
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಇದೇ ತಿಂಗಳು 19ರಂದು (19 ಅಕ್ಟೋಬರ್ 2023) ಭಾರತದೆಲ್ಲೆಡೆ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕೆ ನಟ ಶಿವರಾಜ್‌ಕುಮಾರ್ ತಮ್ಮ ಘೋಸ್ಟ್ ಸಿನಿಮಾದ ಪ್ರಚಾರಕ್ಕೆಂದು ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಸದ್ಯ ಶಿವಣ್ಣ ಮುಂಬೈನಲ್ಲಿ ತಮ್ಮ ಚಿತ್ರದ ಪ್ರಚಾರಕಾರ್ಯಕ್ಕೆ ಮುಂಬೈನಲ್ಲಿ ಇದ್ದಾರೆ. ಈ ಸಮಯದಲ್ಲಿ ಅವರು ಸ್ಟಾರ್ ಹಾಗೂ ಲೆಜೆಂಡ್ ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದಾರೆ.
ಕಮಲ್ ಹಾಸನ್ ಅವರನ್ನು ಮುಂಬೈನಲ್ಲಿ ಭೇಟಿಯಾದ ಶಿವಣ್ಣ ಅವರ ಜತೆಯಲ್ಲೊಂದು ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೀಗ ಬಹಳಷ್ಟು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ವಿಶೇಷತೆಯಿದೆ. ಅದೇನು ಎಂದರೆ, ನಟ ಕಮಲ್ ಹಾಸನ್ ಅವರು ಶಿವಣ್ಣ ಅವರ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಅದು ಶಿವಣ್ಣ ಅಭಿಮಾನಿಗಳನ್ನು ತುಂಬಾ ಖುಷಿಪಡಿಸಿದೆ.
'ನಾನು ಊಟ ಬೇಡ ಅಂತೀನಿ.. ಮುದ್ದು ಮಾಡಿಯೇ ತಿನ್ನಿಸ್ಬೇಕು..' ಸಂಗೀತಾಗೆ ಲಾರ್ಡ್ ಪ್ರಥಮ್ ಆರ್ಡರ್!
ನಟ ಶಿವಣ್ಣರ ಘೋಸ್ಟ್ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದ್ದು ಭಾರೀ ಕುತೂಹಲ ಸೃಷ್ಟಿಸಿದೆ. ಕಾರಣ, ಇತ್ತೀಚೆಗೆ ಶಿವಣ್ಣ ಸೂಪರ್ ಸ್ಟಾರ್ ರಜನಿಕಾಂತ್ ಜತೆ ನಟಿಸಿದ್ದ ಜೈಲರ್ ಸಿನಿಮಾ ಸೂಪರ್ ಸಕ್ಸಸ್ ಆಗಿರುವುದು. ಜತೆಗೆ, ಶಿವಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಮೀರಿ ಇದೀಗ ಜೈಲರ್ ಖ್ಯಾತಿಯ ಮೂಲಕ ಗುರುತಿಸಿಕೊಂಡಿದ್ದು, ಮುಂಬರುವ ಘೋಸ್ಟ್ ಸಕ್ಸಸ್ ಆದರೆ ಶಿವಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲಿದ್ದಾರೆ.
ಗೌತಮ್ ಹೆಸರಲ್ಲಿ 'ವಿಲ್' ಇದೆ, ನನಗೆ OCD ಇದೆ..; ಏನಾಗ್ತಿದೆ ನೋಡಿ 'ಅಮೃತಧಾರೆ' ಕಥೆ!
ಘೋಸ್ಟ್ ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಅನುಪಮ್ ಖೇರ್ ಕೂಡ ಹಲವು ಕಡೆ ಪ್ರಚಾರಕಾರ್ಯ ನಡೆಸುತ್ತಿದ್ದಾರೆ. ಘೋಸ್ಟ್ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್‌ಗಳು ಸಖತ್ ಸದ್ದು ಮಾಡಿವೆ. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸಿದ್ದು, ಶಿವಣ್ಣ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.