ನಟಿ ಹಾಗೂ ಕುಪ್ಪಂಡ ಜ್ಯುವೆಲರ್ಸ್ ಸಂಸ್ಥಾಪಕಿ ತನಿಷಾ ಕುಪ್ಪಂಡ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ್ದಾರೆ. ಕುಪ್ಪಂಡ ಜ್ಯುವೆಲರಿ ಶುರು ಮಾಡಿ ವರ್ಷವಾಗಿದ್ದು, ಈ ಶುಭ ಸಂದರ್ಭದಲ್ಲಿ ಸ್ಪೇಷಲ್ ಗಿಫ್ಟ್ ನೀಡುವ ಘೋಷಣೆ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪ್ಪಂಡ (Bigg Boss Kannada season 10 contestant Tanisha Kuppanda), ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ತಮ್ಮದೇ ಬ್ಯುಸಿನೆಸ್ ಶುರು ಮಾಡಿದ್ದರು. ಕುಪ್ಪಂಡ ಜ್ಯುವೆಲರಿಸ್ (kuppanda jewellery) ಅಂತ ಅದಕ್ಕೆ ನಾಮಕರಣ ಮಾಡಿದ್ದರು. ಕುಪ್ಪಂಡ ಜ್ಯುವೆಲರಿಸ್ ಶುರುವಾಗಿ ಈಗ ಒಂದು ವರ್ಷವಾಗ್ತಿದೆ. ಇದೇ ಮಾರ್ಚ್ 29ರಂದು ಕುಪ್ಪಂಡ ಜ್ಯುವೆಲರಿಸ್, ಒಂದನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ. ಈ ಶುಭ ಸಂದರ್ಭದಲ್ಲಿ ತನಿಷಾ ಕುಪ್ಪಂಡ ತಮ್ಮ ಜ್ಯುವೆಲರಿ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ. ಜ್ಯುವೆಲರಿ ವಾರ್ಷಿಕೋತ್ಸವ ಹಾಗೂ ಯುಗಾದಿ ಸಮಯದಲ್ಲಿ ಕುಪ್ಪಂಡ ಜ್ಯುವೆಲರಿಯಲ್ಲಿ ಆಭರಣ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ನೀಡಲು ತನಿಷಾ ಮುಂದಾಗಿದ್ದಾರೆ.
ಕುಪ್ಪಂಡ ಜ್ಯುವೆಲರಿಸ್ ಯುಗಾದಿ ಆಫರ್ : ಕುಪ್ಪಂಡ ಜ್ಯುವೆಲರಿಸ್ ನಲ್ಲಿ ನೀವು ಆಭರಣ ಖರೀದಿ ಮಾಡಿದ್ರೆ ನಿಮಗೆ 1 0 ಗ್ರಾಂ ಬೆಳ್ಳಿ ನಾಣ್ಯ ಸಿಗಲಿದೆ. ಆದ್ರೆ ಅದಕ್ಕೊಂದು ಷರತ್ತಿದೆ. ಕಂಪನಿ ಪ್ರಕಾರ, 20 ಸಾವಿರ ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ಬೆಲೆಯ ಆಭರಣ ಖರೀದಿ ಮಾಡಿದ ಗ್ರಾಹಕರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ಸಿಗಲಿದೆ.
ಮಗಳು ವಿಸ್ಮಯ ಹುಟ್ಟುಹಬ್ಬದಂದೇ ಎಂಪೂರನ್ ಬಿಡುಗಡೆ: ಏನ್ ಮಾಡ್ತಿದ್ದಾರೆ ಮೋಹನ್‌ಲಾಲ್ ಪುತ್ರಿ
ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪ್ಪಂಡ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಕುಪ್ಪಂಡ ಜ್ಯುವೆಲರಿಸ್ ಮಾರ್ಚ್ 29ನೇ ತಾರೀಕಿನಂದು ಒಂದು ವರ್ಷವನ್ನು ಪೂರೈಸ್ತಾ ಇದೆ. ಈ ಶುಭ ಸಂದರ್ಭದಲ್ಲಿ ಹಾಗೂ ಯುಗಾದಿ ಪ್ರಯುಕ್ತ ಕುಪ್ಪಂಡ ಜ್ಯುವೆಲರಿಸ್, ಗಿಫ್ಟ್ ನೀಡ್ತಿದೆ. 20 ಸಾವಿರ ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ಆಭರಣ ಖರೀದಿ ಮಾಡಿದವರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಸಿಗಲಿದೆ. ನಿಮ್ಮ ಬಿಲ್ ನನಗೆ ಕಳುಹಿಸಿ, ಬೆಳ್ಳಿ ನಾಣ್ಯ ಪಡೆಯಬಹುದು. ಇಲ್ಲವೆ ಜ್ಯುವೆಲರಿ ಶಾಪ್ ನಲ್ಲಿಯೇ ಗಿಫ್ಟ್ ಕಲೆಕ್ಟ್ ಮಾಡ್ಬಹುದು ಎಂದು ತನಿಷಾ ಹೇಳಿದ್ದಾರೆ.
ಕುಪ್ಪಂಡ ಜ್ಯುವೆಲರಿಸ್, ಸದ್ಯ ಎರಡು ಶಾಖೆಗಳನ್ನು ಹೊಂದಿದೆ. ಒಂದು ವಿಜಯನಗರದಲ್ಲಿದ್ದು, ಇನ್ನೊಂದು ಶಾಖೆ ಬಸವೇಶ್ವರ ನಗರದಲ್ಲಿದೆ. ಯಾವುದೇ ಒಂದು ಶಾಖೆಯಲ್ಲಿ ನೀವು ಖರೀದಿ ಮಾಡಿದ್ರೂ ನಿಮಗೆ ಗಿಫ್ಟ್ ಸಿಗಲಿದೆ. ಕುಪ್ಪಂಡ ಜ್ಯುವೆಲರಿಸ್ ಗೆ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ಸಿಗ್ತಿದ್ದು, ಒಂದು ವರ್ಷ ಪೂರೈಸಿದ ಕುಪ್ಪಂಡ ಜ್ಯುವೆಲರಿಸ್ ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
7000 ಚದರ ಅಡಿಯಲ್ಲಿ ನಯನತಾರಾ ಹೊಸ Home Studio! ಅಬ್ಬಾಬ್ಬಾ ಆಕೆಗಿರುವುದು ಒಂದೆರಡು ಮನೆಯಲ್ಲ!
ತನಿಷಾ ಕುಪ್ಪಂಡ, ನಟಿ ಮಾತ್ರವಲ್ಲ. ನಿರ್ಮಾಪಕಿ ಕೂಡ ಹೌದು. ಕುಪ್ಪಂಡ ಜ್ಯುವೆಲರ್ಸ್ ಜೊತೆ ಕುಪ್ಪಂಡ ಪ್ರೊಡಕ್ಷನ್ ಕೂಡ ಅವರು ಮುನ್ನಡೆಸುತ್ತಿದ್ದಾರೆ. ಕುಪ್ಪಂಡ ಪ್ರೊಡಕ್ಷನ್ ನಲ್ಲಿ ಮೊದಲ ಚಿತ್ರ ನಿರ್ಮಾಣವಾಗ್ತಿದೆ. ಅದಕ್ಕೆ ತನಿಷಾ, ಕೋಣ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರ ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ಇದ್ರಲ್ಲಿ ಕೋಮಲ್ ನಾಯಕರಾಗಿ ನಟಿಸುತ್ತಿದ್ದಾರೆ. ತನಿಷಾ ಕುಪ್ಪಂಡ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ತನಿಷಾ ನಿರ್ಮಾಣದ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಆಸಕ್ತಿ ತೋರಿದ್ದಾರೆ.
ತನಿಷಾ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದಾರೆ. ಸದ್ಯ ತನಿಷಾ, ತಮ್ಮದೆ ಹೊಸ ಯುಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. 34 ವರ್ಷದ ತನಿಷಾ, ವರ್ತೂರು ಸಂತೋಷ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಇದೇ ಕಾರಣಕ್ಕೆ ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿ ಇತ್ತು. ಆದ್ರೆ ನಾವಿಬ್ಬರೂ ಸ್ನೇಹಿತರು ಎನ್ನುವ ಮೂಲಕ ತನಿಷಾ ಹಾಗೂ ವರ್ತೂರು ವದಂತಿಗೆ ತೆರೆ ಎಳೆದಿದ್ದಾರೆ.