
ಮಾಜಿ ನೀಲಿ ತಾರೆಗೆ 1 ಕೋಟಿ ಕೊಟ್ಟಿದ್ದ ನೀಲಣ್ಣನವರ್..!
ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್..! 4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ಸನ್ನಿ ಲಿಯೋನ್..!
ಸ್ಯಾಂಡಲ್ವುಡ್ನಲ್ಲೂ ಶಿವಾನಂದನ ಡಿಂಗರ್ಬಿಲ್ಲಿ ಆಟ; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ..!
ನಟಿ ಸಲ್ಲಿ ಲಿಯೋನ್ ಮೇಲೆ ದುಡ್ಡು ಸುರಿದವರು ಒಬ್ರಾ ಇಬ್ರಾ..? ಈ 4500 ಕೋಟಿ ವಂಚನೆ ಪ್ರಕರಣಲ್ಲಿ ಸಿಕ್ಕಿ ಬಿದ್ನಲ್ಲಾ ಶಿವಾನಂದ ನೀಲಣ್ಣನವರ್, ಆ ವಂಚಕ ಕೂಡ ಸನ್ನಿ ಮೇಲೆ ಕೋಟಿ ಕೋಟಿ ಸುರಿದಿದ್ದಾನೆ. ಅರೆ ನಮ್ ಸನ್ನಿ ಲೀಯೋನ್ಗೂ ಶಿವಾನಂದ ನೀಲಣ್ಣನವರ್ಗು ಎಲ್ಲಿಂದೆಲ್ಲಿ ಸಂಬಂಧ ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..
ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ!
ಇವತ್ತು ಇಡೀ ರಾಜ್ಯವೇ ಬೆಚ್ಚಿ ಬೀಳೋ ಮಹಾ ವಂಚನೆಯೊಂದು ಬೆಳಕಿಗೆ ಬಂದಿದೆ. ಆ ವಂಚನೆಯ ರುವಾರಿ ಶಿವಂ ಅಸೋಸಿಯೇಟ್ಸ್ ಮಾಲೀಕ, ಹುಬ್ಬಳ್ಳಿಯ ಶಿವಾನಂದ್ ನೀಲಣ್ಣನವರ್. ಬರೋಬ್ಬರಿ 4500 ಕೋಟಿ ದೋಖಾ ಕೇಸ್ ಅನ್ನ ಮೈ ಮೇಲೆ ಎಳೆದುಕೊಂಡಿರೋ ಈ ಶಿವಾನಂದ್ನೀಲಣ್ಣನವರ್ಆ ದುಡ್ಡಲ್ಲೊಂದಷ್ಟನ್ನ ನೀಲಿ ತಾರೆ ಮೇಲೆ ಸುರಿದಿದ್ದ.. ಈತ 35 ಸಾವಿರ ಜನರಿಗೆ ಕೋಟಿ ಕೋಟಿ ವಂಚಿಸಿದ್ದ ಅನ್ನೋದಷ್ಟೇ ಅಲ್ಲ, ಸ್ಯಾಂಡಲ್‌ವುಡ್ ಜೊತೆಗೂ ಈ ನೀಲಣ್ಣನವರ್ ಗೆ ಲಿಂಕ್ ಇತ್ತು ಅನ್ನೋದು ಇಂಟ್ರೆಸ್ಟಿಂಗ್...
ಯೆಸ್, ಈ ಶಿವಾನಂದ್ನೀಲಣ್ಣನವರ್ಗೆ ಬಡ್ಡಿ ದುಡ್ಡು ಮಾಡೋದೊಂದೇ ವ್ಯಾಪಾರ ಅಲ್ಲ. ಸಿನಿಮಾ ಫ್ಯಾಷನ್ ಕೂಡ ಇತ್ತು. ಅದು ಯಾವ್ ಮಟ್ಟದ ಫ್ಯಾಷನ್ ಅಂದ್ರೆ, ಬಾಲಿವುಡ್ನ ಹಾಟಿ ನೀಲಿ ತಾರೆ ಅಂತಲೇ ಫೇಮಸ್ ಆಗಿದ್ದ ಸನ್ನಿ ಲಿಯೋನ್ರನ್ನ ಎಷ್ಟೇ ದುಡ್ಡು ಖರ್ಚಾದ್ರು ಪರವಾಗಿಲ್ಲ, ಕನ್ನಡದ ಸಿನಿಮಾಕ್ಕೆ ಕರೆ ತರಬೇಕು ಅನ್ನೋ ದೊಡ್ಡ ಹಟ.. ಅದು ಚಾಂಪಿಯನ್ ಅನ್ನೋ ಸಿನಿಮಾಕ್ಕಾಗಿ ಮಾಡಿದ ಶಪಥ..
2023ರಲ್ಲಿ ಇದೇ ಶಿವಾನಂದ್ ನೀಲಣ್ಣನವರ್ಕನ್ನಡದಲ್ಲಿ ಚಾಂಪಿಯನ್ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನರ್ತಿಸೋಕೆ ನೀಲಿತಾರೆ ಸನ್ನಿ ಲಿಯೋನ್ರನ್ನ ಕರೆಸಿದ್ದ. ಸನ್ನಿನೋ ನೀಲಣ್ಣ ಕೊಟ್ಟ ಬಿಲ್ಡಪ್ಗೆ ಮನಸೋತು 'ಡಿಗ್ರಿಬಿಲ್ಲಿ ನಾನು..' ಅಂತ ಸಖತ್ ಆಗಿ ಡಾನ್ಸ್ ಮಾಡಿದ್ಲು..
ಪಡ್ಡೆ ಹುಡುಗರ ಮನದರಸಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್'ಚಾಂಪಿಯನ್' ಸಿನಿಮಾದ ಸ್ಪೆಷಲ್ಹಾಡಿಗೆ ನರ್ತಿಸೋದಕ್ಕಾಗಿ ಭಾರಿ ಡಿಮ್ಯಾಂಡ್ ಮಾಡಿದ್ರು. ಅಂದೋ ಶಿವಾನಂದ್ಬಳಿ ಕೈ ತುಂಬ ದುಡ್ಡು ಓಡಾಡ್ತಿದ್ದ ಕಾಲ. ಹಿಂದೆ ಮುಂದೆ ಯೋಚ್ನೆ ಮಾಡದೇ ಸನ್ನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಕೊಟ್ಟು ಜೆಸ್ಟ್ ಒಂದೇ ಒಂದು ಹಾಡಿನಲ್ಲಿ ಡಾನ್ಸ್ ಮಾಡಿಸಿದ್ದ.
ಆದ್ರೆ ಸನ್ನಿ ಕುಣಿದಿದ್ದ ಆ 'ಚಾಂಪಿಯನ್' ಸಿನಿಮಾ ಏನು ದೊಡ್ಡ ಹಿಟ್ ಆಗ್ಲಿಲ್ಲ. ಸ್ಯಾಂಡಲ್ವುಡ್ನಲ್ಲಿ ಚಾಂಪಿಯನ್ ಆಗೋಕೆ ಬಂದಿದ್ದ ಶಿವಾನಂದ್ನೀಲಣ್ಣನವರ್ಇವತ್ತು ಕೈಗೆ ಕೋಳ ತೊಡೋ ಹಾಗಾಗಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.