'ಬಾನದಾರಿಯಲ್ಲಿ ಸೂರ್ಯ' ಹಾಡಿನ ರೆಕಾರ್ಡಿಂಗ್​ ವೇಳೆ ಆಗಿದ್ದೇನು? ಅಪ್ಪುವನ್ನು ನೆನೆದು ಶಿವಣ್ಣ ಭಾವುಕ

Published : Nov 12, 2026, 06:57 PM IST
Shivaraj Kumar about Appu

ಸಾರಾಂಶ

ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ನೋವಿನ ನಡುವೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಶಿವರಾಜ್‌ಕುಮಾರ್ ಅವರು ಅಪ್ಪುವಿನ ಬಾಲ್ಯದ ಅದ್ಭುತ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಭಾಗ್ಯವಂತರು ಚಿತ್ರದ ಹಾಡೊಂದನ್ನು ಒಂದೇ ಟೇಕ್‌ನಲ್ಲಿ ಹಾಡಿದ ಪರಿಗೆ ಬೆರಗಾಗಿ, ಅಪ್ಪು ನಮ್ಮ ಕುಟುಂಬದ ದೇವರ ಮಗ ಎಂದು ಭಾವುಕರಾಗಿದ್ದಾರೆ.

ಬೆಂಗಳೂರು: 1981ರಲ್ಲಿ ಬಿಡುಗಡೆಯಾದ ಭಾಗ್ಯವಂತರು ಸಿನಿಮಾ ನೋಡಿದವರಿಗೆ ಆ ಮುದ್ದು ಮೊಗದ ಪುಟಾಣಿಯ ನೆನಪು ಮಾಸದೇ ಇರಲು ಸಾಧ್ಯವೇ ಇಲ್ಲ. ಆ ಪುಟಾಣಿಯೇ ಅಂದಿನ ಲೋಹಿತ್​, ನಂತರದ ಪುನೀತ್​ ರಾಜ್​. ಎಲ್ಲರ ಪ್ರೀತಿಯ ಅಪ್ಪು. ಎಲ್ಲರ ಬಾಯಲ್ಲಿಯೂ ಅಪ್ಪು ಎಂದೇ ಕರೆಸಿಕೊಳ್ತಿರೋ, ಕನ್ನಡದ ಕಣ್ಮಣಿ ಎಂದೇ ಬಿಂಬಿತವಾಗಿರುವ ನಟ ಪುನೀತ್​ ರಾಜ್​ಕುಮಾರ್​ ಅವರು ಎಲ್ಲರನ್ನೂ ಅಗಲಿ ಇಂದಿಗೆ ಕಳೆದ ಅಕ್ಟೋಬರ್​ 29 ರಂದು ಐದು ವರ್ಷಗಳೇ ಗತಿಸಿವೆ. ಪುನೀತ್ ರಾಜ್‌ಕುಮಾರ್ ಅವರು ಕೇವಲ 46 ವರ್ಷ ವಯಸ್ಸಿನಲ್ಲಿ ಅಗಲಿದ್ದಾರೆ. ಬದುಕಿರುವಾಗಲೂ ಹಲವರ ಬಾಳಿಗೆ ಬೆಳಕಾಗಿ, ಮೃತರಾದ ಮೇಲೂ ಅಂಗಾಂಗ ದಾನದ ಮೂಲಕ ಹಲವರ ಬದುಕನ್ನು ಹಸನುಗೊಳಿಸಿರುವ ಅಪ್ಪು, ಅವರನ್ನು ನೆನೆದು ಅವರು ಲಕ್ಷಾಂತರ ಫ್ಯಾನ್ಸ್​ ಇಂದು ಕಣ್ಣೀರಿನ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ. ಪುನೀತ್​ ಅವರ ಹಲವು ಅಭಿಮಾನಿಗಳು ಇಂದು ರಕ್ತದಾನದಂಥ ವಿಶೇಷ ಕಾರ್ಯಗಳನ್ನೂ ನೆರವೇರಿಸುತ್ತಿದ್ದಾರೆ.

ಇದೀಗ ಜೀ ಕನ್ನಡ ವೇದಿಕೆಯಲ್ಲಿ dance karnataka dance show ಸಂದರ್ಭದಲ್ಲಿ, ಅಣ್ಣ ಶಿವರಾಜ್​ ಕುಮಾರ್​ ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ಭಾಗ್ಯವಂತರು ಸಿನಿಮಾಕ್ಕೆ ಬಾನದಾರಿಯಲ್ಲಿ ಸೂರ್ಯ ರೆಕಾರ್ಡಿಂಗ್​ ವೇಳೆ ದಿಗ್ಗಜರನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ ಒಂದೇ ಟೇಕ್​ಗೆ ಸಲೀಸಾಗಿ ಹಾಡು ಮುಗಿಸಿ ಬಂದದ್ದನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ. ಅಂದು, ಈ ದಿನಗಳ ರೀತಿಯಲ್ಲಿ ರೆಕಾರ್ಡಿಂಗ್​ ಇರಲಿಲ್ಲ. ರೆಕಾರ್ಡಿಂಗ್​ ಮಾಡುವುದು ಕಷ್ಟ ಎನ್ನಿಸುವ ದಿನಗಳವು. ಆಗ ಎಲ್ಲರಿಗೂ ಅಚ್ಚರಿ ಎನ್ನುವಂತೆ ಸಲೀಸಾಗಿ ಹಾಡು ಹಾಡಿ ಬಂದುಬಿಟ್ಟಿದ್ದ ಆತ. ಆತ ದೇವರ ಮಗ ಎನ್ನುತ್ತಲೇ ಭಾವುಕರಾಗಿದ್ದಾರೆ.

ಆತ ದೇವರ ಮಗ ಎಂದ ಶಿವಣ್ಣ

ಆ ಟ್ಯಾಲೆಂಟ್​ ಅಪ್ಪುಗೆ ಎಲ್ಲಿಂದ ಬಂತೋ ಗೊತ್ತಿಲ್ಲ. ನಮ್ಮ ಫ್ಯಾಮಿಲಿಯಲ್ಲಿ ಆತ ದೇವರ ಮಗ. ಅಪ್ಪು ಗಾಡ್​ ಗಿಫ್ಟ್​. ನಿಜ ಹೇಳಬೇಕು ಎಂದ್ರೆ ನನಗೂ ಆತನೇ ಇನ್​ಸ್ಪಿರೇಷನ್​. ಒಂದೊಂದು ಸಲ ಏಕೆ ಮಾಡೋದು ಎಂದು ಬಿಟ್ಟಿದ್ದು ಇದೆ. ಆಗ ಅಪ್ಪುನೇ ಮಾಡ್ತಾರೆ, ನಿಮಗೇನು ಎಂದು ಕೇಳಿದಾಗ ಆತನ ಇನ್​ಸ್ಪಿರೇಷನ್​ ಪಡೆದೇ ನಾನು ಕೆಲವೊಂದು ಡಾನ್ಸ್​ ಮಾಡಿದ್ದಿದೆ ಎಂದು ನೆನಪಿಸಿಕೊಂಡಿದ್ದಾರೆ ಶಿವಣ್ಣ.

ಚಿಕ್ಕ ವಯಸ್ಸಿನಲ್ಲಿಯೇ ನ್ಯಾಷನ್​ ಅವಾರ್ಡ್​ ತಗೊಂಡ. ನಿಜಕ್ಕೂ ಅದು ಅಚ್ಚರಿಯೇ. ಅದಕ್ಕೇ ಆತ ದೇವರ ಮಗ ಎನ್ನೋದು. ಆತನಿಗೆ ಪವರ್​ಸ್ಟಾರ್​ ಎಂದು ಹೆಸರು ಕೊಟ್ಟಿದ್ದೂ ನಾನೇ. ಅದು ನನಗೆ ಖುಷಿಯಿದೆ ಎಂದು ಅಂದಿನ ದಿನಗಳನ್ನು ಶಿವರಾಜ್​ ಕುಮಾರ್​ ನೆನಪಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೇಮದ ಊರಲಿ ಸಿನಿಮಾಗಿಂತ ಮೊದಲು ರ‍್ಯಾಪಿಡೋ ರೈಡರ್ ಆಗಿದ್ದ ನಟ; ಒಂದು ಸಿನಿಮಾ ಬದುಕನ್ನೇ ಬದಲಿಸಿತು!
ನನ್ನನ್ನ ಪ್ರಭಾಸ್, ಶಂಕರ್ ನಾಗ್‌ಗೆ ಹೋಲಿಸಿದರೆ ತುಂಬಾ ಭಯವಾಗುತ್ತೆ; ಪ್ರೇಮದ ಊರಲಿ ನಾಯಕ ನಟ ಶ್ರೀರಾಮ್