ಅರುಂಧತಿ ನಾಗ್ ಅವರ ಪತಿ ನಟ ಶಂಕರ್ ನಾಗ್ ಅವರು ತಮ್ಮ 34ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಗೊತ್ತೇ ಇದೆ. ಬಳಿಕ ಅವರು ಇದ್ದುದರಲ್ಲಿಯೇ ಕ್ರಿಯಾಶೀಲರಾಗಿ ನಾಟಕಗಳ ನಟನೆ ಹಾಗೂ ನಿರ್ದೇಶನವನ್ನು ಮುಂದುವರಿಸಿದ್ದಾರೆ. ಆದರೆ..
ನಟ-ನಿರ್ದೇಶಕ ದಿವಂಗತ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರು ತಮ್ಮ 'ರಂಗ ಶಂಕರ' ಕೆಲಸಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಹೀಗೇ, ಆಗೊಮ್ಮೆ ಈಗೊಮ್ಮೆ ಅವರು ಸಿನಿಮಾದಲ್ಲಿ ನಟಿಸುವುದು ಬಿಟ್ಟರೆ, ಆಲ್‌ಮೋಸ್ಟ್ ಆಲ್ ನಟಿಯಾಗಿ ಇತ್ತೀಚೆಗೆ ಅವರು ಅಷ್ಟೊಂದು ಕ್ರಿಯಾಶೀಲವಾಗಿಲ್ಲ. ಅದಕ್ಕೆ ಕಾರಣವೇನಿರಬಹುದು? ಯಾಕೆ ಅವರು 'ಜೋಗಿ' ನಂತರ ನಟನೆ ಮಾಡುತ್ತಿಲ್ಲ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ..
ಈ ಬಗ್ಗೆ ಅರುಂಧತಿ ಶಂಕರ್‌ನಾಗ್ ಅವರನ್ನು ಕೇಳಲಾಗಿ ಅವರು ಹೇಳಿದ್ದು ಹೀಗೆ.. 'ಇಂದಿನ ಧಾರಾವಾಹಿಗಳು ದಾರಿ ತಪ್ಪಿವೆ. ಅದೇ ಕಾರಣಕ್ಕೆ ನನಗೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಉತ್ಸಾಹವೇ ಇಲ್ಲ...' ಎಂದಿದ್ದಾರೆ ಪ್ರಸಿದ್ದ ರಂಗಕರ್ಮಿ, ನಟಿ ಹಾಗೂ ದಿವಂಗತ ನಟ-ನಿರ್ದೇಶಕ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್. ಜೋಗಿ ಸಿನಿಮಾದಲ್ಲಿ ಅವರು ಮಾಡಿರುವ 'ತಾಯಿ' ಪಾತ್ರವನ್ನು ಯಾರಾದರೂ ಮರೆಯಲು ಸಾಧ್ಯವೇ?
undefined
ಡಾ ರಾಜ್ ಭಾರೀ ಅಪರೂಪದ ವಿಡಿಯೋ; ಬಂದವರೆದುರು ಅಣ್ಣಾವ್ರು ಹೇಳಿದ್ದೇನು?
ಅರುಂಧತಿ ನಾಗ್ ಅವರ ಪತಿ ನಟ ಶಂಕರ್ ನಾಗ್ ಅವರು ತಮ್ಮ 34ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಗೊತ್ತೇ ಇದೆ. ಬಳಿಕ ಅವರು ಇದ್ದುದರಲ್ಲಿಯೇ ಕ್ರಿಯಾಶೀಲರಾಗಿ ನಾಟಕಗಳ ನಟನೆ ಹಾಗೂ ನಿರ್ದೇಶನವನ್ನು ಮುಂದುವರಿಸಿದ್ದಾರೆ. ಆದರೆ, ಸಿನಿಮಾದಲ್ಲಿ ಅಲ್ಲೊಂದು ಇಲ್ಲೊಂದು ತಮ್ಮನ್ನೇ ಹುಡುಕಿಕೊಂಡು ಬಂದ ಪಾತ್ರವನ್ನು ಬಿಟ್ಟರೆ, ಅವರೇನೂ ಹುಡುಕಾಡುತ್ತಿಲ್ಲ. ಆದರೆ, ಸೀರಿಯಲ್ ಬಗ್ಗೆ ಕೇಳಲಾಗಿ ಮೇಲಿನಂತೆ ಉತ್ತರಿಸಿದ್ದಾರೆ.
ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಪರಸ್ಪರ ಪ್ರೀತಿಸಿ ಆರು ವರ್ಷದ ನಂತರ ಮದುವೆಯಾರು. ಅರುಂಧತಿ ನಾಗ್ 23 ವರ್ಷದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಅದಕ್ಕಿಂತ ಮೊದಲೇ ಅವರ ಬಾಳಲ್ಲಿ ಶಂಕರ್ ನಾಗ್ ಪ್ರವೇಶವಾಗಿತ್ತು. ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದ ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಮುಖಾಮುಖಿ ಭೇಟಿಯಾಗಿದ್ದು ಗುಜರಾತ್‌ನಲ್ಲಿ. ಇಂಡಿಯನ್ ನ್ಯಾಷನಲ್ ಥಿಯೇಟರ್ ಇವರ ಭೇಟಿಗೆ ದಾರಿಯಾಯ್ತು.
ಶಿವಣ್ಣನ ಎದುರೇ ಲಾಯರ್ 'ಜಗ್ಗು ದಾದಾ'ಗಿರಿಗೆ ಚಪ್ಪಾಳೆ, ಯಾರೂ ಏನೂ ಹೇಳೋ ಹಾಗಿಲ್ಲ!
ಯುನಿವರ್ಸಿಟಿ ಕಾಂಪಿಟೇಶ್‌ನಲ್ಲಿ ಬೆಸ್ಟ್ ಆ್ಯಕ್ಟರ್ ಮತ್ತೆ ಬೆಸ್ಟ್ ಆ್ಯಕ್ಸೆರ್ಸ್ ಪಡೆದ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಇಂಡಿಯನ್ ನ್ಯಾಷನಲ್ ಥಿಯೇಟರ್ ಒಂದು ನಾಟಕವನ್ನು ಮಾಡಿತ್ತು. ಈ ಸಮಯದಲ್ಲಿ ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಮೊದಲ ಬಾರಿ ಸಿಕ್ಕಿದ್ದರು. ಅಲ್ಲಿಯೇ ಅವರ ಮೊದಲ ಮಾತು. ಆ ಟೈಂನಲ್ಲೇ ನಾನು ಶಂಕರ್ ಪ್ರೀತಿಗೆ ಬಿದ್ದಿದ್ದೆ ಎನ್ನುತ್ತಾರೆ ಅರುಂಧತಿ ನಾಗ್.
ಆಟೋಗಳ ಮೇಲೆ ಸದಾ ಜೀವಂತವಾಗಿರುವ 'ಆಟೋ ರಾಜ' ಶಂಕರ್ ನಾಗ್ ಅನೇಕ ಚಿತ್ರಗಳಲ್ಲಿ ರೌಡಿ ಪಾತ್ರ ಮಾಡಿದ್ದಾರೆ. ರೌಡಿ, ಫೈಟಿಂಗ್, ಕೋಪದ ದೃಶ್ಯಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡ್ರೂ ಅವರ ಸ್ವಭಾವ ಮಾತ್ರ ಅದಕ್ಕೆ ತದ್ವಿರುದ್ಧ. ತುಂಬಾ ಮೃದು ಸ್ವಭಾವದವರಾಗಿದ್ದ ಶಂಕರ್ ನಾಗ್ ಅವರಿಗೆ ತುಂಬಾ ಮೆಚ್ಯುರಿಟಿ ಇತ್ತು. ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು. ಒಂದೆರಡು ಬಾರಿ ಈ ಸಂಬಂಧ ಬೇಡ ಅಂತ ಅರುಂಧತಿ ನಾಗ್ ಹೇಳಿದ್ದೂ ಇತ್ತು ಎನ್ನಲಾಗಿದೆ. ಆದ್ರೆ ತುಂಬಾ ಸಿಂಪಲ್ ಶಂಕರ್ ಸ್ವಭಾವಕ್ಕೆ ಅರುಂಧತಿ ಮನಸೋತಿದ್ದರಂತೆ. ಹೀಗಾಗಿ ಕೊನೆಗೂ ಒಪ್ಪಿ ಮದುವೆ ಮಾಡಿಕೊಂಡಿದ್ದಾರೆ.
ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?
ಬದುಕಿದ್ದರೆ ನಮ್ಮೆಲ್ಲರ ಶಂಕ್ರಣ್ಣಗೆ ಈಗ 70 ವರ್ಷವಾಗ್ತಿತ್ತು. 1980ರಲ್ಲಿ ಆರು ವರ್ಷಗಳು ಪ್ರೀತಿಸಿದ್ದ ಅರುಂಧತಿ ನಾಗ್ ಮದುವೆಯಾಗಿದ್ದರು ಶಂಕರ್ ನಾಗ್. ಅವರ ಮದುವೆ ಕೂಡ ಆರ್ಯ ಸಮಾಜದಲ್ಲಿ ತುಂಬಾ ಸರಳವಾಗಿ ನಡೆದಿತ್ತು. ಬರ್ತ್ ಡೇ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಂಕರ್ ನಾಗ್ ಅವರಿಗೆ ಅಂದು ತಮ್ಮ ಮದುವೆ ಅನ್ನೋದೇ ನೆನಪಿರಲಿಲ್ಲ. 1990ರಲ್ಲಿ ಶಂಕರ್ ನಾಗ್ ಅವರನ್ನು ಅರುಂಧತಿ ನಾಗ್ ಕಳೆದುಕೊಳ್ತಾರೆ. ಒಟ್ಟೂ 17 ವರ್ಷಗಳಿಂದ ಶಂಕರ್ ನಾಗ್ ಅವರ ಜೊತೆಗಿದ್ದ ಅರುಂಧತಿ ನಾಗ್, ಆ ದಿನಗಳನ್ನು ನೆನೆಪಿಸಿಕೊಳ್ತಾ, 'ಆ ಟೈಂನಲ್ಲಿ ಒಂದು ದಿನ ಕೂಡ ನಮ್ಮಿಬ್ಬರಿಗೆ ಜಗಳ ಆಗಿರಲಿಲ್ಲ..' ಎನ್ನುತ್ತಾರೆ.