
ನಟ ದರ್ಶನ್ ಬಣ್ಣದ ಜಗತ್ತಿನಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ರು. ಅಕ್ಕ ಪಕ್ಕ ಜೈಕಾರಕ್ಕೆ ಜನ ಇದ್ರು. ಕೋಟಿ ಕೋಟಿ ದುಡ್ಡ ಸಿಗ್ತಾ ಇತ್ತು. ಸ್ಟಾರ್ಡಮ್ನ ತಲೆ ಮೇಲೆ ಇಟ್ಟು ಓಡಾಡುತ್ತಿದ್ದ ದರ್ಶನ್ ಸಂಸಾರದ ಗುಟ್ಟನ್ನ ಬೀದಿಗೆ ತಂದುಕೊಂಡ್ರು.. ಇದರಿಂದ ಆಗಿದ್ದೆಲ್ಲಾ ಅನಾಹುತಗಳೇ.. ಈಗ ಆ ಅನಾಹುತಗಳ ಜೊತೆಗೆ ಜೀವಿಸ್ತಾ ತನ್ನ ವೆಡ್ಡಿಂಗ್ ಆನಿರ್ಸರಿ ಆಚರಿಸುತ್ತಿದ್ದಾರೆ.
ಸಮಾಜದಲ್ಲಿ ಸೂಪರ್ ಸ್ಟಾರ್ ಪಟ್ಟ.. ಮನೆಯಲ್ಲಿ ಜಗಳ ಕಿತ್ತಾಟ..!
ನಟ ದರ್ಶನ್ ಸಮಾಜದಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟ.. ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನ ಕೊಟ್ಟು ದೊಡ್ಡ ಸ್ಟಾರ್ ಆಗಿ ಬೆಳೆದಿದ್ರು. ದಾಸನಿಗೆ ಲಕ್ಷಾಂತರ ಫಾನ್ಸ್ ಹುಟ್ಟುತ್ತಿದ್ದ ಕಾಲ ಅದು. ಆದ್ರೆ ಸಂಸಾರ ಅಂದ್ಮೇಲೆ ಉಪ್ಪು ಹುಳಿ ಕಾರ ಇದ್ದಿದ್ದೇ ಅಲ್ವಾ.. ಬಟ್ ದರ್ಶನ್ ಸಂಸಾರದಲ್ಲಿ ಉಪ್ಪು ಕಾರಕ್ಕಿಂತ ಹುಳಿ ಬಿದ್ದಿದ್ದೇ ಹೆಚ್ಚು.. ಅದು ನಟಿ ನಿಖಿತಾ ಅನ್ನೋ ಹಾಟೆಸ್ಟ್ ಹುಳಿ..
ನಿಖಿತಾ ಜೊತೆ ಸುತ್ತಾಟ ಗಾಸಿಪ್.. ಹೆಂಡತಿ ವಿಜಯಲಕ್ಷ್ಮೀ ಮೇಲೆ ಹಲ್ಲೆ..!
ದರ್ಶನ್ ಜೊತೆ ಪ್ರಿನ್ಸ್, ಯೋಧ, ಸಂಗೊಳ್ಳಿ ರಾಯಣ್ಣ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿಖಿತಾ ಅನ್ನೋ ನಾರ್ತ್ ನಟಿಮಣಿ ಜೊತೆ ನಟ ದರ್ಶನ್ ಹೆಸರು ಕೇಳಿಬಂತು. ಇಬ್ಬರು ಎಲ್ಲಂದರಲ್ಲಿ ಸುತ್ತುತ್ತಿದ್ದಾರೆ ಸಿಕ್ಕಿ ಬೀಳುತ್ತಿದ್ದಾರೆ ಅನ್ನೋ ಸುದ್ದಿ ಸ್ಯಾಂಡಲ್ವುಡ್ ಆವರಿಸಿತ್ತು. ಈ ಆಘಾತಕಾರಿ ವಿಷ್ಯ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕಿವಿಗೂ ತಾಗಿತ್ತು. ಅದೇ ಸಮಯದಲ್ಲಿ ದರ್ಶನ್ ಪ್ರೀತಿಯ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರು. ವಿಜಯಲಕ್ಷ್ಮೀ ಕಿವಿಯೇ ಹರಿದುಹೋಗಿತ್ತು.
ದಾಸನ ಮೇಲೆ ಬಿತ್ತು ಕೌಟುಂಬಿಕ ಹಿಂಸೆ ಕೇಸ್
ಮನಸಾರೆ ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ ಧರ್ಮಕ್ಷೇತ್ರದಲ್ಲಿ ಮದುವೆಯೂ ಆಗಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದ ದರ್ಶನ್ರ ಮುದ್ದು ರಾಕ್ಷಸಿ ವಿಜಯಲಕ್ಷ್ಮೀ ಜೀವನ ಬೀದಿಗೆ ಬಂದಿದ್ದು 2011ರಲ್ಲಿ. ಅದು ದರ್ಶನ್ ಮಾಡಿದ್ದ ಮಾರಣಾಂತಿಕ ಹಲ್ಲೆಯಿಂದ. ಆಗ ದಾಸನ ಮೇಲೆ ಕೌಟುಂಬಿಕ ಕಲಹದ ಕೇಸ್ ದಾಖಲಾಗಿತ್ತು. ಅಂದು ದಚ್ಚು ಮೊದಲ ಭಾರಿಗೆ 11 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗಿತ್ತು..
ಕೇಸ್ ಹಿಂಪಡೆದಿದ್ದ ವಿಜಯಲಕ್ಷ್ಮೀ..!
ನಟ ದರ್ಶನ್ ಪತ್ನಿ ಅಂತಲೂ ನೋಡದೇ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದನ್ನ ನೋಡಿದ್ರೆ, ದಾಸ ಅದೆಷ್ಟು ತಿಂಗಳುಗಳ ಕಾಲ ಜೈಲಿನಿಂದ ಹೊರ ಬರೋದೇ ಡೌಟ್ ಆಗಿತ್ತು. ಆದ್ರೆ ಕ್ಷಮಯಾಧರಿತ್ರಿ ಆಗಿದ್ದ ಪತ್ನಿ ವಿಜಯಲಕ್ಷ್ಮೀ, ಪತಿ ಮಡಿದ್ದೆಲ್ಲ ತಪ್ಪನ್ನು ಕ್ಷಮಿಸಿ ಕೇಸ್ ವಾಪಾಸ್ ಪಡೆದು, ಜೈಲಿನಿಂದ ಬಿಡಿಸಿಕೊಂಡು ಬಂದಿದ್ರು. ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಹೊರ ಬಂದಮೇಲೆ ದರ್ಶನ್ ಸಿನಿಮಾಗಳ ಹಿಟ್ ಲೀಸ್ಟ್ ಸೇರ್ತಾ ಹೋದ್ವು. ಕೋಟಿ ಕೋಟಿ ಹಣ ದಾಸನ ಕಾಲ ಬುಡಕ್ಕೆ ಬಂದು ಬೀಳಲು ಶುರುವಾಯ್ತು. ಆದ್ರೆ ಅದೇನ್ ಮನಸ್ಸೋ ಏನೋ.. ನಟಿ ಪವಿತ್ರಾ ಗೌಡ ಅನ್ನೋ ಮುದ್ದಾದ ಗೊಂಬೆಯ ಸ್ನೇಹದಲ್ಲಿ ದಾಸ ಜಾರಿದ್ರು. ಈ ಸ್ನೇಹಕ್ಕೆ ಹಲವು ಬಣ್ಣಗಳು ಕಟ್ಟಿಕೊಂಡ್ವು.
ನಟಿ ಪವಿತ್ರಾ ಗೌಡ ಸಹವಾಸ.. ಮತ್ತೆ ದಾಸನಿಗಾಯ್ತು ಜೈಲು ವಾಸ..!
ನಟಿ ಪವಿತ್ರಾ ಗೌಡ ದರ್ಶನ್ ಜೊತೆ ಸದಾ ಕಾಲ ಕಾಣಿಸಿಕೊಳ್ಳೋಕೆ ಶುರುಮಾಡಿದ್ರು. ಇದನ್ನ ದರ್ಶನ್ ಎಲ್ಲೂ ರಿವಿಲ್ ಮಾಡದಿದ್ರು. ಪವಿತ್ರಾ ಗೌಡ ಆಗಾಗ ಫೋಟೋಗಳನ್ನ ಹಂಚಿಕೊಳ್ಳುತ್ತಾ ಹೇಳುತ್ತಿದ್ರು. ಆದ್ರೆ ರೇಣುಕಾಸ್ವಾಮಿ ಪವಿತ್ರಾ ಗೌಡ ಮೇಲೆ ಕಣ್ಣಾಗಿದ್ದ ಅನ್ನೋ ಒಂದೇ ಕಾರಣಲ್ಲಿ ನಟ ದರ್ಶನ್ ಮತ್ತು ಸಹಚರರಿಂದ ಜೀವವನ್ನೇ ಕಳೆದುಕೊಳ್ಳಬೇಕಾಯ್ತು ಅನ್ನೋ ಆರೋಪ ಈಗ ಬಂದಿದೆ. ಇದರಿಂದ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಗೆ ಪಾಠ ಕಲಿಸೋದಕ್ಕೆ ಹೋಗಿ ಕೊಲೆ ಕೇಸ್‌ನಲ್ಲಿ ಸಿಲುಕಿ ದರ್ಶನ್ ಜೈಲು ಸೇರಿದ್ರು. ಆಗ ಹಳೆಯ ಕಹಿಯನ್ನ ಮರೆತು ವಿಜಯಲಕ್ಷ್ಮೀ ಮತ್ತೆ ಪತಿಯ ರಕ್ಷಣೆಗೆ ನಿಂತ್ರು. ದರ್ಶನ್ಗೆ ಬೇಲ್ ಕೊಡಿಸೋಕೆ ಕಂಡ ಕಂಡ ಲಾಯರ್ಗಳ ಬಳಿ ಅಲೆದ್ರು. ಇರೋ ಬರೋ ದೈವಗಳಿಗೆಲ್ಲಾ ಹರಕೆ ಹೊತ್ರು. ಕೊನೆಗೂ ದರ್ಶನ್ ಮಂಧ್ಯಂತರ ಬೇಲ್ ಮೇಲೆ ರಿಲೀಸ್ ಆದ್ರು.
ಕಳೆದ ವರ್ಷ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ರು. ಇದೇ ಟೈಮ್ನಲ್ಲಿ ವಿವಾಹ ವಾರ್ಷಿಕೋತ್ಸವ ಬಂದಿದ್ದಕ್ಕೆ ಅಂದು ಪತ್ನಿ ವಿಜಯಲಕ್ಷ್ಮೀಯೇ ಬೆಂಗಳೂರಿನಲ್ಲಿ ಪಾರ್ಟಿ ಅರೇಂಜ್ ಮಾಡಿದ್ರು. ಆ ದಿನ ದರ್ಶನ್ ರನ್ನ ಖುಷಿ ಖುಷಿಯಾಗಿ ನೋಡಿಕೊಳ್ಳಬೇಕು. ಸರ್ಪ್ರೈಸ್ಗಳನ್ನ ಕೊಡಬೇಕು ಅಂತ ನಿರ್ಧರಿಸಿದ್ದ ಪತ್ನಿ ವಿಜಯಲಕ್ಷ್ಮೀ ಅತ್ಯಾಪ್ತ ಸ್ನೇಹಿತರಿಗಷ್ಟೇ ಆಹ್ವಾನಿಸಿದ್ರು. ಆ ಪಾರ್ಟಿ ಎಂಜಾಯ್ ಮಾಡಿದ್ದ ದಾಸ, ತನ್ನ ಜನುಮದ ಒಡತಿ ವಿಜಯಲಕ್ಷ್ಮೀ ಜೊತೆ ಕೂಣಿದು ಕುಪ್ಪಳಿಸಿದ್ರು..
ಈಗ ಮತ್ತೆ ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹಲವು ಏರಿಳಿತಗಳು, ಕಷ್ಟ ನಷ್ಟಗನ್ನ ನೋಡಿದ ಈ ಜೋಡಿ ಈ ವರ್ಷ ಒಟ್ಟಾಗಿ ಪಾರ್ಟಿ ಮಾಡೋ ಆಸೆಯಲ್ಲಿದ್ರು. ಆದ್ರೆ ಅದು ಸಾಧ್ಯವಾಗುತ್ತಿಲ್ಲ. ಬದಲಾಗಿ ಜೈಲಿನಲ್ಲೇ 30 ನಿಮಿಷಗಳ ಕಾಲ ದರ್ಶನ್ ವಿಜಯಲಕ್ಷ್ಮೀ ಮತ್ತು ಮಗ ವಿನೀಷ್ ಬೇಟಿ ಮಾಡೋದಕ್ಕೆ ಅವಕಾಶ ಕೊಡಲಾಗಿದೆ. ಈ 30 ನಿಮಿಷದಲ್ಲೇ ದಾಸನ ವೆಡ್ಡಿಂಗ್ ಆನಿವರ್ಸರಿ ಮುಗಿದು ಹೋಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.