
ಬೆಂಗಳೂರು: ನಟ ಶರತ್ ಬಾಬು, ನಟಿ ಸುಹಾಸಿನಿ ಹಾಗೂ ರಮೇಶ್ ಅರವಿಂದ್ ಅಭಿನಯದ ಅಮೃತವರ್ಷಿಣಿ ಸಿನಿಮಾ ರಿಲೀಸ್ ಆಗಿದ್ದು 1997ರಲ್ಲಿ. ಆದರೆ ಇದು ಇಂದಿಗೂ ಹಚ್ಚ ಹಸಿರಾಗಿಯೇ ಇದೆ. ಅಮೃತವರ್ಷಿಣಿ ಚಿತ್ರ ಬಂದು 30 ವರ್ಷ ಆಗಿದೆ. ಜನವರಿ-29, 1997 ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಈ ಲೆಕ್ಕದಂತೆ ಮುಂದಿನ ವರ್ಷ ಈ ಸಿನಿಮಾ ಬಂತು 30 ವರ್ಷ ಆಗುತ್ತದೆ. 30 ವರ್ಷಗಳ ಬಳಿಕವೂ ಒಂದು ಸಿನಿಮಾದ ಹಾಡು ಎಲ್ಲರ ಮನಸ್ಸಿನಲ್ಲಿ ಮರೆಯದೇ ಉಳಿದಿದೆ ಎಂದರೆ ಈ ಸಿನಿಮಾ ಎಷ್ಟು ಕಮಾಲ್ ಮಾಡಿತ್ತು ಎನ್ನುವುದು ತಿಳಿದಿದೆ. ಈ ಚಿತ್ರದ ಬಗ್ಗೆ ಇದ್ದ ಆ ಕ್ರೇಜ್ ಇನ್ನೂ ಇದೆ. ಇದೇ ಕಾರಣಕ್ಕೆ ಇದೀಗ ಅಮೃತವರ್ಷಿಣಿ-2 ಬಿಡುಗಡೆಗೆ ಚಿತ್ರ ತಂಡ ಸಜ್ಜಾಗಿದೆ!
ಇದೀಗ ಅಮೃತವರ್ಷಿಣಿ-2 ಸಿನಿಮಾ ಬರೋದು ಪಕ್ಕಾ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಶುರು ಆಗುತ್ತಿರುವುದಾಗಿ ತಿಳಿದು ಬಂದಿದೆ. ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಅವರು ಈ ಚಿತ್ರದಲ್ಲೂ ಜೋಡಿ ಆಗುತ್ತಿದ್ದಾರೆ ಎನ್ನಲಾಗಿದೆ. ರಾಮಕೃಷ್ಣ ಮತ್ತು ತಾರಾ ಅನುರಾಧಾ ಅವರು ಈ ಸಿನಿಮಾದಲ್ಲಿದ್ದಾರೆ. ಪಾರ್ಟ್-1 ನಿರ್ದೇಶನ ಮಾಡಿದ್ದ ದಿನೇಶ್ ಬಾಬು ಅವರೇ ಪಾರ್ಟ್-2 ಕೂಡ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಜನವರಿ 14ರ ಸಂಕ್ರಾಂತಿ ಹಬ್ಬದಂದು ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಕೊಡೈಕೆನಾಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಬಿ.ಎಸ್. ಸುಧೀಂದ್ರ ಹಾಗೂ ಆರ್. ನವೀನ್ ನಿರ್ಮಾಣದಲ್ಲಿ ಪಾರ್ಟ್-2 ಬರುತ್ತಿದೆ. ಅಂದಹಾಗೆ, ಪಾರ್ಟ್-1 ಕಥೆಯನ್ನು ಚುಟುಕಾಗಿ ಹೇಳುವುದಿದ್ದರೆ, ಹೇಮಂತ್ ಮತ್ತು ವೀಣಾ ಸುಖೀ ದಾಂಪತ್ಯ ಜೀವನ ನಡೆಸುತ್ತಿರುತ್ತಾರೆ. ಹೇಮಂತ್‌ನ ಬಾಲ್ಯದ ಆಪ್ತ ಗೆಳೆಯನಾದ ಅಭಿಷೇಕ್ ಇವರ ಮನೆಗೆ ಅತಿಥಿಯಾಗಿ ಬರುತ್ತಾನೆ. ವೀಣಾಳ ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಮನಸೋಲುವ ಅಭಿಷೇಕ್, ಆಕೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಾನೆ. ತನ್ನ ಗೆಳೆಯ ಹೇಮಂತ್‌ನನ್ನು ಬೆಟ್ಟದ ತುದಿಯಿಂದ ತಳ್ಳಿ ಕೊಲೆ ಮಾಡುವ ಅಭಿಷೇಕ್, ಅದು ಆಕಸ್ಮಿಕ ಅಪಘಾತವೆಂದು ಬಿಂಬಿಸುತ್ತಾನೆ.
ಪತಿಯ ಸಾವಿನ ನಂತರ ಆಘಾತಕ್ಕೊಳಗಾದ ವೀಣಾಳನ್ನು ಅಭಿಷೇಕ್ ಮದುವೆಯಾಗಲು ಬಯಸುತ್ತಾನೆ. ಆದರೆ ಕೊನೆಯಲ್ಲಿ ಅಭಿಷೇಕ್‌ನ ನಿಜವಾದ ಮುಖ ಮತ್ತು ಹೇಮಂತ್ ಸಾವಿನ ರಹಸ್ಯ ವೀಣಾಳಿಗೆ ತಿಳಿದು, ಆಕೆ ತೆಗೆದುಕೊಳ್ಳುವ ದಿಟ್ಟ ನಿರ್ಧಾರದೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಕ್ಲೈಮ್ಯಾಕ್ಸ್ ಮಾತ್ರ ಯಾರೂ ಊಹಿಸದಂತಾಗಿದೆ. ಇದರಲ್ಲಿ ಖುದ್ದು ವೀಣಾ ಸಾವನ್ನಪ್ಪಿ, ಜೀವನ ಪರ್ಯಂತ ಅಭಿಷೇಕ್ ಕೊರೆಯುವ ಹಾಗೆ ಮಾಡುತ್ತಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.