
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು 'ಬಿಗ್ ಬಾಸ್' ಖ್ಯಾತಿಯ ನಟ ಭುವನ್ ಪೊನ್ನಣ್ಣ (Bhuvan Ponnanna) ಅವರ ಮದುವೆ ಕಳೆದ ಆಗಸ್ಟ್ 24ರಂದು ಅದ್ಧೂರಿಯಾಗಿ ನಡೆದಿದೆ. ಮದುವೆ ಮುಗಿದು ಒಂದೂವರೆ ತಿಂಗಳು ಕಳೆದಿದೆ. ಈ ಜೋಡಿಯ ಬಗ್ಗೆ ಹೇಳುವುದಾದರೆ, ಇಬ್ಬರೂ ಕೊಡಗಿನವರೇ. ಚಿತ್ರರಂಗ ಮಾತ್ರವಲ್ಲದೇ ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ (Lockdown) ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದಾರೆ. ಆಗಲೇ ಇಬ್ಬರ ನಡುವೆ ಪ್ರೀತಿ ಹಬ್ಬಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಜೋಡಿ ಮಾತ್ರ ಗಪ್ಚುಪ್ ಆಗಿತ್ತು. ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ ಜೋಡಿ. ಒಬ್ಬ ಗೆಳೆಯನನ್ನು ಮದುವೆ ಆಗ್ತೀನಿ ಅನ್ನೋದು ಖುಷಿ ವಿಷಯ. ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಆಗುತ್ತಿರೋದು ಖುಷಿ ಆಗಿದೆ. ಭುವನ್ ಅವರು ನಿರ್ದೇಶನ ಮಾಡುತ್ತಿರುವ, ನಟಿಸುತ್ತಿರುವ ಸಿನಿಮಾವನ್ನು ನಾನೇ ಪ್ರೊಡ್ಯೂಸ್ ಮಾಡುತ್ತಿದ್ದೇನೆ. ನನ್ನ ಸಿನಿಮಾಗಳ ಕೆಲಸ ಕೂಡ ಇವೆ ಎಂದು ತಮ್ಮ ಮದುವೆಯ ಕುರಿತು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದರು.
ಇದೀಗ ಮದುವೆ ಮುಗಿದು ಒಂದೂವರೆ ತಿಂಗಳಾದ ಮೇಲೆ ಕೊಡವರ ಶೈಲಿಯ ಇವರ ಮದುವೆಯ ಸಂಪ್ರದಾಯದ ವಿಡಿಯೋ ಒಂದು ವೈರಲ್ ಆಗಿದೆ. ಇದು ಮದುವೆಯಾದ ಎಂಟನೆಯ ದಿನಕ್ಕೆ ವಧು ಕೊಡವರ ಸಂಪ್ರದಾಯದಂತೆ ವಧುವಿನ ತಾಯಿಯ ಮನೆಯಿಂದ ಆಕೆ ಅತ್ತೆಯ ಮನೆಗೆ ಹೋಗುವ ಪಯಣ. ಇದರ ವಿಡಿಯೋ ಅನ್ನು ನಟಿ ಇದೀಗ ಶೇರ್ ಮಾಡಿಕೊಂಡಿದ್ದಾರೆ. ಇನ್ನೊಂದು ಸುಂದರವಾದ ಆಚರಣೆಯಾಗಿದ್ದು, ಮದುವೆಯಾದ 8 ದಿನಗಳ ನಂತರ ವಧು ಮತ್ತು ವರರು ವಧುವಿನ ಮನೆಗೆ ಹೋಗುತ್ತಾರೆ ಮತ್ತು ಮರುದಿನ ಮನೆಯಿಂದ ಹೊರಡುವಾಗ, ವಧುವಿನ ತಾಯಿಯು ಕಬ್ಬಿನ ಪೆಟ್ಟಿಗೆಯಲ್ಲಿ 8 ವಿಧದ ತಿಂಡಿಗಳನ್ನು ತುಂಬುತ್ತಾರೆ. ವಧು ಅದನ್ನು ತಲೆಯ ಮೇಲೆ ಹೊತ್ತುಕೊಂಡು ವರನ ಮನೆಗೆ ಪ್ರಯಾಣ ಮಾಡಬೇಕು ಎಂದು ಈ ಸಂಪ್ರದಾಯದ ಬಗ್ಗೆ ಹರ್ಷಿಕಾ ಬರೆದುಕೊಂಡಿದ್ದಾರೆ. ಈ ಆಚರಣೆಗೆ ಪಾಲಿಯಾ ಎಂದು ಕರೆಯುತ್ತಾರೆ ಎಂದಿದ್ದಾರೆ. ಈ ಸಂಪ್ರದಾಯದ ಕುರಿತು ಇನ್ನಷ್ಟು ಹೇಳಿರುವ ನಟಿ, ವರನ ತಾಯಿ ನವವಧು ಮತ್ತು ವರನನ್ನು ಆರತಿಯೊಂದಿಗೆ ಸ್ವಾಗತಿಸುತ್ತಾರೆ ಮತ್ತು ದೇವರ ಕೋಣೆಯಲ್ಲಿ ಪಾಲಿಯಾ ಇಡುತ್ತಾರೆ ಎಂದಿರುವ ಹರ್ಷಿಕಾ, ಇಂಥ ಒಂದು ಅದ್ಭುತ ಆಚರಣೆಯನ್ನು ಸೆರೆ ಹಿಡಿದಿರುವುದಕ್ಕೆ ವಿಡಿಯೋಗ್ರಫರ್ಗೆ ಧನ್ಯವಾದ ಸಲ್ಲಿಸಿದ್ದಾರೆ.
ಮದುವೆಯಾದ ಬಳಿಕ ಹನಿಮೂನ್ಗಾಗಿ ಹರ್ಷಿಕಾ ದಂಪತಿ ಅಮೆರಿಕದಲ್ಲಿದ್ದರು. ಆ ಸಂದರ್ಭದಲ್ಲಿ . ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ರ‍್ಯಾಂಪ್ ವಾಕ್ ಮಾಡಿದ ಬಳಿಕ ಕೆಲ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದರು. ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಫ್ಯಾನ್ಸ್ ಖುಷಿ ಪಡಲು ಕಾರಣ ಏನೆಂದರೆ, ನಟಿ ರೆಡ್ ಕಲರ್ ಉಡುಗೆಯಲ್ಲಿ ಹರ್ಷಿಕಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರೂ, ಫ್ಯಾಷನ್ ಡ್ರೆಸ್ ಧರಿಸಿದ್ದರೂ ಮಾಂಗಲ್ಯವನ್ನು ತೆಗೆದಿರಲಿಲ್ಲ. ಇಂದು ನಟಿಯರು ಮಾತ್ರವಲ್ಲದೇ ಸಾಮಾನ್ಯ ಹೆಣ್ಣುಮಕ್ಕಳೂ ಮದುವೆಯಾದ ಮೇಲೆ ಫ್ಯಾಷನ್ ಉಡುಗೆ ತೊಟ್ಟಾಗ ಮಾಂಗಲ್ಯ ಬಿಚ್ಚಿಡುವುದು, ಬೋಳು ಹಣೆಯಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ಇದರ ಮಧ್ಯೆ ನಟಿಯೊಬ್ಬಳು ಹೀಗೆ ಸಂಪ್ರದಾಯ ಪಾಲಿಸಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇನ್ನು ಹರ್ಷಿಕಾ ಅವರು ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು 2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. PUC ಸಿನಿಮಾ ಮೂಲಕ ಹರ್ಷಿಕಾ ಮಿಂಚಿದರು. ಬಳಿಕ ಕೊಡುವ ಸಿನಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭೋಜಪುರಿ ಮತ್ತು ತಮಿಳು ಸಿನಿಮಾಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ. ಕೊನೆಯದಾಗಿ ಹರ್ಷಿಕಾ ಬೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭುವನ್ ಪೊನ್ನಣ್ಣ (Bhuvan Ponnanna) ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ, ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 2010ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕೂಲ್ ಸಖತ್ ಹಾಟ್ ಮಗ, ಕುಚಿಕು ಕುಚಿಕು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ರಾಂದವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ಭುವನ್ ತೆರೆಮೇಲೆ ಕಾಣಿಸಿಕೊಂಡಿಲ್ಲ.
ಸ್ವರ್ಗದಲ್ಲೇ ಮದ್ವೆ ಆಗಿದ್ರೂ ಭೂಮಿ ಮೇಲೆ ಮತ್ತೆ ಆಗೋದ್ಯಾಕೆ? ರಾಜ ರಾಣಿ ನಟ ಶಶಿ ಹೆಗ್ಡೆ ಹೇಳಿದ್ದಾರೆ ಕೇಳಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.