
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಕರಿಯರ್‌ನಲ್ಲಿ ಬ್ರೇಕ್ ತಂದುಕೊಟ್ಟ ಚಿತ್ರವೇ ಮೊಗ್ಗಿನ ಮನಸ್ಸು. ಈ ಚಿತ್ರದಲ್ಲಿ ರಾಧಿಕಾ ಜೋಡಿಯಾಗಿ ನಟಿಸಲು ಮೊದಲು ಅವಕಾಶ ಪಡೆದುಕೊಂಡಿದ್ದು ಕಿರುತೆರೆ ನಟ ಸ್ಕಂದಾ ಅಶೋಕ್ ಆದರೆ ಈ ಒಂದು ಕಾರಣದಿಂದ ಅವಕಾಶ ಕಳೆದುಕೊಂಡು. ಹಾಗಿದ್ರೆ ಅವಕಾಶ ಯಶ್ ಪಾಲಾಗಿದ್ದು ಹೇಗೆ?
'ನನ್ನದು ರೈತಾಪಿ ಕುಟುಂಬ..ಕಾಫಿ ತೋಟ ಮೆಣಸು ತೋಟವಿತ್ತು ಸುಮಾರು ವರ್ಷಗಳಿಂದ ಅನದನು ಮುಂದುವರೆಸಿಕೊಂಡು ಬರುತ್ತಿದ್ದೆ. ಇದನ್ನು ಹೊರತು ಪಡಿಸಿ ಏನಾದರೂ ಮಾಡಬೇಕು ಎಂದಾಗ, 17 ವರ್ಷವಿದ್ದಾಗ ನನ್ನ ಫ್ರೆಂಡ್ ಫೋಟೋಶೂಟ್ ಮಾಡಿದ. ಆತ ಚಿಕ್ಕಮಗಳೂರಿನವರು ಆದರೆ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಅವರ ತಾಯಿನೇ ನಟಿ ತ್ರಿಷಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದು. ಅವರ ಆಫೀಸ್‌ಗೆ ಒಮ್ಮೆ ಮಲಯಾಳಂ ನೋಟ್ ಬುಕ್ ಚಿತ್ರದ ಡೈರೆಕ್ಟ್ ಬಂದಿದ್ದು ಆಗ ನನ್ನ ಫೋಟೋವನ್ನು ನೋಡಿ ಇವನೇ ಹೀರೋ ಆಗಿ ಬೇಕು ಎಂದಿದ್ದಕ್ಕೆ ಮನೆಯವರನ್ನು ಒಪ್ಪಿಸಿ ಮೊದಲ ಸಿನಿಮಾ ಮಾಡಿದ್ದು' ಎಂದು ಸಂದರ್ಸನವೊಂದರಲ್ಲಿ ಸ್ಕಂದಾ ಮಾತನಾಡಿದ್ದಾರೆ.
ಹೊಸ ಮನೆ ಗೃಹಪ್ರವೇಶ ಮಾಡಿದ ಮೇಘನಾ ರಾಜ್
'ಮೊಗ್ಗಿನ ಮನಸ್ಸು ಸಿನಿಮಾ ಕೂಡ ಅದೇ ಬ್ಯಾಕ್‌ಗ್ರೌಂಡ್‌ನಲ್ಲಿ ಇತ್ತು ಅಂತ ಯಶ್ ಮಾಡಿರುವ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ಆದರೆ ಅದೇ ಸಮಯದಲ್ಲಿ ನನಗೆ ಅಕ್ಸಿಡೆಂಟ್ ಆಗಿ ಕಾಲು ಐದು ಕಡೆ ಮುರೀತು ಹೀಗಾಗಿ ಆ ಸಿನಿಮಾವನ್ನು ಮಾಡುವುದಕ್ಕೆ ಆಗಿರಲಿಲ್ಲ. ನನಗೆ ಕನ್ನಡ ಬಿಟ್ಟರೆ ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದಿದ್ದರಿಂದ ಇಂಗ್ಕಿಷ್ ಅಷ್ಟೇ ಬರುತ್ತಿತ್ತು. ಕನ್ನಡ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಯಾಕೆ ಕಲಿಯಬೇಕು ಅಂತ ನನ್ನ ತಲೆಯಲ್ಲಿ ಇತ್ತು ಆದರೆ ಸಿನಿಮಾ ಮಾಡುವಾಗ ಕಲಿಯಬೇಕು' ಎಂದು ಸ್ಕಂದಾ ಅಶೋಕ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.