
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರು ತಮ್ಮ ಮನೆಮಂದಿಯನ್ನು ಪರಿಚಯಿಸುತ್ತಿರುವ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 'ಅಣ್ಣಾವ್ರು' ಅದೇನು ಹೇಳಿದ್ದಾರೆ, ಮನೆಗೆ ಬಂದಿರುವವರು ಯಾರು, ಎಲ್ಲವನ್ನೂ ನೀವು ತಿಳಿದುಕೊಳ್ಳಬಹುದು.
ಡಾ ರಾಜ್‌ಕುಮಾರ್ ಅವರ ಮನೆಗೆ ಯಾರೋ ಅತಿಥಿಗಳು ಬಂದಿದ್ದಾರೆ. ಅವರಿಗೆ ಅಣ್ಣಾವ್ರು ತಮ್ಮ ಮನೆಮಂದಿಯನ್ನು ಪರಿಚಯಿಸುವ ಪರಿ ತುಂಬಾ ವಿಶಿಷ್ಠವಾಗಿದೆ. ಮೊದಲು, ಅವರ ತಮ್ಮ ವರದರಾಜು ಅವರಿಗೆ ಮನೆಯ ಪ್ರತಿಯೊಬ್ಬರನ್ನೂ ಕರೆಯಲು ಹೇಳುತ್ತಾರೆ ಡಾ ರಾಜ್. ಬಂದವರೆದುರು ತುಂಬಾ ಗೌರವಯುತವಾಗಿ ರಾಜ್ ಅವರು ತಮ್ಮ ಮನೆಮಂದಿಯನ್ನು ಪರಿಚಯ ಮಾಡಿಕೊಟ್ಟರು. ಈ ವಿಡಿಯೋದಲ್ಲಿ, ನಟ ಡಾ ರಾಜ್‌ಕುಮಾರ್ ಅವರು ಹೇಗೆಲ್ಲಾ ಗೆಸ್ಟ್‌ಗಳಿಗೆ ಇಂಟ್ರೊಡ್ಯೂಸ್ ಮಾಡಿಕೊಟ್ಟರು ನೋಡಿ..
ಶಿವಣ್ಣನ ಎದುರೇ ಲಾಯರ್ 'ಜಗ್ಗು ದಾದಾ'ಗಿರಿಗೆ ಚಪ್ಪಾಳೆ, ಯಾರೂ ಏನೂ ಹೇಳೋ ಹಾಗಿಲ್ಲ!
ಬಂದವರು 'ಅವ್ವ್ರು ಎಲ್ಲಿ ಕಾಣ್ತಾ ಇಲ್ವಲ್ಲ? ಎನ್ನಲು 'ಅವ್ರು ಊರಲ್ಲಿ ಇದಾರೆ, ಗಾಜನೂರಲ್ಲಿ.. ವರದರಾಜು, ಪಾರ್ವತಿ (Parvathamma Rajkumar) ಮತ್ತು ಶಾರದಾನ ಕರ್ಕೊಂಡು ಬಾ ಇಲ್ಲಿ..' ಎನ್ನುವರು. ಬಳಿಕ, 'ಇವನೇ ನನ್ನ ತಮ್ಮ ವರದರಾಜು, ಈಕೆ ನನ್ನ ಹೆಂಡ್ತಿ ಪಾರ್ವತಿ ಅಂತ. ಅವ್ನು ನನ್ ಮೊದಲನೇ ಮಗ ನಾಗರಾಜು ಶಿವಪುಟ್ಟಸ್ವಾಮಿ ಅಂತ. ನಮ್ ತಂದೆಯವ್ರು ಇಟ್ಟಿದ್ದು, ನಮ್ ತಂದೆ ಪುಟ್ಟಸ್ವಾಮಿ ಅಂತ.
ಅವ್ಳು ನನ್ನ ಎರಡನೇ ಮಗಳು ಲಕ್ಷ್ಮೀ ಅಂತ.. ಅವ್ನು ನನ್ ಮೂರನೇ ಮಗ ರಾಘವೇಂದ್ರ ಅಂತ. ರಾಜಾರಾಮ್ ಅವ್ರೇ, ನಿಮ್ಮ ಮಂತ್ರಾಲಯ ಮಹಾತ್ಮೆ ನಡಿತಾ ಇದ್ದ ಟೈಮಲ್ಲಿ ಹುಟ್ಟಿದೋನು. ಆಕೆ ನನ್ ತಮ್ಮನ ಹೆಂಡ್ತಿ ಶಾರದಮ್ಮ.. ಅವ್ರು ಆತನ ಮಕ್ಕಳು ಶಾಂತಾ, ಲತಾ ಅಂತ ಹೇಳೀ ಕಾನ್ವೆಂಟ್‌ಗೆ ಹೋಗಿದಾಳೆ.. ಅವ್ನು ಬಾಲಕೃಷ್ಣ ಅಂತ, ನನ್ ಭಾವ ಹಾಗೂ ಸ್ನೇಹಿತ.. ಆಕೆ, ಆತನ ಪತ್ನಿ, ನನ್ ತಂಗಿ ಶಾರದಮ್ಮ..'ಎಂದಿದ್ದಾರೆ ರಾಜ್‌ಕುಮಾರ್.
ನಂತರ, 'ಕೂತ್ಕೊಳ್ಳಿ, ಕೂತ್ಕೊಳ್ಳಿ.. ಬನ್ನಿ ಕೂತ್ಕೊಳ್ಳಿ, ಬಹಳ ದೂರದಿಂದ ಬರ್ತಾ ಇದೀರ.. ' ಎಂದು ಹೇಳಿ ಬಂದವರಿಗೆ ಕುತಳಿತುಕೊಳ್ಳಲು ಹೇಳಿ ಮನೆಯ ಯಜಮಾನರಾದ ತಾವೂ ಸಹ ಕುಳಿತುಕೊಳ್ಳುತ್ತಾರೆ. ಅಲ್ಲಿರುವ ಒಬ್ಬರು, ಅಲ್ಲಿರುವ ಒಂದು ಫೋಟೋ ತೋರಿಸಿ 'ಇದು ಯಾರದ್ದು ಫೋಟೋ' ಎಂದು ಕೇಳಲು ರಾಜ್ ಅವರು 'ಅವ್ರು ಅಪ್ಪಣ್ಣಪ್ಪನವರು ಅಂತ ನಮ್ಗೆ ಹಾಗೂ ನಮ್ ತಂದೆಯವ್ರಿಗೆ ಗುರುಗಳು ಹಾಗೂ ಪೂಜ್ಯರು. ಇವತ್ತಿನ ನಮ್ಮ ಏಳಿಗೆಗೆ ಅವ್ರ ಪ್ರೇಮಾಶೀರ್ವಾದವೂ ಕಾರಣವೇ. ಈಗ ಅವ್ರು ಕೊಯಮುತ್ತೂರಲ್ಲಿ ಇದಾರೆ.. ಎಂದಿದ್ದಾರೆ.
ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?
ವೈರಲ್ ವಿಡಿಯೋದಲ್ಲಿ ಅಷ್ಟೇ ಇರೋದು.. ಇನ್ನೇನು ಅಂದ್ರೋ ಏನೋ ಅಲ್ಲಿಲ್ಲ ಮಾಹಿತಿ! ಆದರೆ, ನಟರಾಗಿರುವ ಡಾ ರಾಜ್‌ಕುಮಾರ್ ತಮ್ಮ ಕುಟುಂಬದವರನ್ನು ಬಂದವರಿಗೆ ಪರಿಚಯ ಮಾಡಿಕೊಡುತ್ತಿರುವಾಗ ಅಲ್ಲೊಂದು ಪ್ರೀತಿ, ಮಮತೆ ಎದ್ದು ಕಾಣುತ್ತಿದೆ. ಅತಿಥಿಗಳ ಮುಂದೆ ನಿಂತಿರುವ ಮನೆಮಂದಿಯೆಲ್ಲರೂ ತಮ್ಮ ಸರದಿ ಬಂದಾಗ ಬಂದವರಿಗೆ ಕೈ ಮುಗಿದು ಹಾಗೇ ನಿಂತಿದ್ದಾರೆ. ಆ ಮನೆಯವರೆಲ್ಲರಲ್ಲಿ ಒಂದು ಮಹಾ ಸಂಸ್ಕಾರ ಎದ್ದು ಕಾಣುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.