ಭಜರಂಗಿ ಹವಾ... ವಿನೋದ್ ರಾಜ್, ಯಶ್ ಕೊಂಡಾಡಿದ ಶಿವಣ್ಣ

By Suvarna News  |  First Published Oct 27, 2021, 12:20 AM IST

* ಸ್ಯಾಂಡಲ್‌ವುಡ್ ನಲ್ಲಿ ಉತ್ತಮ ಸಿನಿಮಾಗಳ ಅಬ್ಬರ
* ಭಜರಂಗಿ 2 ಸಿನಿಮಾ ಸಿನಿಮಾ ಅ. 29 ಕ್ಕೆ ಬಿಡುಗಡೆ
* ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಪುನೀತ್, ಯಶ್, ಶಿವಣ್ಣ
* ದಾಖಲೆ ಬರೆಯಲಿರುವ ಭಜರಂಗಿ 2


ಬೆಂಗಳೂರು(ಅ. 27) ಜಯಣ್ಣ ಬೋಗಣ್ಣ ದಿಲ್‌ದಾರ್ ವ್ಯಕ್ತಿಗಳು. ಸಿನಿಮಾದ‌ ಎಲ್ಲ ವರ್ಗದಲ್ಲೂ ಅದ್ಭುತ ಕೆಲಸ ಆಗಿದೆ. ಶ್ರುತಿ ಭಾರತದ ಫೈನೆಸ್ಟ್ ನಟಿ ಅಂದ್ರೆ ತಪ್ಪಾಗಲ್ಲ. ಬ್ಯೂಟಿಫುಲ್ ಆಕ್ಟರ್ .. ನಾವೆಲ್ಲಾ ಎಂಜಾಯ್ ಮಾಡಿಕೊಂಡು ಭಜರಂಗಿ (Bhajarangi 2) ಸಿನಿಮಾ ಮಾಡಿದ್ದೇನೆ. ಅವರಿಗೆಲ್ಲಾ ಬೋರ್ ಆಗದ ಹಾಗೆ ಸಿನಿಮಾ‌ ಸೆಟ್ ನಲ್ಲಿ ನಾನಿದ್ದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar)ನುಡಿದರು.

ಸಿನಿಮಾದಲ್ಲಿ (Sandalwood) ಪಾತ್ರ ಪೋಷಣೆ ಹರ್ಷನ ನೋಡಿ ಕಲಿಬೇಕು. ಯಶ್ ಡಾನ್ಸ್ ಅಂದ್ರೆ ತುಂಬಾ ಇಷ್ಟ. ವಿನೋದ್ ರಾಜ್ ಅಂದ್ರೆ ತುಂಬಾ ಇಷ್ಟ ಅವರು ತುಂಬಾ ಡಾನ್ಸ್ ಮಾಡ್ತಾರೆ. ಧ್ರುವ ಸರ್ಜಾ, ಚಿರಂಜೀವಿ ಒಳ್ಳೆ ಡಾನ್ಸರ್. ಯಶ್ ತುಂಬಾ ಹ್ಯಾಂಡ್ಸಮ್ ಆಗಿ ಕಾಣಿಸ್ತಾರೆ. ಯಶ್ ಪಾಸಿಟೀವ್ ಮನುಷ್ಯ, ಜಂಭ ಇಲ್ಲ.. ಯಶ್ ಇಂಡಿಯಾ ಲೆವೆಲ್ ನಲ್ಲಿ ಹೆಸರು ಮಾಡಿದ್ದಾರೆ. ಅದಕ್ಕೆ ಅವರ ವ್ಯಕ್ತಿತ್ವ ಕಾರಣ ಎಂದು ಕೊಂಡಾಡಿದರು.

Tap to resize

Latest Videos

undefined

ಜಯಣ್ಣ ಜೊತೆ ನಾನು (Rishab Shetty) ರಿಷಬ್  ಶೆಟ್ಟಿ ಸಿನಿಮಾ ಮಾಡುತ್ತಿದ್ದೇವೆ. ಕಷ್ಟ ಸುಖ ನೋವು ನಲಿವು ಎಲ್ಲಾ ಸಮಯದಲ್ಲಿ ಗೀತಾ ನನ್ನ ಜೊತೆಗೇ‌ ಇರ್ತಾರೆ.. ನನಗೆ ಆರೋಗ್ಯ ಸರಿ‌ ಇಲ್ಲದಿದ್ದಾಗ ಗೀತಾ ಹರಕೆ ಹೊತ್ತು ಮುಡಿ ಕೊಟ್ಟಿದ್ರು. ಯಾವ ಹೆಣ್ಣು ಮಗಳು ಈ‌ ತರ ಮಾಡೋಲ್ಲ ಎಂದು ಪತ್ನಿಯನ್ನು ಕೊಂಡಾಡಲು ಶಿವಣ್ಣ ಮರೆಯಲಿಲ್ಲ.

ಭಜರಂಗಿ ನೋಡೋಕೆ ತ್ರಿವೇಣಿ ಥಿಯೇಟರ್ ಗೆ ಹೋಗಿದ್ದೆ. ಈಗ ಭಜರಂಗಿ 2. ಕಾರ್ಯಕ್ರಮಕ್ಕೆ ಬಂದಿದ್ದು ನಾನು ಶಿವಣ್ಣ ಅವರ ಅಭಿಮಾನಿಯಾಗಿ. ನಾನು ಅಪ್ಪು ತರ‌ ಡಾನ್ಸ್ ಮಾಡಬೇಕು‌ ಫೈಟ್ ಮಾಡಬೇಕು ಅಂತ ಅಪ್ಪುರನ್ನ ನೋಡಿಯೇ ಚಿತ್ರರಂಗಕ್ಕೆ ಬಂದಿದ್ದು. ಶಿವಣ್ಣ ನಾನು ಹುಟ್ಟೋಕು ಮೊದಲು ಸಿನಿಮಾ ಮಾಡಿದವರು. ಇವರ ನಡವಳಿಗೆಳನ್ನ ನೋಡಿ ನಮ್ಮಂತ ಯಂಗ್ ಸ್ಟರ್ಸ್ ಕಲಿಬೇಕು ಎಂದು ರಾಕಿಂಗ್ ಸ್ಟಾರ್ ಯಶ್ (Yash) ಹೇಳಿದರು.

ಅಣ್ಣಾವ್ರಿಗೆ ನನ್ನ ತಾಯಿ ದೊಡ್ಡ ಅಭಿಮಾನಿ. ಅಣ್ಣಾವ್ರು ಹಾಕಿ ಕೊಟ್ಟ ಆಲದ ಮರದಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇದೊಂದು ಸಮುದ್ರ. ಪ್ರತಿಭೆ ಇದ್ದರೆ.ತಾಕತ್ತಿದ್ದರೆ ಈಜುತ್ತಾರೆ. ಇಲ್ಲ ಅಂದ್ರೆ ಮುಳುಗಿ ಹೋಗ್ತಾರೆ ಎಂದರು. ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಒಟ್ಟಿಗೆ  ಶಿವಣ್ಣ, ಪುನೀತ್, ಯಶ್ ಡ್ಯಾನ್ಸ್ ಮಾಡಿದ್ದು ದೊಡ್ಡ ಹೈಲೈಟ್ಸ್. 

ಅಮೋಘವಾಗಿದೆ ಭಜರಂಗಿ ಟ್ರೇಲರ್

ಶಿವಣ್ಣನ ಸಿನಿಮಾವನ್ನ ಎಲ್ಲರೂ ಥಿಯೇಟರ್ ಗೆ ನುಗ್ಗಿ ನೋಡಬೇಕು. ಶಿಣ್ಣನ ಸಿನಿಮಾಗಳಲ್ಲಿ ಹೊಸ ರೆಕಾರ್ಡ್ ಬರೆಯುವಂತೆ ಮಾಡಿ ಎಂದು  ನಿರ್ದೇಶಕ ರಿಷಬ್‌ ಶೆಟ್ಟಿ ವಿಶಿಷ್ಟ ರೀತಿಯಲ್ಲಿ ಹಾರೈಸಿದರು. 

ಎಲ್ಲ ಸಿನಿಮಾಗಳನ್ನ ಜನ ಥಿಯೇಟರ್ ಗೆ ಬಂದು ನೋಡುತ್ತಿದ್ದಾರೆ.ಭಜರಂಗಿ 2 ಸಿನಿಮಾ ಕೂಡ ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಭಜರಂಗಿ 2 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಿಷಬ್ ಹೇಳಿದರು.

ಕಾರ್ಯಕ್ರಮದಲ್ಲಿ ನಟ ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಭಾವನಾ, ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಚಿತ್ರ ನಿರ್ದೇಶಕ ಹರ್ಷ, ಜಯಣ್ಣ, ಸೇರಿದಂತೆ‌ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಭಾಗಿಯಾಗಿದ್ದರು.

ಎರಡನೇ‌ ಲಾಕ್ ಡೌನ್ ಬಳಿಕೆ ಎಲ್ಲಾ ಸಿನಿಮಾಗಳು ಒಳ್ಳೆ ಒಪನಿಂಗ್ ಪಡೆದಿವೆ. ಭಜರಂಗಿ2  ನಾಡಿದ್ದು 29ಕ್ಕೆ ಬಿಡುಗಡೆ‌ ಆಗುತ್ತಿದೆ. ನಾನು ಸಿನಿಮಾದ ಕ್ಲಿಪ್ಪಿಂಗ್ ಗಳನ್ನ  ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಸಿನಿಮಾದ ಕಥೆ, ಕ್ವಾಲಿಟಿ ಅದ್ಭುತವಾಗಿದೆ. ನನಗೆ ಶಿವಣ್ಣನ ಎಲ್ಲಾ ಲುಕ್ ಗಳು ಇಷ್ಟವಾಗುತ್ತೆ. ಮರೆಯಲಾಗದ ಗೆಟಪ್ ಅಂದ್ರೆ ಮನ ಮೆಚ್ಚಿದ ಹುಡುಗಿ, ಜನುಮದ ಜೋಡಿ, ಕುರುಬನ ರಾಣಿ ಪಾತ್ರಗಳು ತುಂಬಾ ಇಷ್ಟ ಎಂದು ಪವರ್ ಸ್ಟಾರ್  ಪುನೀತ್‌ ರಾಜ್ ಕುಮಾರ್ಸ್ಮರಿಸಿದರು..

 

 

click me!