ಇನ್‌ಸ್ಟಾಗ್ರಾಮ್‌ ತುಂಬಾ ಅಕ್ಕ ತಂಗಿ ಸೆಲೆಬ್ರಿಟಿಗಳ ಡ್ಯಾನ್ಸ್ ವೈರಲ್

By Asianet Kannada  |  First Published Jun 3, 2021, 4:37 PM IST

ಇನ್‌ಸ್ಟಾಗ್ರಾಂನಲ್ಲಿ ಹೊಸದೊಂದು ಟ್ರೆಂಡ್ ಸಖತ್‌ ಪಾಪ್ಯುಲರ್ ಆಗ್ತಿದೆ. ಅದು ಅಕ್ಕ ತಂಗಿಯರ ಡ್ಯಾನ್ಸ್. ಈ ಸೆಲೆಬ್ರಿಟಿಗಳು ಯಾರ್ಯಾರು, ಅವ್ರು ಯಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ, ಆ ಡ್ಯಾನ್ಸ್ ಹೇಗಿತ್ತು..
 


ಇನ್‌ಸ್ಟಾಗ್ರಾಂನಲ್ಲಿ ಹೊಸದೊಂದು ಟ್ರೆಂಡ್ ಸಖತ್‌ ಪಾಪ್ಯುಲರ್ ಆಗ್ತಿದೆ. ಅದು ಅಕ್ಕ ತಂಗಿಯರ ಡ್ಯಾನ್ಸ್. ಸೆಲೆಬ್ರಿಟಿಗಳೆಲ್ಲ ತಮ್ಮ ತಂಗಿ ಅಥವಾ ಅಕ್ಕಂದಿರ ಜೊತೆಗೆ ವೆಸ್ಟರ್ನ್ ಮ್ಯೂಸಿಕ್‌ಗೆ ಸ್ಟೆಪ್ಸ್ ಹಾಕಿದ್ರೆ, ಸಹೋದರಿ ಇಲ್ಲದ ಕೆಲವರು ತನ್ನ ಸೀರಿಯಲ್‌ ಸಿಸ್ಟರ್‌ ಜೊತೆಗೆ ಡ್ಯಾನ್ಸ್‌ ಮಾಡಿ ಖುಷಿ ಪಟ್ಟಿದ್ದಾರೆ. ಈ ಸೆಲೆಬ್ರಿಟಿಗಳು ಯಾರ್ಯಾರು, ಅವ್ರು ಯಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ, ಆ ಡ್ಯಾನ್ಸ್ ಹೇಗಿತ್ತು..

1. ಶಾನ್ವಿ ಶ್ರೀವಾತ್ಸವ್ ವಿದಿಷಾ ಶ್ರೀವಾತ್ಸವ್‌
ಬಾಂಬೆ ಹುಡುಗಿ ಆದ್ರೂ ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತಾಡೋ ಶಾನ್ವಿ ಶ್ರೀವಾತ್ಸವ್ ಪಡ್ಡೆಗಳ ನಿದ್ದೆ ಕೆಡಿಸೋದ್ರಲ್ಲಿ ಎಕ್ಸ್‌ಪರ್ಟ್. ಈಕೆ ಮಾಲ್ಡೀವ್ಸ್‌ನಲ್ಲಿ ಟೂ ಪೀಸ್‌ನಲ್ಲಿ ಕಾಣಿಸಿಕೊಂಡು ಹಾಟ್‌ ಹಾಟ್‌ ಫೋಟೋ ನೋಡಿ ಎದೆಬಡಿತ ಹೆಚ್ಚಿಸಿಕೊಂಡವರು ಅದೆಷ್ಟು ಹುಡುಗರೋ. ಆಮೇಲೆ ಸೈಲೆಂಟ್‌ ಹುಡುಗಿಯಾಗಿದ್ದ ಶಾನ್ವಿ ಈಗ ತಂಗಿ ಜೊತೆಗೆ ಸಖತ್‌ ಸೆಕ್ಸಿಯಾಗಿ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದಾರೆ. 'ಮೈ ಬೆಸ್ಟಿ, ಯೂ ಬೆಸ್ಟಿ' ಸಾಂಗ್‌ಗೆ ವಿದಿಶಾ ಜೊತೆಗೆ ಸಖತ್‌ ಲೈವ್ಲೀ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ನಿಮ್ ಬೆಸ್ಟಿ ಸಿಬ್ಲಿಂಗ್ ಜೊತೆಗೆ ಹೀಗೇ ಡ್ಯಾನ್ಸ್ ಮಾಡಿ ಅಂತ ಉಳಿದ ಹುಡುಗೀರಿಗೂ ಕರೆ ಕೊಟ್ಟಿದ್ದಾರೆ. ನೂರಾರು ಜನ ಈ ಡ್ಯಾನ್ಸ್ ಗೆ ಕ್ಲಾಪ್ ಮಾಡಿದ್ದಾರೆ. ಹಿಂಗೇ ಆಗಾಗ ಡ್ಯಾನ್ಸ್ ವೀಡಿಯೋ ಅಪ್ ಲೋಡ್ ಮಾಡ್ತಾ ಇರಿ ಅನ್ನೋ ಬೇಡಿಕೆಗಳೂ ಸಾಕಷ್ಟು ಬಂದಿವೆ. ಜೊತೆಗೆ ಇದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವಿದಿಷಾ ನೆಕ್ಸ್ಟ್ ಸಿನಿಮಾ ಫೀಲ್ಡ್‌ಗೆ ಬಂದರೂ ಆಶ್ಚರ್ಯ ಇಲ್ಲ. 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Shanvi sri (@shanvisri)

 

2. ಮೇಘಾ ಶೆಟ್ಟಿ ಹಾರ್ದಿಕಾ ಶೆಟ್ಟಿ
'ಜೊತೆ ಜೊತೆಯಲಿ' ಹುಡುಗಿ ಮೇಘಾ ಶೆಟ್ಟಿ ಡ್ಯಾನ್ಸ್ ಮಾಡಿದ್ರೆ ಹೇಗಿರುತ್ತೆ ಅನ್ನೋದನ್ನ ತಿಳ್ಕೊಳ್ಳಬೇಕಾದ್ರೆ 'ಕೇಳು ಶಿವ' ಆಲ್ಬಂ ನೋಡಬೇಕು. 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಅಷ್ಟು ಮುಗ್ಧ, ಮುದ್ದು ಹುಡುಗಿಯಾಗಿ ಕಾಣೋ ಮೇಘಾ ಈ ಆಲ್ಬಂನಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಚೆನ್ನಾಗಿ ಡ್ಯಾನ್ಸೂ ಮಾಡಿದ್ದಾರೆ. ಆದರೆ ತಂಗಿ ಜೊತೆಗೆ ಡ್ಯಾನ್ಸ್ ಮಾಡುವಾಗ ಮಾತ್ರ ಬಹಳ ಸಿಂಪಲ್ಲಾಗಿ ಮನೆ ಮಗಳ ಹಾಗೆ ಕಾಣಿಸಿಕೊಂಡಿದ್ದಾರೆ. ಈ ತ್ರಿಬ್ಬಲ್ ರೈಡಿಂಗ್ ಹೀರೋಯಿನ್ ಡ್ಯಾನ್ಸ್ ನೋಡಿ, ಈಕೆನೇ ಮೇಘಾ ಶೆಟ್ಟಿನಾ ಅಂತ ಕೇಳ್ದೋರೂ ಇದ್ದಾರೆ. ಆದರೆ ತಾನು ಹೀಗೆ ಸಿಂಪಲ್ಲಾಗೂ ಇರಬಲ್ಲೆ, ತಂಗಿ ಜೊತೆಗೆ ಡ್ಯಾನ್ಸೂ ಮಾಡಬಲ್ಲೆ ಅನ್ನೋದನ್ನು ಈ ವೀಡಿಯೋ ಮೂಲಕ ಹೇಳಿದ್ದಾರೆ ಮೇಘಾ ಶೆಟ್ಟಿ.

 

 

ಮಾಧವನ್ ನೆಟ್‌ ವರ್ತ್‌ ಎಷ್ಟು ಗೊತ್ತಾ? ನಟನ ಆಸ್ತಿಯ ವಿವರ ಇಲ್ಲಿದೆ! ...
 

3. ಚೈತ್ರಾ ವಾಸುದೇವ್ - ಚಂದನಾ ವಾಸುದೇವ್
ಚೈತ್ರಾ ವಾಸುದೇವ್ ಆಂಕರ್ ಆಗಿ ಗುರುತಿಸಿಕೊಂಡವರು. ಬಿಗ್‌ ಬಾಸ್ ಮನೆಗೂ ಎಂಟ್ರಿ ಕೊಟ್ಟು ಸೈ ಅನಿಸಿಕೊಂಡವರು. ಸಖತ್ತಾಗಿ ಫಿಗರ್‌ ಮೈಂಟೇನ್ ಮಾಡಿರೋ ಈಕೆ ಕಲರ್‌ಫುಲ್ ಉಡುಗೆಯಲ್ಲಿ ಚಂದ ಕಾಣೋದು ಸುಳ್ಳಲ್ಲ. ಈಗ ಈ ಹುಡುಗಿ ತನ್ನ ತಂಗಿ ಚಂದನಾ ವಾಸುದೇವನ್ ಜೊತೆಗೆ ಕುರ್ತಾ, ಕೋಟ್ ಎಲ್ಲ ಹಾಕ್ಕೊಂಡು ಕುಣಿದಿದ್ದಾರೆ. ಈ ಕ್ಯೂಟ್ ವೀಡಿಯೋಗೆ ಜನ ಶಾಭಾಷ್ ಅಂದಿದ್ದಾರೆ.

 

 

ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ನಟಿ ಮಲೈಕಾ ಅರೋರಾ! ...
 

4. ನೇಹಾ ಗೌಡ-ಸೋನು ಗೌಡ
ನೇಹಾ ಗೌಡ ತಂಗಿ, ಸೋನು ಗೌಡ ಅಕ್ಕ ಅಂದ್ರೆ ಯಾರೂ ನಂಬಲ್ಲ. ಆದರೆ ಅದು ನಿಜ. ಈಗ ಈ ಅಕ್ತಂಗೀರು ತಾವು ಚಿಕ್ಕೋರಾಗಿದ್ದಾಗಿನ ಹಿಪಾಪ್ ಡ್ಯಾನ್ಸ್ ವೀಡಿಯೋದ ಜೊತೆಗೆ ದೊಡ್ಡೋರಾದ್ಮೇಲಿನ ವೀಡಿಯೋವನ್ನೂ ಸೇರಿಸಿ ಅಪ್ ಲೋಡ್ ಮಾಡಿದ್ದಾರೆ. ಏನ್ ಚಂದ ಕುಣಿದಿದ್ದಾರೆ ಅಂದ್ರೆ, ನಿಮ್ಗೆ ನೋಡದೇ ವಿಧಿ ಇಲ್ಲ. 

 

ಇದಕ್ಕಿಂತ ಮಜಾ ಅಂದ್ರೆ ಸೀರಿಯಲ್‌ನ ಅಕ್ಕ ತಂಗಿ ಗೌತಮಿ ಜಾಧವ್ ಹಾಗೂ ಪ್ರಿಯಾಂಕಾ ರಿಯಲ್‌ ಲೈಫ್ ಅಕ್ತಂಗೀರಿಗೆ ಕಡಿಮೆ ಇಲ್ಲದಂಗೆ ವೀಡಿಯೋ, ಫೋಟೋ ಅಪ್ ಲೋಡ್ ಮಾಡ್ತಿದ್ದಾರೆ. ಸೀರಿಯಲ್‌ನಲ್ಲಿ ಇವ್ರಿಬ್ಬರದು ಜಗಳಾಡೋ ಪಾತ್ರಗಳಾದರೂ ರಿಯಲ್‌ನಲ್ಲಿ ಒಳ್ಳೆ ಅಕ್ಕ ತಂಗೀರ ಥರ ಇದ್ದಾರೆ. 

 

 

 

ಕೊರೋನಾ ಭಯದಿಂದ ಮಗಳಿಗೆ ಭಾರತ ಬಿಡಲು ಒತ್ತಾಯಿಸುತ್ತಿದ್ದಾರೆ ಜಾಕ್ವೆಲಿನ್ ಪೋಷಕರು! ...
 

click me!