
ಕನ್ನಡ ಚಿತ್ರರಂಗದ ಹೆಸರಾಂತ ಗಾಯಕಿ ಅರ್ಚನಾ ಉಡುಪ ಒಂದು ವರ್ಷಗಳ ಕಾಲ ಆರೋಗ್ಯದ ವಿಚಾರವಾಗಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಯಾಕೆ ಕಾರ್ಯಕ್ರಮಗಳು ಮಿಸ್ ಆಯ್ತು? ಯಾಕೆ ಧ್ವನಿ ಸರಿಯಾಗಲಿಲ್ಲ? ಯಾವ ವೈದ್ಯರು ಸಹಾಯ ಮಾಡಿದ್ದರು? ಸಂಪೂರ್ಣವಾಗಿ ವಿವರಿಸಿದ್ದಾರೆ.
'ನಮ್ಮ ಕ್ಷೇತ್ರದಲ್ಲಿ ಕಾಂಪಿಟೇಷನ್ ವಿಚಾರದಲ್ಲಿ ಬಹಳಷ್ಟು ಕಡೆ ಹೆಲ್ತಿ ಕಾಂಪಿಟೇಷನ್ ಸಿಗುತ್ತದೆ ಬಹಳಷ್ಟು ಕಡೆ ಅನ್‌ಹೆಲ್ತಿ ಕಾಂಪಿಟೇಷನ್‌ಗಳು ಇರುತ್ತದೆ. ಯಾರನ್ನಾದರೂ ಸರಿಯಾದ ದಾರಿಯಲ್ಲಿ ಓವರ್ ಟೇಕ್ ಮಾಡಲು ಆಗುತ್ತಿಲ್ಲ ಅಂದ್ರೆ ಎಲ್ಲಾ ರೀತಿಯಲ್ಲಿ ಶಾರ್ಟ್ ಕಟ್‌ಗಳು ಬರುತ್ತೆ. ಪ್ರಮುಖವಾಗಿ ಮಹಿಳೆಯರಿಗೆ ಕ್ಯಾರೆಕ್ಟ್ ಅಸಾಸಿನೇಷನ್ ಮಾಡೋದು ಇದ್ದೇ ಇರುತ್ತದೆ. ನಾನು ಕೂಡ ಅದನ್ನು ಎದುರಿಸಿದ್ದೀನಿ. ಆ ಸಮಯದಲ್ಲಿ ನನ್ನ ಪತಿ ನನ್ನ ಪರವಾಗಿ ಬಲವಾಗಿ ನಿಂತಿದ್ದ ಕಾರಣ ಅಷ್ಟೋಂದು ಅಫೆಕ್ಟ್ ಆಗಲಿಲ್ಲ. ಈಗ ಯಾರಾದರೂ ಮಾತನಾಡುತ್ತಿದ್ದಾರಾ...ನನ್ನ ಹಿಂದೆ ಇದ್ದಾರೆ ಅಂದುಕೊಂಡು ಮಾತನಾಡಿಕೊಳ್ಳಲಿ ಅಂತ ಬಿಟ್ಟುಬಿಡುತ್ತೀನಿ' ಎಂದು ಬುಕ್ ಬ್ರಹ್ಮ ಗಂಧದಬೀಡು ಸಂದರ್ಶನದಲ್ಲಿ ಅರ್ಚನಾ ಮಾತನಾಡಿದ್ದಾರೆ.
10 ವರ್ಷ ಇದ್ದಾಗ ಹಾವು ಹಿಡಿದು ನಿಂತ ಕೀರ್ತಿ; ನಟಿ ಶ್ರುತಿ ತಂಗಿ ಮಗಳ ಧೈರ್ಯ ಹೇಗಿದೆ ನೋಡಿ.....
'ತುಂಬಾ ದೊಡ್ಡದಾಗಿ ಹೊಡೆದ ಬಿದ್ದಿದ್ದು ಅಂದ್ರೆ...ಆಗ ಹೈ ಪಿಚ್ ಹಾಡುಗಳು ಅಂದ್ರೆ ಅರ್ಚನಾಳನ್ನು ಕರೆಯಿರಿ ಎನ್ನುತ್ತಿದ್ದರು. ಎಷ್ಟು ಕಿರುಚುತ್ತಿದ್ದೆ ಅಂದ್ರೆ ಅದನ್ನು ಹಾಡುವುದು ಅಂತ ಹೇಳಲು ಆಗುತ್ತಿರಲಿಲ್ಲ. ಆಗ ಜೋಶ್‌ನಲ್ಲಿ ಹಾಡುತ್ತಿದ್ದೆ ಆದರೆ ಒಂದು ಸಮಯದಲ್ಲಿ ಗಂಟಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ನಾಲ್ಕು ನಾಲ್ಕು ಗಂಟೆ ಕಾರ್ಯಕ್ರಮಗಳಲ್ಲಿ ಹಾಡುವಾಗ ನೋವು ಬರುತ್ತಿತ್ತು ಎಂದು ಅಪ್ಪನಿಗೆ ಹೇಳಿತ್ತಿದ್ದೆ. ನಾನು ಮಾತನಾಡುತ್ತಿದ್ದ ಕಾರಣ ರೆಸ್ಟ್ ಮಾಡು ಕಷಾಯ ಎಂದು ಕೊಡುತ್ತಿದ್ದರು. ಒಂದು ದಿನ ಕಾರ್ಯಕ್ರಮದಲ್ಲಿ ರೆಡಿಯಾಗಿದ್ದೀನಿ ಚಪ್ಪಲಿ ಹಾಕಿಕೊಳ್ಳುವ ಸಮಯದಲ್ಲಿ ಒಂದು ಕೆಮ್ಮು ಬಂತು...ಅದಾದ ಮೇಲೆ ನನ್ನ ಧ್ವನಿ ಬರುತ್ತಿಲ್ಲ. ಎಲ್ಲ ರೀತಿಯಲ್ಲೂ ಧ್ವನಿ ಸರಿ ಮಾಡಿಕೊಂಡೆ ದಾರಿ ಇದ್ದಕ್ಕೂ ಹೋದೆ..ವೇದಿಕೆ ಮೇಲೆ ಹೆದರಿಕೊಂಡು ಹಾಡಲು ಶುರು ಮಾಡಿದೆ. ಆಗ ಮೂರು ಮೂರು ಧ್ವನಿ ಬರುತ್ತಿತ್ತು. ಇಡೀ ಕಾರ್ಯಕ್ರಮ ಕಣ್ಣೀರಿಟ್ಟು ಕುಳಿತಿದ್ದೆ' ಎಂದು ಅರ್ಚನಾ ಹೇಳಿದ್ದಾರೆ.
ಯಶಸ್ಸಿನಲ್ಲಿ ಇದ್ದಾಗ ಬಂದು ಹೋಗೋ ಫ್ರೆಂಡ್ಸ್ ನಂಗೆ ಬೇಡ, ಕಷ್ಟದಲ್ಲಿದ್ದಾಗ ನಿಂತಿದ್ದು ಇವರೇ: ಅಮೃತಾ ಅಯ್ಯಂಗಾರ್
'ನಾನು ತೆಗೆದುಕೊಳ್ಳದ ಔಷಧಿಗಳು ಇಲ್ಲ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೀನಿ. ನನಗೆ ತಿಂಗಳು ಪೂರ್ತಿ ಕಾರ್ಯಕ್ರಮಗಳು ಇತ್ತು ಆದರೆ ಧ್ವನಿ ಸರಿಯಾಗುತ್ತಿರಲಿಲ್ಲ. ಆ ಸಮಯದಲ್ಲಿ ವೈದ್ಯರ ಜೊತೆ ಮಾತುಕತೆ ಮಾಡಿದ ಮೇಲೆ ಏನಿದು ಈ ರೀತಿ ನಾಡ್ಯೂಲ್ಸ್ ಆಗಿದೆ ಆಪರೇಷನ್ ಮಾಡಬೇಕು ಎಂದರು. ಆಪರೇಷನ್ ಮಾಡಿದ್ರೂ ಧ್ವನಿ ಬರುತ್ತಾ ಇಲ್ವೋ ಗೊತ್ತಿಲ್ಲ ಅಂದ್ರು ಅಲ್ಲಿ ಕಣ್ಣೀರಿಟ್ಟುಕೊಂಡು ಹೊರ ಬಂದೆ. ದಿನ ನಾನು ಅಳಲು ಶುರು ಮಾಡಿದೆ...ಅದಕ್ಕೆ ಅಪ್ಪ ಹೇಳಿದ್ದರು...ನಿನಗೆ ನನ್ನ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುತ್ತೀನಿ ಸಮಯ ಸರಿ ಹೋಗುತ್ತದೆ ಎಂದುಬಿಟ್ಟರು. ಅಪ್ಪನೇ ನನ್ನನ್ನು ಬಿಟ್ಟುಕೊಟ್ಟರು ಎಂದು ಸಹಿಸಿಕೊಳ್ಳಲು ಆಗಲಿಲ್ಲ. ಅದಾದ ಮೇಲೆ ಒಬ್ಬರು ಎಕ್ಸ್ ಚೀಫ್ ಜಸ್ಟಿಸ್ ಅವರು ನಮಗೆ ಫ್ಯಾಮಿಲಿ ರೀತಿ. ನನ್ನ ಜೀವನದಲ್ಲಿ ನಡೆಯುತ್ತಿರುವುದನ್ನು ನೋಡಿ ಅವರು ಆಲೋಪಥಿ ವೈದ್ಯರನ್ನು ಸಂಪರ್ಕ ಮಾಡಲು ಹೇಳಿದ್ದರು. ಒಂದು ತಿಂಗಳಿಗೆ ಔಷದಿ ಕೊಟ್ಟರು...ನಾಲ್ಕು ತಿಂಗಳಲ್ಲಿ ನಾನು ಆರಾಮ್ ಆದೆ' ಎಂದಿದ್ದಾರೆ ಅರ್ಚನಾ.
ತಿಂಗಳಿಗೆ 400 ರೂಪಾಯಿ ಸಂಬಳ ಪಡೆದ ಮಂಡ್ಯ ರಮೇಶ್; ಶಾಕಿಂಗ್ ಏನೆಂದರೆ 3 ವರ್ಷ ಕಳೆದ್ರೂ 800 ರೂ. ಆಗಿತ್ತಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.