
ತಾಯಿಗೆ ಅಪಘಾತವಾದಾಗ ನಟ ಎಲ್ಲಿದ್ರು? ಸೋಶಿಯಲ್ ಮೀಡಿಯಾದಲ್ಲಿ ದಯಾಳ್ ಪದ್ಮನಾಭನ್ ಪೋಸ್ಟ್ ಹಾಕಿದ್ದೇಕೆ?
ಸಿನಿಮಾದಲ್ಲಿ ಕಿಶೋರ್ ಅಂದ್ರೆ ಅಬ್ಬರಿಸುವ ನಟನೆ, ಗಂಭೀರ ಮುಖಭಾವ. ಆದರೆ ಈ "ಕಟ್ಟುಮಸ್ತಾದ" ನಟನ ರಿಯಲ್ ಲೈಫ್‌ನಲ್ಲಿ ಕಳೆದ ಕೆಲವು ಗಂಟೆಗಳ ಹಿಂದೆ ಒಂದು ದೊಡ್ಡ ಘಟನೆ ನಡೆದುಹೋಗಿದೆ. ನಡೆದ ಈ ಘಟನೆ ನಟ ಕಿಶೋರ್ ಅವರ ಆತ್ಮೀಯರನ್ನು ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಕಿಶೋರ್ ತಾಯಿಗೆ ಅಪಘಾತವಾಗಿದ್ದು ಒಂದು ಕಡೆಯಾದ್ರೆ, ಸ್ವತಃ ಕಿಶೋರ್ ಯಾರ ಕೈಗೂ ಸಿಗದೇ ಹೋದದ್ದು ಆತಂಕವನ್ನು ಇಮ್ಮಡಿಗೊಳಿಸಿತ್ತು!
ನಡೆದಿದ್ದೇನು? ಆತಂಕದ ಆ ಕೆಲವು ಗಂಟೆಗಳು!
ಸಾಮಾನ್ಯವಾಗಿ ನಟ ಕಿಶೋರ್ ಸಿನಿಮಾ ಪ್ರಪಂಚದ ಗದ್ದಲದಿಂದ ಸ್ವಲ್ಪ ದೂರವೇ ಇರುತ್ತಾರೆ. ಫೋನ್ ಕರೆಗಳಿಗೆ ಸಿಗುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಅವರಿಗೆ ಸ್ವಲ್ಪ ಕಡಿಮೆ. ಇಂದು ಅವರ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಿತೈಷಿಗಳು ಕಿಶೋರ್‌ಗೆ ಫೋನ್ ಮೇಲೆ ಫೋನ್ ಮಾಡತೊಡಗಿದರು. ಆದರೆ ಕಿಶೋರ್ ಅವರು ಕಾಲ್ ರಿಸೀವ್ ಮಾಡದೇ ಇದ್ದುದರಿಂದ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಿರ್ದೇಶಕ ದಯಾಳ್ ಪದ್ಮನಾಭನ್ ಸೋಷಿಯಲ್ ಮೀಡಿಯಾ ಪೋಸ್ಟ್!
ವಿಷಯ ತಿಳಿದ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡ ಕಿಶೋರ್‌ಗೆ ಕರೆ ಮಾಡಲು ಪ್ರಯತ್ನಿಸಿದರು. ವಾಯ್ಸ್ ಮೆಸೇಜ್ ಕಳುಹಿಸಿದರು. ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾವಿಸಿದ ದಯಾಳ್, ಬೇರೆ ದಾರಿಯಿಲ್ಲದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೊರೆ ಹೋದರು. "ಯಾರಿಗಾದರೂ ಕಿಶೋರ್ ಸಿಕ್ಕರೆ ತಕ್ಷಣ ಈ ವಿಷಯ ತಿಳಿಸಿ, ಅವರ ತಾಯಿ ಆಸ್ಪತ್ರೆಯಲ್ಲಿದ್ದಾರೆ" ಎಂದು ಪೋಸ್ಟ್ ಹಾಕಿದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತು. ಅಭಿಮಾನಿಗಳೆಲ್ಲಾ "ಕಿಶೋರ್ ಸರ್ ಎಲ್ಲಿದ್ದೀರಾ?" ಎಂದು ಹುಡುಕಾಡತೊಡಗಿದರು.
ಹೈದರಾಬಾದ್‌ನಿಂದ ಬಂದ ಆ ಒಂದು ಮೆಸೇಜ್!
ಒಂದು ಕಡೆ ಆತಂಕದ ಮೋಡ ಕವಿದಿದ್ದರೆ, ಇನ್ನೊಂದು ಕಡೆ ನಟ ಕಿಶೋರ್ ಈ ಯಾವುದೂ ತಿಳಿಯದಂತೆ ಗಾಢ ನಿದ್ರೆಯಲ್ಲಿದ್ದರು! ಕಾರಣ, ನಟ ಕಿಶೋರ್ ಅವರು ಹೈದರಾಬಾದ್‌ನಲ್ಲಿ ಒಂದು ತಮಿಳು ಸಿನಿಮಾದ ಚಿತ್ರೀಕರಣದಲ್ಲಿದ್ದರು. ಇಡೀ ರಾತ್ರಿ ಶೂಟಿಂಗ್ ಮುಗಿಸಿ ಬೆಳಿಗ್ಗೆ ಸುಸ್ತಾಗಿ ಮಲಗಿದ್ದರು. ಕಾಲ್, ಮೆಸೇಕ್ ಸದ್ದಿಗೆ ನಿದ್ದೆಯಿಂದ ಎದ್ದು ಮೊಬೈಲ್ ನೋಡಿದಾಗ ನೂರಾರು ಮಿಸ್ಡ್ ಕಾಲ್‌ಗಳು, ವೈಸ್ ಮೆಸೇಜ್‌ಗಳು.
ತಕ್ಷಣವೇ ಹಿತೈಷಿಯೊಬ್ಬರ ಮೆಸೇಜ್‌ಗೆ ರಿಪ್ಲೈ ಮಾಡಿದ ಕಿಶೋರ್, "ಧನ್ಯವಾದಗಳು.. ಅಮ್ಮ ಈಗ ಚೆನ್ನಾಗಿದ್ದಾರೆ. ನಾನು ಹೈದರಾಬಾದ್‌ನಲ್ಲಿ ನೈಟ್ ಶೂಟಿಂಗ್ ಮುಗಿಸಿ ಮಲಗಿದ್ದೆ, ಹಾಗಾಗಿ ಫೋನ್ ನೋಡಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ" ಎಂದು ಎಲ್ಲರಿಗೂ ಸಮಾಧಾನದ ಸುದ್ದಿ ನೀಡಿದರು.
ಸುಖಾಂತ್ಯ!
ಯಾವುದೇ ದೊಡ್ಡ ವಿಪತ್ತು ಸಂಭವಿಸುವ ಮುನ್ನವೇ ಕಿಶೋರ್ ಎಚ್ಚೆತ್ತುಕೊಂಡರು ಮತ್ತು ಅವರ ತಾಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ನೆಮ್ಮದಿ ತಂದಿದೆ. ಈಗ ನಟ ಕಿಶೋರ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ!
ನಟ ಕಿಶೋರ್ ಅವರ ತಾಯಿಯ ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನಿರ್ದೇಶಕ ದಯಾಳ್ ಅವರ ಸಮಯಪ್ರಜ್ಞೆ, ಹಿತೈಷಿಗಳು, ಮಾಧ್ಯಮದವರ ತಕ್ಷಣದ ಕಾರ್ಯಾಚರಣೆ ಹಾಗೂ ಪ್ರತಿಕ್ರಿಯೆಯಿಂದ ಈ ಆತಂಕ ದೂರವಾಗಿದೆ. ಸದ್ಯ ಕಿಶೋರ್ ಅವರ ತಾಯಿ ಗುಣಮುಖರಾಗುತ್ತಿದ್ದು, ನಟ ಹೈದರಾಬಾದ್‌ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.