ರುಪತಿಯಲ್ಲಿ ನಡೆದ ಕಾಲ್ತುಳಿತದ ದಿನ ಶುಭ್ರ ಅಯ್ಯಪ್ಪ ಮತ್ತು ಪತಿ ವಿಶಾಲ್ ಶಿವಪ್ಪ ಅಲ್ಲೇ ಇದ್ದರಂತೆ. ನಿಜಕ್ಕೂ ಏನಾಯ್ತು ಎಂದು ನಟಿ ವಿವರಿಸಿದ್ದಾರೆ.
ಪ್ರತಿ ವರ್ಷವೂ ವೈಕುಂಠ ಏಕಾದಶಿ ದಿನ ತಿರುಪತಿಯಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಈ ವರ್ಷ ವೈಕುಂಠ ದರ್ಶನ ಟೋಕನ್ ಪಡೆಯುವ ಸ್ಥಳದಲ್ಲಿ ಜನರು ಹೆಚ್ಚಾಗಿದ್ದು ಕಾಲ್ತುಳಿತದಿಂದ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ದಿನ 'ವಜ್ರಕಾಯ' ಚಿತ್ರದ ನಟಿ ಶುಭ್ರ ಅಯ್ಯಪ್ಪ ಮತ್ತು ಪತಿ ವಿಶಾಲ್ ಶಿವಪ್ಪ ಸ್ಥಳದಲ್ಲಿ ಇದ್ದರಂತೆ.
'ತಿರುಪತಿಯಲ್ಲಿ ಕಾಲ್ತುಳಿತ ಘಟನೆ ನಡೆದ 15 ನಿಮಿಷಕ್ಕೂ ಮುನ್ನ ನಾವು ಅದೇ ಸ್ಥಳದಲ್ಲಿ ಇದ್ದೆವು. ನಾವು ನೋಡಿದ ಪ್ರಕಾರ ತುಂಬಾ ಪೊಲೀಸರು, ಸೆಕ್ಯೂರಿಟಿ ಇದ್ದರು. ತುಂಬಾ ಟೈಟ್ ಸೆಕ್ಯೂರಿಟಿ ಇತ್ತು. ತಿರುಪತಿಯಲ್ಲಿ ವೈಕುಂಠ ಏಕಾದಶಿಯು ಪ್ರಮುಖ ದಿನವಾಗಿರುವ ಕಾರಣ ಸಖತ್ ಸಂಭ್ರಮ ಮತ್ತು ಸಡಗರವಾಗಿತ್ತು. ಆದರೆ ವೈಕುಂಠ ದ್ವಾರಕ್ಕೆ ಟಿಕೆಟ್ ಪಡೆಯಲು ಸಾಲುಗಟ್ಟಿ ನಿಂತಿದ್ದರು ಅಷ್ಟು ಜನಸಾಗರವಿತ್ತು. ಅಲ್ಲಿಂದ ನಮ್ಮ ರೂಮ್ ಕಡೆ ಹೊರಟೆವು ಅದಾದ 15 ನಿಮಿಷಗಳ ನಂತರ ಕಾಲ್ತುಳಿತ ಆಗಿದೆ ಸುಮಾರು 6 ರಿಂದ 10 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಓದಿದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಶುಭ್ರ ಅಯ್ಯಪ್ಪ ಮಾತನಾಡಿದ್ದಾರೆ.
ನೀನು ಏನ್ ಬಲತ್ಕಾರ ಮಾಡಿದ್ಯಾ? ಹೆದರಬೇಡ ಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ; ಡ್ರೋನ್ ಪ್ರತಾಪ್‌ಗೆ ಧೈರ್ಯ ಹೇಳಿದ ನೀತು
ಅಷ್ಟು ಟೈಟ್ ಸೆಕ್ಯೂರಿಟಿ ಇರುವ ಸ್ಥಳದಲ್ಲಿ ಈ ರೀತಿ ನಡೆದಿರುವುದು ನಿಜಕ್ಕೂ ಶಾಕ್ ಎಂದಿದ್ದಾರೆ. 'ತಿರುಪತಿಯಲ್ಲಿ ಸಂಭ್ರಮ ಮನೆ ಮಾಡಿತ್ತು ಮತ್ತೊಂದು ಅಳು ಜೋರಾಗಿತ್ತು. ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗಿದೆ' ಎಂದಿದ್ದಾರೆ. ಮರುದಿನ ಶುಭ್ರ ಅಯ್ಯಪ್ಪ ಫ್ಯಾಮಿಲಿ ತಿಮ್ಮಪ್ಪ ದರ್ಶನ ಪಡೆಯಲು ಹೋಗಿದ್ದಾರೆ ಆದರೆ ಎಲ್ಲವೂ ನಾರ್ಮಲ್ ಆಗಿ ನಡೆಯುತ್ತಿತ್ತಂತೆ.
ಭವ್ಯಾ ಗೌಡ ಜೊತೆ ಸೇರಿಕೊಂಡ ಮೋಸ ಮಾಡಿದ ಮೋಕ್ಷಿತಾ ಪೈ; ಸಾಕ್ಷಿ ಮುಂದಿಟ್ಟು ವೀಕ್ಷಕರು
ನಿಜಕ್ಕೂ ತಿರುಪತಿಯಲ್ಲಿ ಏನಾಯ್ತು?
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಜನವರಿ 10, 11 ಮತ್ತು 12ರಂದು ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 3 ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್ಗಳನ್ನು ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಲಾಗಿತ್ತು. ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ, ಪದ್ಮಾವತಿಪುರಂನಲ್ಲಿ 94 ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು ಟಿಕೆಟ್ ವಿತರಣೆ ಮಾಡುತ್ತಿದ್ದರು. ಜನ ಸಂಖ್ಯೆ ಹೆಚ್ಚಾದ ಕಾರಣ ಕಾಲ್ತುಳಿತದಿಂದ 6 ಮಂದಿ ಮೃತಪಟ್ಟಿದ್ದು 30 ಮಂದಿ ಗಾಯಗೊಂಡಿದ್ದಾರೆ.
ಡಬಲ್ ಧಮಾಕಕ್ಕೆ ಚೈತ್ರಾ ಕುಂದಾಪುರ ಶಾಕ್; ಫಿನಾಲೆ ಟಿಕೆಟ್ ಕೈ ತಪ್ಪಿದ್ದರೂ ಸಿಕ್ತು ಮೆಡಲ್