ಗಣೇಶ್ ಹೊಸ ಶೋ ಶುರು; ಮೇಘನಾ ರಾಜ್, ವಸಿಷ್ಠ ಸಿಂಹ ಸ್ಪರ್ಧಿಸುತ್ತಾರಂತೆ!

Suvarna News   | Asianet News
Published : Oct 26, 2021, 01:03 PM ISTUpdated : Oct 26, 2021, 07:46 PM IST
ಗಣೇಶ್ ಹೊಸ ಶೋ ಶುರು; ಮೇಘನಾ ರಾಜ್, ವಸಿಷ್ಠ ಸಿಂಹ ಸ್ಪರ್ಧಿಸುತ್ತಾರಂತೆ!

ಸಾರಾಂಶ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಕಿರುತೆರೆ ಶೋನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಯಾವ ವಾಹಿನಿಯಲ್ಲಿ? ಯಾವ ರೀತಿಯ ಕಾರ್ಯಕ್ರಮ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗಬೇಕಿದೆ.

ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ (Bigg Boss) ಮತ್ತು ಸಂಗೀತ (Music) ಕಾರ್ಯಕ್ರಮಗಳ ನಂತರ ಅತಿ ಹೆಚ್ಚು ಮನೋರಂಜನೆ ನೀಡುವ ರಿಯಾಲಿಟಿ ಶೋ ಅಂದ್ರೆ ಸೂಪರ್ ಮಿನಿಟ್ (Super Minute) ನಂತ ಕಾರ್ಯಕ್ರಮ. ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಡೆಸಿಕೊಡುವ ಏಕೈಕ ರಿಯಾಲಿಟಿ ಕಾರ್ಯಕ್ರಮ ಇದಾಗಿದ್ದು, ಮತ್ತೆ ಎರುಡು ವರ್ಷಗಳ ನಂತರ ಇಂಥದ್ದೇ ಮತ್ತೊಂದು ಕಾರ್ಯಕ್ರಮ ಶುರುವಾಗುತ್ತಿರುವುದಕ್ಕೆ ವೀಕ್ಷಕರು ಸಂಭ್ರಮಿಸುತ್ತಿದ್ದಾರೆ. 

'ಸಖತ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಬಾಯ್ ವಿಹಾನ್

    'ಗಣೇಶ್ ಅವರು ಈಗಾಗಲೇ ಪ್ರೋಮೋ ಚಿತ್ರೀಕರಣ ಮಾಡಿದ್ದಾರೆ. ಸ್ಪೆಷಲ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಶೋ ಬಗ್ಗೆ ಮಾಹಿತಿ ರಿವೀಲ್ ಮಾಡಲಾಗುತ್ತದೆ. ಈ ಶೋ ಎಂಜಾಯ್ ಮಾಡಲು ಚಿತ್ರರಂಗದವರನ್ನು (Sandalwood) ಕರೆಸಲಾಗುತ್ತದೆ. ಚಿತ್ರರಂಗದಲ್ಲಿ ಸ್ನೇಹಿತರಾಗಿ (Friendship) ಆತ್ಮೀಯರಾಗಿರುವವರನ್ನು ಕರೆಯಿಸಿ, ಟಾಸ್ಕ್ ಮಾಡಿಸಲಾಗುತ್ತದೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಗೇಮ್ (Game)ಆಟವಾಡಬೇಕು ಎನ್ನುವುದು ಈ ಶೋನ ಉದ್ದೇಶ. ವೀಕೆಂಡ್ ಎಪಿಸೋಡ್ ಚಿತ್ರೀಕರಣ ಆರಂಭವಾದ ಬಳಿಕೆ ಏನೆಲ್ಲಾ ಗೇಮ್ ಇರುತ್ತದೆ ಎಂದು ತಿಳಿಯುತ್ತದೆ,' ವಾಹಿನಿಯವರು ಈ ಬಗ್ಗೆ ಮಾಹಿತಿ ಶೀಘ್ರವೇ ಪೂರ್ಣ ಮಾಹಿತಿ ನೀಡುವ ನಿರೀಕ್ಷೆ ಇದೆ. 

    ಈಗಾಗಲೇ ಸೂಪರ್ ಮಿನಿಟ್ ತಂಡ ಮೇಘನಾ ರಾಜ್ (Meghana Raj), ವಸಿಷ್ಠ ಸಿಂಹ (Vasistha Simha) ಮತ್ತು ಪನ್ನಗಾಭರಣ (Pannagha Bharana) ಸೇರಿದಂತೆ ಅನೇಕ ಸ್ನೇಹಿತರನ್ನು ಸಂಪರ್ಕಿಸಿದೆ ಎನ್ನಲಾಗಿದೆ.  ಕಾರ್ಯಕ್ರಮ ಆರಂಭವಾಗುವ ಒಂದು ದಿನ ಮುನ್ನ ಸೆಟ್‌ನಲ್ಲಿ ಬೂಟ್ ಕ್ಯಾಂಪ್ (Boot Camp) ಮಾಡಲಾಗುತ್ತದೆ. ಹೇಗೆ ಆಟವಾಡಬೇಕು. ಅದರ ಹಿಂದಿರುವ ಟ್ರಿಕ್ಸ್ (tricks) ಏನು ಎಂದು ಹೇಳಿಕೊಡಲಾಗುತ್ತದೆ. ಈ ಹಿಂದೆ ಪ್ರಸಾರವಾಗಿರುವ ಎಪಿಸೋಡ್‌ನಲ್ಲಿ ಸೆಲೆಬ್ರಿಟಿಗಳು ಆಟವಾಡಿ, ಹಣ ಸಂಪಾದಿಸಿ ಅದನ್ನು ಅಗತ್ಯವಿರುವವರಿಗೆ ನೀಡಿದ್ದರು. ಜನ ಸಾಮಾನ್ಯರು ತಮ್ಮ ಕಷ್ಟಗಳನ್ನು ನೀಗಿಸಿಕೊಳ್ಳಲು ಈ ಆಟವಾಡಿದ್ದಾರೆ. ವಿದ್ಯಾಭ್ಯಾಸಕ್ಕೆ (Education) ತೊಂದರೆ ಇರುವವರು ಮಕ್ಕಳು ಆಟವಾಡಿ ಬಂದ  ಹಣದಿಂದ ಶಾಲೆ ಫೀಸ್ (School Fees) ಕಟ್ಟಿರುವ ಘಟನೆಯೂ ಸೂಪರ್ ಮಿನಿಟ್ ವೇದಿಕೆಯ ಮೇಲೆ ನಡೆದಿದೆ. ಕಷ್ಟ ಇದ್ದು, ಸೋತವರಿಗೆ ವಾಹಿನಿ ಮತ್ತು ಗಣೇಶ್ ತಮ್ಮ ಸ್ವಂತ ಹಣದಿಂದಲೂ ಸಹಾಯ ಮಾಡಿದ್ದಾರೆ. 

    ಗಣೇಶ್-ನಿಶ್ವಿಕಾ ಲವ್ ಸಾಂಗ್ 'ಸಖತ್' ವೈರಲ್!

    Namaskara Namaskaraವೆಂದು ಹೇಳುತ್ತಾ ನಿರೂಪಕರಾಗಿ (Anchor) ಬಣ್ಣದ ಲೋಕದಲ್ಲಿ ಜರ್ನಿ ಆರಂಭಿಸಿದ ನಟ ಗಣೇಶ್, ಇದೀಗ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ ಹಾಗೂ ಅತಿ ಹೆಚ್ಚು ಸಂಭಾವನೆ (Remuneration) ಪಡೆಯುವ ಹಾಗೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಗಣೇಶ್ ತ್ರಿಬಲ್ ರೈಡಿಂಗ್ (Triple Riding) ಮತ್ತು ಸಖತ್ (Sakkat) ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಗಣೇಶ್ ಪುತ್ರ ವಿಹಾನ್ (Vihan) ಸಖತ್ ಸಿನಿಮಾದಲ್ಲಿ ನಟಿಸಿದ್ದಾನೆ, ಕೆಲವು ದಿನಗಳ ಹಿಂದೆ ಡಬ್ಬಿಂಗ್ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
    ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?