ಗಂಡನ ಜೊತೆ ಮಾವಿನ ಮರ ಹತ್ತಿದ ಅಮೂಲ್ಯ

By Suvarna News  |  First Published Jun 3, 2021, 12:55 PM IST
  • ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಲಾಕ್‌ಡೌನಲ್ಲಿ ಏನ್ಮಾಡ್ತೀದ್ದಾರೆ ಗೊತ್ತಾ ?
  • ಗಂಡನ ಜೊತೆ ಮರ ಹತ್ತಿ ಮಾವಿನ ಹಣ್ಣು ಕೊಯ್ತಿದ್ದಾರೆ..! ವಿಡಿಯೋ ನೋಡಿ

ಕೊರೋನಾ ಎರಡನೇ ಅಲೆಯ ನಂತರ ಲಾಕ್‌ಡೌನ್ ಕಾರಣ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲೇ ಇದ್ದಾರೆ. ನಟ, ನಟಿಯರು ಮನೆಯೊಳಗೆ ಬೆಚ್ಚಗೆ ಕೂತು ಬಿಟ್ಟಿದ್ದಾರೆ. ಮನೆ, ಫಾರ್ಮ್‌ ಹೌಸ್ ಅಂತ ಒಂದೊಂದು ಕಡೆ ಸೇರಿದ್ದಾರೆ ಸ್ಟಾರ್ಸ್.

ಈ ನಡುವೆ ಹೂಮಳೆ ಹುಡಗಿ ಅಮೂಲ್ಯ ಏನ್ ಮಾಡ್ತಿದ್ದಾರೆ ? ನಟನೆಯಿಂದ ಸ್ವಲ್ಪ ದೂರ ಉಳಿದಿರೋ ಸ್ಯಾಂಡಲ್‌ವುಡ್ ಚೆಲುವೆ ಅಮೂಲ್ಯ ಮದುವೆ ನಂತರ ದಾಂಪತ್ಯ ಜೀವನದಲ್ಲಿ ಬ್ಯುಸಿ ಇರೋದು ಎಲ್ಲರಿಗೂ ಗೊತ್ತು.

Tap to resize

Latest Videos

ದುಬಾರಿ ಶಾಪಿಂಗ್‌ಗಿಂತ ಅಗತ್ಯಕ್ಕೆ ಖರ್ಚು ಮಾಡುವ ವ್ಯಕ್ತಿ; ಪತಿಗೆ ನಟಿ ಅಮೂಲ್ಯ ಸ್ಪೆಷಲ್ ವಿಶ್

ಆದ್ರೆ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ನಿಮ್ಮಲ್ಲಿದ್ರೆ ಇಲ್ಲಿದೆ ನೋಡಿ ಉತ್ತರ. ನಟಿ ಅಮೂಲ್ಯ ಪತಿ ಜಗದೀಶ್ ಜೊತೆ ಮಾವಿನ ತೋಪಿನಲ್ಲಿದ್ದಾರೆ. ಲಾಕ್‌ಡೌನ್ ಆದ್ರೂ ಪತಿ ಜೊತೆ ಪರಿಸರ ಮಧ್ಯೆ ಎಂಜಾಯ್ ಮಾಡುತ್ತಿದ್ದಾರೆ.

ಗಂಡನ ಜೊತೆ ತಂಪಾಗಿ ಮಾವಿನ ತೋಪಿನಲ್ಲಿ ಸುತ್ತುತ್ಥಾ, ಮಾವಿನ ಮರವನ್ನು ಹತ್ತಿ ಹಣ್ಣು ಕೊಯ್ಯುತ್ತಿದ್ದಾರೆ ನಟಿ. ರೆಂಬೆ ಮೇಲೆ ನಿಂತು ಫುಲ್ ಖುಷಿಯಾಗಿ ಕೈಯಾರೆ ಹಣ್ಣು ಕೊಯ್ಯುತ್ತಿದ್ದಾರೆ ಅಮೂಲ್ಯ.

 

click me!