ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ

ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ

Published : May 12, 2026, 05:18 PM IST

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ "ಲೋ ನವೀನ". ಈಗಾಗಲೇ ಈ ಚಿತ್ರದ ಜನಪದ ಶೈಲಿಯ "ಕೋಣಾಣೆ" ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ.

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ "ಲೋ ನವೀನ". ಈಗಾಗಲೇ ಈ ಚಿತ್ರದ ಜನಪದ ಶೈಲಿಯ  "ಕೋಣಾಣೆ" ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ "ಲೋ ನವೀನ" ಚಿತ್ರದ ಇನ್ನೊಂದು ಹಾಡು ರಿಲೀಸ್ ಆಗಿದ್ದು ಒನ್ಸ್ ಅಗೈನ್ ಸದ್ದು ಸುದ್ದಿ ಮಾಡ್ತಾ ಇದೆ. ಇದೀಗ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸ್ಯಾಂಡಲ್​ವುಡ್​ನ ಸ್ಟಾರ್ ಸಿಂಗರ್​​ ನವೀನ್ ಸಜ್ಜು ನಾಯಕರಾಗಿರೋದು ಗೊತ್ತೇ ಇದೆ. ಲೋ ನವೀನ ಸಿನಿಮಾದಲ್ಲಿ  ನವೀನ್ ಹೀರೋ ಆಗಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮೇ 15ನೇ ತಾರೀಖೂ ಲೋ ನವೀನ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತೆ.

ಲೋ ನವೀನ ಹಳ್ಳಿ ಸೊಗಡಿನ ಸೊಬಗಿನ ಸಿನಿಮಾ. ಲೋ ನವೀನ ಚಿತ್ರದಲ್ಲಿ ನಮ್ಮ ನೆಲದ ಸೊಗಡಿನ ಹಾಡುಗಳೇ ಇವೆ. ಇಡೀ ಚಿತ್ರ ಹಳ್ಳಿ ಹಿನ್ನೆಲೆಯ ಕಥೆಯನ್ನ ಹೊಂದಿದೆ. ನವೀನ ಅನ್ನೋ ಯುವಕನ ಸುತ್ತವೆ ಇದೆ. ಲೋ ನವೀನ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ನವೀನ್ ಸಜ್ಜು ಅವರೇ ಮ್ಯೂಸಿಕ್​ ಮಾಡಿದ್ದು, ಜಾನಪದ ಹಾಡುಗಳು ಹಿಟ್ ಆಗಿವೆ. ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಬಂಡವಾಳ ಹೂಡಿದ್ದಾರೆ. ನವೀನ್ ಸಜ್ಜುಗೆ ನಾಯಕಿಯಾಗಿ ವರ್ಷ ಅಭಿನಯಿಸಿದ್ದಾರೆ. ಧನುರ್ಧಾರಿ ಪವನ್ ನಿರ್ದೇಶನ ಮಾಡಿದ್ದಾರೆ. ಲೋ ನವೀನ ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಾಹಕ, ವಿನಾಯಕ್ ಆಚಾರ್ಯ ನೃತ್ಯ ನಿರ್ದೇಶಕ ಮಾಡಿದ್ದಾರೆ. ಮೇ 15ಕ್ಕೆ ಸಿನಿಮಾ ತೆರೆ ಕಾಣುತ್ತಿದ್ದು, ನವೀನ್ ಸಜ್ಜು ಖರಿಯರ್​​ಗೆ ಬಿಗ್​ ಬ್ರೇಕ್​ ಕೊಡೋ ನಿರೀಕ್ಷೆ ಇದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more