ಅಣ್ಣಾವ್ರು ಪೂಜಿಸಿದ್ದ 'ಶ್ರೀನಿವಾಸ ಮೂರ್ತಿ'ಗೆ ಹುಬ್ಬಳ್ಳಿಯಲ್ಲಿ ಈಗಲೂ ಪೂಜೆ, ಅದು ಹೇಗೆ?!

Published : Jan 11, 2025, 03:02 PM ISTUpdated : Jan 11, 2025, 07:06 PM IST
ಅಣ್ಣಾವ್ರು ಪೂಜಿಸಿದ್ದ 'ಶ್ರೀನಿವಾಸ ಮೂರ್ತಿ'ಗೆ ಹುಬ್ಬಳ್ಳಿಯಲ್ಲಿ ಈಗಲೂ ಪೂಜೆ, ಅದು ಹೇಗೆ?!

ಸಾರಾಂಶ

ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರ ಶ್ರೀನಿವಾಸನ ಪಾತ್ರ ಭಕ್ತರ ಮನಸಲ್ಲಿ ಅಚ್ಚಳಿಯದೆ ಉಳಿದಿದೆ. ೧೯೭೪ ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ನಿಜವಾದ ತಿರುಪತಿ ದೇಗುಲದಂತೆ ಸೆಟ್ ನಿರ್ಮಿಸಲಾಗಿತ್ತು. ಚಿತ್ರಮಂದಿರದ ಮುಂದೆ ಪ್ರತಿಷ್ಠಾಪಿಸಿದ್ದ ವೆಂಕಟೇಶ್ವರನ ಮೂರ್ತಿಗೆ ಜನ ಪೂಜೆ ಸಲ್ಲಿಸುತ್ತಿದ್ದರು. ಈ ಮೂರ್ತಿ ಈಗಲೂ ಹುಬ್ಬಳ್ಳಿಯಲ್ಲಿದೆ. ವೈಕುಂಠ ಏಕಾದಶಿ ಹಬ್ಬದಂದು ಈ ಚಿತ್ರವನ್ನು ಸ್ಮರಿಸಲಾಗುತ್ತದೆ.

ವೈಕುಂಠ ಏಕಾದಶಿ ದಿವಸ ಶ್ರೀನಿವಾಸ ಸ್ವಾಮಿಯ ದರ್ಶನ ಮಾಡಿದ್ರೆ ಮುಕ್ತಿ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆ. ನಮ್ಮ ಕನ್ನಡಿಗರ ಪಾಲಿಗೆ ಶ್ರೀನಿವಾಸ ಅಂದ್ರೆ ಕಣ್ಮುಂದೆ ಬರೋದು ಬಾಲಾಜಿಯ ಪಾತ್ರ ಮಾಡಿದ್ದ ಡಾ.ರಾಜ್​ಕುಮಾರ್. ಅಣ್ಣಾವ್ರ ನಟನೆಯ ಶ್ರೀನಿವಾಸ ಕಲ್ಯಾಣ ಸಿನಿಮಾ ತಿಮ್ಮಪ್ಪನ ಭಕ್ತರ ಪಾಲಿಗೆ ನೆಚ್ಚಿನ ಸಿನಿಮಾ. ಈ ಸಿನಿಮಾ ಕುರಿತ ಒಂದಿಷ್ಟು ಇನ್​ಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.

'ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..' ಎಲ್ಲಾ ಬಾಲಾಜಿ ಭಕ್ತರು ಅನುದಿನವೂ ಸ್ಮರಿಸುವ ಹಾಡಿದು. ಇದರಲ್ಲಿ ಪರಮಾತ್ಮನಾಗಿ ನಟಿಸಿರೋ ಅಣ್ಣಾವ್ರನ್ನ ನೋಡ್ತಾ ಇದ್ರೆ, ಆ ಶ್ರೀನಿವಾಸ ಹೀಗೆ ಇದ್ದನ್ನೇನೋ ಅನ್ನಿಸುತ್ತೆ. ಭಕ್ತಿಭಾವ ತಾನಾಗೇ ಉಕ್ಕಿ ಬರುತ್ತೆ.

ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?

1974ರಲ್ಲಿ ಶ್ರೀನಿವಾಸನ ಲೀಲೆಗಳುಳ್ಳ ಈ 'ಶ್ರೀನಿವಾಸ ಕಲ್ಯಾಣ' ಸಿನಿಮಾ ತೆರೆಗೆ ಬಂದಿತ್ತು. ವೆಂಕಟೇಶ್ವರನಾಗಿ ರಾಜಕುಮಾರ್ ನಟಿಸಿದ್ರೆ ಲಕ್ಷ್ಮೀ ಮಾತೆಯಾಗಿ ಬಿ.ಸರೋಜಾದೇವಿ ನಟಿಸಿದ್ರು. ಈ ಸಿನಿಮಾದಲ್ಲಿ ಶ್ರೀನಿವಾಸನ ಸನ್ನಿವೇಶಗಳು ಬಂದಾಗ ಜನರು ಥಿಯೇಟರ್​ ನಲ್ಲೇ ಎದ್ದು ಕೈಮುಗೀತಾ ಇದ್ದರಂತೆ.

ಇನ್ನೂ ಈ ಸಿನಿಮಾದಲ್ಲಿ ತಿರುಪತಿ ದೇಗುಲದ ಸೆಟ್ ಹಾಕಲಾಗಿತ್ತು. ವೆಂಕಟೇಶ್ವರನ ಮೂರ್ತಿಯನ್ನ ಹೋಲುವ ಪ್ರತಿಕೃತಿ ತಯಾರಿಸಲಾಗಿತ್ತು. ಇದೆಷ್ಟು ನ್ಯಾಚುರಲ್ ಆಗಿತ್ತು ಅಂದ್ರೆ ಜನ ಇದು ನಿಜವಾದ ತಿರುಪತಿ ಅಂತ ನಂಬಿಕೊಂಡಿದ್ರು.

ಶ್ರೀನಿವಾಸ ಕಲ್ಯಾಣ ತೆರೆಗೆ ಬಂದ ವೇಳೆ ಈ ಮೂರ್ತಿಯನ್ನ ಚಿತ್ರಮಂದಿರ ಮುಂದೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಜನರು ಮೂರ್ತಿಗೆ ಪೂಜೆ ಸಲ್ಲಿಸಿ ಒಳಗೆ ಸಿನಿಮಾ ನೋಡ್ಲಿಕ್ಕೆ ಹೋಗ್ತಾ ಇದ್ರಂತೆ.

ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್‌ ಇನ್ ಟ್ರಬಲ್!

ಈ ಮೂರ್ತಿ ಈಗಲೂ ಹುಬ್ಬಳ್ಳಿಯಲ್ಲಿದೆ. ಆಗ ಹುಬ್ಬಳ್ಳಿ ಭಾಗದಲ್ಲಿ ಈ ಚಿತ್ರವನ್ನ ವಿತರಣೆ ಮಾಡಿದ್ದ ಬಾಬ್ಜಿಯವರ ಮನೆಯಲ್ಲಿ ಈ ವಿಗ್ರಹ ಇದೆ. . 50 ವರ್ಷಗಳಿಂದಲೂ ಈ ಕುಟುಂಬದರು ಈ ಶ್ರೀನಿವಾಸನ ಮೂರ್ತಿಗೆ ಪೂಜೆ, ಪುನಸ್ಕಾರ ಸಲ್ಲಿಸ್ತಾ ಬಂದಿದ್ದಾರೆ.

ಒಟ್ಟಾರೆ ವೈಕುಂಠ ಏಕಾದಶಿ ಬಂದಾಗಲೊಮ್ಮೆ ಭಕ್ತರಿಗೆ ಅಣ್ಣಾವ್ರ ಶ್ರೀನಿವಾಸ ಕಲ್ಯಾಣ ತಪ್ಪದೇ ನೆನಪಾಗುತ್ತೆ. ಈ ಸಿನಿಮಾದ ಹಾಡುಗಳು, ಸನ್ನಿವೇಶಗಳು ಜನರಲ್ಲಿ ಭಕ್ತಿರಸವನ್ನ ಉಕ್ಕಿಸುತ್ವೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?