರು ಶಿಸ್ತಿನಿಂದ ಜೀವನ ನಡೆಸ್ತಾರೆ. ಸಿಟಿ ತುಂಬಾ ಕ್ಲೀನ್ ಆಗಿದೆ. ಇನ್ನೂ ನಾಲ್ಕೈದು ದಿನ ಇಲ್ಲೇ ಇರ್ಬೇಕು ಅನ್ನಿಸ್ತಾ ಇದೆ ಎಂದ ಪೂಜಾ ಗಾಂಧಿ, ಕನ್ನಡಿಗರು ಬಂದ್ರೆ ಶ್ವೇತಾ ಅವರನ್ನು ಭೇಟಿ ಮಾಡಿ ಅಂತ ಹೇಳಿದ್ದಾರೆ. ಪೂಜಾ ಗಾಂಧಿ ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಉತ್ತರ ಪ್ರದೇಶದ ಮೀರತ್ ಮೂಲದ ಪೂಜಾ ಗಾಂಧಿ ಈಗ ಸಂಪೂರ್ಣ ಕನ್ನಡತಿಯಾಗಿದ್ದಾರೆ. 2018ರಲ್ಲಿ ದಂಡುಪಾಳ್ಯ 3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪೂಜಾ ಮತ್ತೆ ಬಣ್ಣ ಹಚ್ಚಿಲ್ಲ.
ಶ್ವೇತಾ ಆರಾಧ್ಯ ಚಿಕ್ಕಮಗಳೂರು ಮೂಲದವರಾಗಿದ್ದು, ಅವರು ಕನ್ನಡತಿ ಇನ್ ಜಪಾನ್ ಹೆಸರಿನಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಹೊಂದಿದ್ದಾರೆ. ಜಪಾನಿನ ಸುಂದರ ಸ್ಥಳಗಳು, ಅಲ್ಲಿನ ತಿಂಡಿ, ಅಲ್ಲಿನ ಜೀವನ ಶೈಲಿಯನ್ನು ಕನ್ನಡದಲ್ಲಿ ಪರಿಚಯ ಮಾಡ್ತಾ ಶ್ವೇತಾ ಎಲ್ಲರಿಗೆ ಹತ್ತಿರವಾಗಿದ್ದಾರೆ. ಈಗ ಪೂಜಾ ಗಾಂಧಿ ಜೊತೆ ಕಾಣಿಸಿಕೊಂಡ ಶ್ವೇತಾರನ್ನು ಬಳಕೆದಾರರು ಮತ್ತಷ್ಟು ಇಷ್ಟಪಟ್ಟಿದ್ದಾರೆ. ಇಬ್ಬರು ಕನ್ನಡತಿಯರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಪೂಜಾ ಗಾಂಧಿ ಕನ್ನಡ ಹಾಗೂ ಶ್ವೇತಾ ನಗುವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಮಳೆ ಹುಡುಗಿ ಜೊತೆ ಚಿಕ್ಕಮಗಳೂರಿನ ಮಳೆ ಬೆಡಗಿ ಅಂತ ಕಮೆಂಟ್ ಹಾಕಿದ್ದಾರೆ.
ಜಪಾನ್ ಸಕೂರ ವಿಶೇಷ : ಜಪಾನ್ನಲ್ಲಿ ಸಕುರಾ ನಡೆಯುತ್ತಿದೆ. ಸಕುರ ಅಂದ್ರೆ ಚೆರ್ರಿ ಹೂ. ಇವು ತಮ್ಮ ಬೆರಗುಗೊಳಿಸುವ, ಸೂಕ್ಷ್ಮ ಮತ್ತು ಕ್ಷಣಿಕ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿವೆ. ಇವು ಜಪಾನಿಗರಿಗೆ ಕೇವಲ ಸುಂದರವಾದ ಹೂಗಳಲ್ಲ. ಸಕುರಾ ಜಪಾನ್ನ ಇತಿಹಾಸ, ಸಂಸ್ಕೃತಿ ಜೊತೆ ಆಳವಾದ ಸಂಬಂಧವನ್ನು ಹೊಂದಿದೆ. ಸಕುರಾ ಸಾಮಾನ್ಯವಾಗಿ ಒಂದು ವಾರ ಮಾತ್ರ ಸಂಪೂರ್ಣವಾಗಿ ಅರಳುತ್ತದೆ. ಜಪಾನ್ನ ಪ್ರಮುಖ ದ್ವೀಪ ಪ್ರದೇಶದಲ್ಲಿ ಈ ಮಾಂತ್ರಿಕ ಕ್ಷಣವನ್ನು ಮಾರ್ಚ್ ಮತ್ತು ಮೇ ಆರಂಭದ ನಡುವೆ ಕಣ್ತುಂಬಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.