ಭಾರತಾಂಬೆ ಮಡಿಲಿನಲ್ಲಿ ಪವರ್; ಮಹಿಳೆ ಮಾತನಾಡುವಾಗ ಹೂ ಕೊಟ್ಟ ಪುನೀತ್ ರಾಜ್‌ಕುಮಾರ್!

By Vaishnavi Chandrashekar  |  First Published Oct 13, 2023, 5:06 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಡಿಯೋ. ರಾಜನೂ ಒಬ್ಬ ಎಂದು ಕಾಮೆಂಟ್ ಮಾಡಿದ ಜನರು....


ಕನ್ನಡ ಚಿತ್ರರಂಗ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಪ್ಪು ದೇವರಾಗಿದ್ದಾರೆ ನಮ್ಮೊಂದಿಗೆ ಇದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಅಕ್ಟೋಬರ್ 29 ಬಂದರೆ ಅಪ್ಪು ನಮ್ಮನ್ನು ಅಗಲಿ ಎರಡು ವರ್ಷ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೂಲಕ ಪವರ್ ಕುಟುಂಬದ ಪವರ್‌ಫುಲ್‌ ಕಾರ್ಯಗಳು ನಡೆಯುತ್ತಿದೆ. 

ಏನಿದು ವಿಡಿಯೋ?

Tap to resize

Latest Videos

ಯುವ ಐಕಾನ್ ( _Yuva_icon) ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ವೊಂದು ಪುನೀತ್ ರಾಜ್‌ಕುಮಾರ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದರೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಅನಿಸುತ್ತದೆ. ಮೊದಲು ಭಾರತಾಂಬೆ ಫೋಟೋ ಕೆಳಗೆ ಪುನೀತ್ ರಾಜ್‌ಕುಮಾರ್ ಫೋಟೋ ಇದೆ. ಫೋಟೋಗಳ ಮುಂದೆ ಮಹಿಳೆಯೊಬ್ಬರು ಭಾಷಣ ಮಾಡುತ್ತಿದ್ದಾರೆ ಆಗ ಇದ್ದಕ್ಕಿದ್ದಂತೆ ಅಪ್ಪು ಫೋಟೋಗೆ ಹಾಕಿರುವ ಸೇವಂತಿಗೆ ಹೂವ ಕೆಳಗೆ ಬರುತ್ತದೆ. ಅಲ್ಲಿದ್ದವರು ಆಶ್ಚರ್ಯ ಪಟ್ಟು ಅಪ್ಪು ಹೂ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

 

undefined

ಮದ್ವೆ ಆಗಿದೆ ಶರ್ಟ್‌ ಕೆಳಗೆ ಬಿಡಮ್ಮ; ಪುನೀತ್ 'ಬಿಂದಾಸ್' ನಟಿ ಕಾಲೆಳೆದ ನೆಟ್ಟಿಗರು!

'ಸೂರ್ಯನೊಬ್ಬ ಚಂದ್ರನೊಬ್ಬ ಈ ರಾಜನೊಬ್ಬ, ಮರೆಯಲಾಗದ ಮಾಣಿಕ್ಯ ಆರಾಧ್ಯ ದೈವ ಕಲಿಯುಗದ ಧಾನವೀರ, ಕರುನಾಡಿನ ಮುತ್ತು ಅವರೇ ಕರ್ನಾಟಕದ ರತ್ನ ಅಪ್ಪು ಸರ್, ನಾವು ಅಪ್ಪು ಅವರಿಗೆ ಮನೆಯಲ್ಲಿ ಪೂಜೆ ಮಾಡುವುದು ಅವರು ನಮಗೆ ಸದಾ ಹೂ ಕೊಡುತ್ತಾರೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಅಪ್ಪು ಅಗಲಿದಾಗ Life is unpredictable ಯಾರಿಗೆ ಏನಾಗುತ್ತೆ ಗೊತ್ತಿಲ್ಲ ಎಂದಿದ್ದರು ಸ್ಪಂದನಾ: ಸ್ನೇಹಿತೆ ನೇತ್ರಾ ಪಲ್ಲವಿ

ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿರುವುದು ಎಂದು ಮಾಹಿತಿ ತಿಳಿದು ಬಂದಿಲ್ಲ ಆದರೆ ನವೆಂಬರ್‌ ತಿಂಗಳಿನಲ್ಲಿ ಅನ್ನೋದು ಅನೇಕರ ಮಾತು. ಈಗಲೂ ಅದೆಷ್ಟೋ ಮಂದಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಹೋಗುವಾಗ ಅಪ್ಪು ಫೋಟೋ ಹಿಡಿದು ಮೆಟ್ಟಿಲು ಹತ್ತುತ್ತಾರೆ, ಅಣ್ಣಮ್ಮ ದೇವಿ ಪೂಜೆ ಮಾಡುತ್ತಿದ್ದರೆ ಪಕ್ಕದಲ್ಲಿ ಅಪ್ಪು ಫೋಟೋ ಇರುತ್ತದೆ, ಕಾರು ಮತ್ತು ಆಟೋಗಳ ಮೇಲೆ ಅಪ್ಪು ಫೋಟೋ ಇರುತ್ತದೆ...ಹೀಗೆ ಪ್ರತಿ ದಿನ ಪ್ರತಿ ಕ್ಷಣವೂ ಅಪ್ಪು ನೆನಪಿಸಿಕೊಳ್ಳುವ ಅಭಿಮಾನಿಗಳು ದೇಶದ್ಯಾಂತ ಇದ್ದಾರೆ.

 

click me!