ಹಲವರಿಗೆ ಗೊತ್ತಿಲ್ಲ, ಡಾ ರಾಜ್‌ ಒಂದು ಸಿನಿಮಾ ನಿರ್ಮಾಣ ಮಾಡಿದ್ರು; ಯಾವುದು ಆ ಸಿನಿಮಾ?

By Shriram Bhat  |  First Published Nov 13, 2024, 4:07 PM IST

ಡಾ ರಾಜ್‌ಕುಮಾರ್ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದ ಗುರುಗಳು ಹಿರಿಯ ನಟ ಬಾಲಣ್ಣ ಎಂಬುದು ಬಹಳಷ್ಟು ಜನರಿಗೆ ಗೊತ್ತು. ಡಾ ರಾಜ್‌ಕುಮಾರ್ ಹಾಗೂ ಬಾಲಣ್ಣ ಒಟ್ಟಾಗಿ ಧರ್ಮದರ್ಶಿ, ಅಣ್ಣ ತಂಗಿ. ನಂದ ಗೋಕುಲ ಸೇರಿದಂತೆ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಹಿರಿಯ ನಟ ಬಾಲಣ್ಣ ಹಾಗು ಅಣ್ಣಾವ್ರು ಜೊತೆಯಲ್ಲಿ ನಟಿಸಿದ್ದಾರೆ.. ಜೊತೆಗೆ.. 


ಡಾ ರಾಜ್‌ಕುಮಾರ್ (Dr Rajkumar) ಅವರು ನಟ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲೂ ಕನ್ನಡದ ಮೆರು ನಟ, ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿರುವ ನಟ ಡಾ ರಾಜ್‌ಕುಮಾರ್‌ ಅವರು ಗಾಯಕರೂ ಹೌದು. 'ಜೀವನ ಚೈತ್ರ' ಚಿತ್ರದ 'ನಾದಮಯ ಈ ಲೋಕವೆಲ್ಲಾ ಹಾಡಿಗೆ ಡಾ ರಾಜ್‌ಕುಮಾರ್ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಅದರೆ, ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಅದು ಡಾ ರಾಜ್‌ಕುಮಾರ್ ಅವರು ಚಿತ್ರ ನಿರ್ಮಾಪಕರೂ ಆಗಿದ್ದರು. 

ಹೌದು, ಡಾ ರಾಜ್‌ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮನವರು (Parvathamma Rajkumar) ಕನ್ನಡದ ಖ್ಯಾತ ನಿರ್ಮಾಪಕರು, ಬರೋಬ್ಬರಿ 80ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಅವುಗಳಲ್ಲಿ ಬಹಳಷ್ಟು ಸೂಪರ್ ಹಿಟ್ ಚಿತ್ರಗಳೂ ಇವೆ. ಆದರೆ ಡಾ ರಾಜ್‌ಕುಮಾರ್ ನಟರು ಮಾತ್ರ, ನಿರ್ಮಾಣಕ್ಕೆ ಕೈ ಜೋಡಿಸಿರಲಿಲ್ಲ ಎಂದೇ ಬಹಳಷ್ಟು ಜನರು ಭಾವಿಸಿದ್ದಾರೆ. ಆದರೆ ಅದು ಅಪ್ಪಟ ಸುಳ್ಳು!

Tap to resize

Latest Videos

undefined

ಈ ಬಾಲಣ್ಣ ನಿಜವಾಗ್ಲೂ ಭಾರತದಲ್ಲಿ ಇರಬಾರದಿತ್ತು ಅಂದಿದ್ರಂತೆ ಡಾ ರಾಜ್‌ಕುಮಾರ್!

ಡಾ ರಾಜ್‌ಕುಮಾರ್ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದ ಗುರುಗಳು ಹಿರಿಯ ನಟ ಬಾಲಣ್ಣ (ಬಾಲಕೃಷ್ಣ) ಎಂಬುದು ಈಗಾಗಲೇ ಬಹಳಷ್ಟು ಜನರಿಗೆ ಗೊತ್ತು. ಡಾ ರಾಜ್‌ಕುಮಾರ್ ಹಾಗೂ ಬಾಲಣ್ಣ ಒಟ್ಟಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧರ್ಮದರ್ಶಿ, ಅಣ್ಣ ತಂಗಿ. ನಂದ ಗೋಕುಲ ಸೇರಿದಂತೆ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಹಿರಿಯ ನಟ ಬಾಲಣ್ಣ ಹಾಗು ಅಣ್ಣಾವ್ರು ಜೊತೆಯಲ್ಲಿ ನಟಿಸಿದ್ದಾರೆ. ಹಾಗೇ, 'ರಣಧೀರ ಕಂಠೀರವ' ಚಿತ್ರದಲ್ಲಿ ಕೂಡ ಬಾಲಣ್ಣ-ಡಾ ರಾಜ್‌ ಒಟ್ಟಿಗೇ ನಟಿಸಿದ್ದಾರೆ. 

ಈ 'ರಣಧೀರ ಕಂಠೀರವ' ಚಿತ್ರವೇ ಡಾ ರಾಜ್‌ಕುಮಾರ್ ನಿರ್ಮಾಪಕರಾಗಿರುವ ಸಿನಿಮಾ. ಅಂದರೆ, 1960 ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾವನ್ನು ಡಾ ರಾಜ್‌ಕುಮಾರ್ ಮಾತ್ರ ನಿರ್ಮಾಣ ಮಾಡಿಲ್ಲ, ಬದಲಿಗೆ ಬಾಲಣ್ಣ ಜೊತೆ ಡಾ ರಾಜ್, ಜಿವಿ ಅಯ್ಯರ್, ನರಸಿಂಹರಾಜು  ಈ ನಾಲ್ಕು ಜನರು ನಿರ್ಮಾಪಕರು. ಆದರೆ, ಸಿನಿಮಾ ಬಿಡುಗಡೆ ಬಳಿಕ ಈ ನಾಲ್ಕು ಜನರಲ್ಲಿ ಲಾಭಾಂಸ ಹಂಚಿಕೆ ವಿಷಯದಲ್ಲಿ ಮನಸ್ತಾಪ ಉಂಟಾಗಿ ಮತ್ತೆ ಅವರು ಒಂದಾಗಿ ಸಿನಿಮಾ ನಿರ್ಮಾಣ ಮಾಡಲಿಲ್ಲ ಎನ್ನಲಾಗಿದೆ. 

ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್‌ ಮಾಡಿದ್ದೇನು?

ಆದರೆ, ಅಂದು ಜನಪ್ರಿಯತೆ ತುಟ್ಟತುದಿಗೇರಿ ಸೂಪರ್ ಸ್ಟಾರ್ ಆಗಿದ್ದ ಡಾ ರಾಜ್‌ಕುಮಾರ್ ಅವರೊಬ್ಬರೇ ಸ್ವತಃ ಚಿತ್ರ ನಿರ್ಮಾಣ ಮಾಡಬಹುದಿತ್ತು. ಆದರೆ ಡಾ ರಾಜ್‌ಕುಮಾರ್ ಆಪ್ತರು ಹೇಳುವ ಪ್ರಕಾರ, ಅಣ್ಣಾವ್ರಿಗೆ ವ್ಯವಹಾರ ಜ್ಞಾನವಾಗಲೀ ಅಥವಾ ಹಣಕಾಸಿನ ಮಾತುಕತೆ ನಡೆಸುವ ಜಾಣ್ಮೆಯಾಗಲೀ ಇರಲೇ ಇಲ್ಲ. ನಟನೆಯಲ್ಲಿ ಎತ್ತಿದ ಕೈ ಆಗಿದ್ದ ಅವರಿಗೆ ನಟನೆ ಬಿಟ್ಟು ವ್ಯವಹಾರ ಮಾಡುವುದರಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲವಂತೆ. 

ಆದರೆ, ಡಾ ರಾಜ್‌ಕುಮಾರ್ ಪತ್ನಿ ಪಾರ್ವತಮ್ಮನವರಿಗೆ ವ್ವವಹಾರ ಜಾಣ್ಮೆ ಹಾಗೂ ಸಿನಿಮಾ ನಿರ್ಮಾಣದ ಐಡಿಯಾ ಸಿದ್ಧಿಸಿತ್ತು. ಹೀಗಾಗಿ ಡಾ ರಾಜ್‌ಕುಮಾರ್ ಚಿತ್ರಗಳೂ ಸೇರಿದಂತೆ, ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಬಹಳಷ್ಟು ಚಿತ್ರಗಳನ್ನು ಪಾರ್ವತಮ್ಮನವರು ಯಶಸ್ವಿಯಾಗಿ ನಿರ್ಮಿಸಿ ಅದರಲ್ಲಿ ಸಕ್ಸಸ್ ಕೂಡ ಕಂಡರು. ಆದ್ದರಿಂದ ಅವರನ್ನು ಅನ್ನದಾತೆ, ಮಹಾಮಾತೆ ಎಂದೇ ಕನ್ನಡ ಚಿತ್ರರಂಗ ಗುರುತಿಸುತ್ತದೆ. 

ಸಿಹಿಕಹಿ ಚಂದ್ರುಗೆ ಶಂಕರ್‌ ನಾಗ್ ಹೇಳಿದ್ದ ಗುಟ್ಟೇನು; ಕೊಳ್ಳಿ ಇಟ್ಟಿದ್ದು ಯಾರು ಅಯ್ಯೋ ಶಂಕ್ರಣ್ಣ!

ಒಟ್ಟಿನಲ್ಲಿ ಹೇಳುಬೇಕು ಎಂದರೆ, ಡಾ ರಾಜ್‌ಕುಮಾರ್ ಅವರು ಒಮ್ಮೆ ಚಿತ್ರ ನಿರ್ಮಾಣದ ಜವಾಬ್ದಾರಿ ಸಹ ಹೊತ್ತು ನೋಡಿದ್ದಾರೆ. ಆದರೆ ಅದು ಅವರ ಕೈ ಹಿಡಿಯಲಿಲ್ಲ, ಅದನ್ನು ಅವರೂ ಕೂಡ ಕೈ ಹಿಡಿದು ಮುಂದಕ್ಕೆ ನಡೆಸಲಿಲ್ಲ. ಬದಲಿಗೆ, ತಮ್ಮ ಪತ್ನಿ ಪಾರ್ವತಮ್ಮನವರಿಗೆ ನಿರ್ಮಾಪಕಿಯಾಗಿ ನಿಲ್ಲಲು ನೈತಿಕ ಸಹಾಯ ಮಾಡಿದರು. ಪಾರ್ವತಮ್ಮನವರು ಯಶಸ್ವೀ ನಿರ್ಮಾಪಕಿಯಾಗಿ ಕನ್ನಡ ಸಿನಿಮಾರಂಗದಲ್ಲಿ ನೆಲೆನಿಂತು ಖ್ಯಾತ ನಿರ್ಮಾಪಕಿ ಎನಿಸಿದರು.

click me!