ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!

ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!

Published : Jul 05, 2026, 03:38 PM IST

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ, ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸ್ಟೈಲ್ ಸಿನಿಮಾ…

ಶಿವಣ್ಣ ಕರಿಯರ್‌ನಲ್ಲೇ ಮೋಸ್ಟ್ ಸ್ಪೆಷಲ್ ಸಿನಿಮಾ! ಏನಿದು 666 ಆಪರೇಷನ್ ಡ್ರೀಮ್ ಥಿಯೇಟರ್..?
666 ಆಪರೇಷನ್ ಡ್ರೀಮ್ ಥಿಯೇಟರ್: ಈ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ... ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ... ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸಿನಿಮಾ ಸ್ಟೈಲ್​ನ ಗೆಟಪ್ಸ್.. ರೆಟ್ರೋ ಪೋಸ್ಟರ್ಸ್ ಫ್ಯಾನ್ಸ್ ಗಮನ ಸೆಳೆದಿದ್ವು. ಇದೀಗ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಧೂಳ್ ಎಬ್ಬಿಸ್ತಾ ಇದೆ.

ಅಸಲಿಗೆ ಶಿವಣ್ಣನ ಜೊತೆಗೆ ಸಿನಿಮಾ ಮಾಡಬೇಕು ಅಂತ ಫಿಕ್ಸ್ ಆಗಿದ್ದ ನಿರ್ದೇಶಕ ಹೇಮಂತ್ ಶಿವಣ್ಣನಿಗಾಗೇ ಈ ಕಥೆ ಮಾಡಿದ್ದಂತೆ. ಬಾಂಡ್ ಶೈಲಿಯ ಕಥೆ ಹೆಣೆದು ಶಿವಣ್ಣನನ್ನ ಅಣ್ಣಾವ್ರ ರೀತಿ ತೆರೆ ಮೇಲೆ ತೋರಿಸಿದ್ದಾರೆ ಹೇಮಂತ್.

ಡಾ. ರಾಜಕುಮಾರ್ ನಟನೆಯ ಬಾಂಡ್ ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ಪ್ರಕಾಶ್ ಅನ್ನೋ ಹೆಸರು ಇರ್ತಾ ಇತ್ತು. ಅದೇ ಹೆಸರಿನ ಪಾತ್ರವನ್ನೆ ಶಿವಣ್ಣ ಇಲ್ಲಿ ಮಾಡಿದ್ದಾರೆ. ಡಾಲಿ ಧನಂಜಯ್ ಇಲ್ಲಿ ಶಂಕರ್ ಅನ್ನೋ ಪಾತ್ರ ನಿರ್ವಹಿಸಿದ್ದಾರೆ.

ಪ್ರಿಯಾಂಕಾ ಮೋಹನ್ ಸೇರಿದಂತೆ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಇದೂವರೆಗೂ 130 ಪ್ಲಸ್ ಸಿನಿಮಾ ಮಾಡಿದ್ದಾರೆ. ಅವರನ್ನ ಫ್ಯಾನ್ಸ್ ಕೂಡ ನೂರಾರು ಅವತಾರದಲ್ಲಿ ನೋಡಿದ್ದಾರೆ. ಈ ಸಿನಿಮಾ ಶಿವಣ್ಣನ ಪಾಲಿಗೂ ಸ್ಪೆಷಲ್.. ಫ್ಯಾನ್ಸ್​ಗೂ ಸಖತ್ ಟ್ರೀಟ್ ಕೊಡೋದ್ರಲ್ಲಿ ಡೌಟೇ ಇಲ್ಲ...!
'ಸಿನಿಮಾ ಹಂಗಾಮ' ನೋಡಿ...

02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more