ಮಗಳನ್ನು ತಬ್ಬಿಕೊಂಡು ಅಳುತ್ತಿದ್ದೆ; ನಟಿ ಶ್ರುತಿ ಹರಿಹರನ್ ಶಕ್ತಿಯೇ ಪುತ್ರಿ ಜಾನಕಿ!

By Suvarna News  |  First Published Jun 2, 2021, 4:23 PM IST

ನಟಿ ಶ್ರುತಿ ಹರಿಹರನ್ ಲಾಕ್‌ಡೌನ್‌ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಮಗಳು ನಿಜಕ್ಕೂ ಸ್ಪೂರ್ತಿ...
 


ಲಾಕ್‌ಡೌನ್‌ ಸಮಯದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಬೆಡ್, ಆಸ್ಪತ್ರೆ, ಆಕ್ಸಿಜನ್ ಬಗ್ಗೆ ಮಾಹಿತಿ ಹಂಚಿಕೊಂಡು ಜನರಿಗೆ ಸಹಾಯ ಮಾಡುತ್ತಿರುವ ನಟಿ ಶ್ರುತಿ ಹರಿಹರನ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಲಾಕ್‌ಡೌನ್‌ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. 

Tap to resize

Latest Videos

'ಮೊದಲನೇ ಅಲೆಗಿಂತಲೂ ಎರಡನೇ ಅಲೆಯ ತೀವ್ರತೆ ಹೆಚ್ಚಿದೆ. ನನ್ನ ಆಂಟಿ, ಅಂಕಲ್ ಮತ್ತು ಕಸಿನ್‌ಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಮ್ಮ ಕುಟುಂಬ ಎದುರಿಸಿದ ಅತ್ಯಂತ ಕಷ್ಟಕರ ಸಮಯವಿದು. ಬೆಸ್ ಸಿಗುತ್ತಿರಲಿಲ್ಲ, ಆಸ್ಪತ್ರೆ ಫುಲ್ ಆಗಿತ್ತು. ಈಗಲೂ ಆಂಟಿ ವೆಂಟಿಲೇಟರ್‌ ಬಳಸುತ್ತಿದ್ದಾರೆ ಅವರು ಆದಷ್ಟು ಬೇಗ ಗುಣಮುಖರಾಗಿ ಬರುತ್ತಾರೆ. ನಾವೆಲ್ಲಾ ಮನೆಯಲ್ಲಿದ್ದು ಹೊರಗಡೆ ಏನಾಗುತ್ತಿದೆ ಗೊತ್ತಿಲ್ಲ. ಆದರೆ ನಿಜಕ್ಕೂ ಭಯವಾಗುತ್ತದೆ' ಎಂದು ಶ್ರುತಿ ಮಾತನಾಡಿದ್ದಾರೆ. 

ಸಹಾಯಕ್ಕೆ ನಿಂತ ನಟಿ ಶ್ರುತಿ ಹರಿಹರನ್ ಬಗ್ಗೆ ತಪ್ಪು ಸುದ್ದಿ; ಇದೇನಪ್ಪ ಗ್ರಹಚಾರ! 

'ನನ್ನ ಮಗಳಿಂದ ನನ್ನ ಭಾವನೆಗಳನ್ನು ಮುಚ್ಚಿಟ್ಟಿಲ್ಲ. ಕಷ್ಟದ ಸಮಯದಲ್ಲಿ ಆಕೆಯನ್ನು ತಬ್ಬಿಕೊಂಡು ಅಳುತ್ತಿದ್ದೆ. ಆಕೆ ತನ್ನದೇ ರೀತಿಯಲ್ಲಿ ನನಗೆ ಸಮಾಧಾನ ಮಾಡುತ್ತಿದ್ದಳು. ಮಾನಸಿಕವಾಗಿ, ದೈಹಿಕವಾಗಿ ಆಕೆ ನಮಗೆ ಶಕ್ತಿ ನೀಡಿದ್ದಾಳೆ. ನಾನು ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಕಾರಣ ಇಲ್ಲಿ ಟೆರೆಸ್‌ಗೆ ಕರೆದುಕೊಂಡು ಹೋಗುವೆ. ಆಕೆ ಮಾತನಾಡುವ ಒಬ್ಬ ವ್ಯಕ್ತಿ ಅಂದ್ರೆ ಪಕ್ಕದ ಮನೆಯಲ್ಲಿರುವ ಮೂರು ವರ್ಷದ ಹುಡುಗಿ. ಅವರಿಬ್ಬರು ಆಟವಾಡುತ್ತಾರೆ. ತಾಯಿ ಮನೆ ಹತ್ತಿರವಿದೆ, ಜಾನಕಿ ಅಲ್ಲಿ ಅಜ್ಜಿ ಭೇಟಿ ಮಾಡುತ್ತಾಳೆ' ಎಂದಿದ್ದಾರೆ.

click me!