
ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ ರವಿ ಶ್ರೀವತ್ಸ ಇದೀಗ ನಟ ದರ್ಶನ್ ರಿಲೀಸ್ ಬಗ್ಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿ 5 ತಿಂಗಳು ಕಳೆದಿದೆ. ಜೈಲುವಾಸದಿಂದ ದರ್ಶನ್‌ಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿದೆ, ಹೀಗಾಗಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಪ್ಪು ಎಲ್ಲರೂ ಮಾಡುತ್ತಾರೆ:
'ತಪ್ಪು ಎಲ್ಲರೂ ಮಾಡುತ್ತಾರೆ ದೇವಾನು ದೇವತೆಗಳೇ ತಪ್ಪು ಮಾಡಿದ್ದಾರೆ ಅಲ್ಲದೆ ಸಮಯಕ್ಕೆ ಸಮಯ ಕೊಡಿ ಎಲ್ಲವನ್ನು ಮರೆ ಮಾಚುತ್ತದೆ ಎಂದು ದೇವರೆ ಹೇಳಿದ್ದಾನೆ. ದರ್ಶನ್ 99 ಒಳೆತನಗಳನ್ನು ಮಾಡಿದ್ದಾರೆ ನಾನು ನೋಡಿದ್ದೀನಿ. ದರ್ಶನ್ ಜೊತೆ ಕೆಲಸ ಮಾಡಿಲ್ಲ, ಸಂಪರ್ಕವಿಲ್ಲ ಅಲ್ಲದೆ ಹತ್ತಿರದಿಂದ ನೋಡಿಲ್ಲ ಆದರೆ ದೂರದಿಂದ ನೋಡಿರುವೆ. ನನ್ನ ಮನೆಯಲ್ಲಿ ಎರಡು ಪ್ರಾಣಿಗಳನ್ನು ಸಾಕಿದ್ದೀನಿ ಆದರೆ ಅತ 150-200 ಪ್ರಾಣಿಗಳನ್ನು ಸಾಕಿಕೊಂಡು ತಾನೆ ಹಾರೈಕೆ ಮಾಡುತ್ತಾರೆ. ಪ್ರತಿ ಸಂಕ್ರಾಂತಿ ಹಬ್ಬದಂದು ದರ್ಶನ್ ಮಾಡುವ ಆಚರಣೆಯನ್ನು ನೋಡಲು ಇಷ್ಟ ಪಡುತ್ತೀನಿ. ಪ್ರಾಣಿಗಳನ್ನು ಪ್ರೀತಿಸಿ ಪ್ರತಿಯೊಂದಕ್ಕೂ ತಿನ್ನಿಸಿಸಿ ಬೆಂಕಿ ಹಾಯಿಸುತ್ತಾರೆ ಅದನ್ನು ಸಾಮಾನ್ಯವಾಗಿ ಒಬ್ಬ ಮೃಗತ್ವ ಇರುವ ಅಥವಾ ಅಮಾನಷು ಇರುವ ವ್ಯಕ್ತಿ ಕೈಯಲ್ಲಿ ಮಾಡಲು ಆಗಲ್ಲ. 99 ಒಳ್ಳೆ ಗುಣಗಳಲ್ಲಿ ಯಾವುದೋ ಒಂದು ಗುಣ ಆಟವಾಡಿಸಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರವಿ ಶ್ರೀವತ್ಸ ಮಾತನಾಡಿದ್ದಾರೆ.
ಕಾಂತಾರ ನಟನ ಮನೆಯಲ್ಲಿ ಅದ್ಧೂರಿ ದೀಪಾವಳಿ; ಶೆಟ್ರು ಹೇರ್‌ಸ್ಟೈಲ್ ಮೇಲೆ ನೆಟ್ಟಿಗರ ಕಣ್ಣು!
ದಾನ ಧರ್ಮ ಹೆಚ್ಚು:
'ನಮ್ಮ ಸಂಪ್ರದಾಯದಲ್ಲಿ ನಾವು ನಂಬುವುದು ಮನುಷ್ಯನ ಕಣ್ಣು...ಇದರಿಂದ ಮರ ಗಿಡಿ ಇದೇ ಹೋಗಿ ಬಿಡುತ್ತದೆ ಅನ್ನುತ್ತೀವಿ ಅಂದಮೇಲೆ ಮನುಷ್ಯ ಜೀವನ ಹೇಗೆ ಹೇಳಿ?. ದರ್ಶನ ಮಾಡಿರುವ ತ್ಯಾಗ, ಕೆಲವರಿಗೆ ಮಾಡಿರುವ ಸಹಾಯಗಳು, ವಿದ್ಯಾಬ್ಯಾಸ ಕೊಡಿಸಿರುವುದು ಹಲವರನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಇಷ್ಟೆಲ್ಲಾ ಒಳ್ಳೆ ಗುಣಗಳು ಹೊಂದಿರುವ ವ್ಯಕ್ತಿ. ನಾವು ದೂರದಿಂದ ನಿಂತು ನೋಡುತ್ತಿರುವವರು ಸಹಾಯ ಮಾಡುವ ಪರಿಸ್ಥಿತಿ ದೇವರು ನಮಗೆ ಕೊಟ್ಟಿಲ್ಲ ಆದರೆ ಮಾಡುತ್ತಿರುವವರ ಕೆಲಸ ನಮಗೆ ಕಿವಿಗೆ ಬಿದ್ದಿದೆ. ವರ್ಷಕ್ಕೆ 2-3 ಕೋಟಿ ದಾನಧರ್ಮ ಮಾಡಲು ಇಡುತ್ತೀನಿ ಎಂದು ವ್ಯಕ್ತಿ ಹೇಳುತ್ತಾರೆ ಅಂದ್ರೆ ಅವರ ಗುಣ ಅರ್ಥವಾಗಬೇಕು. ಇದರಿಂದ ಹೊರ ಬರಬೇಕು...ಸಾಧನೆ ಮಾಡಲು ತುಂಬಾ ಇದೆ ಹೀಗಾಗಿ ಯೋಗಿಯಾಗಿ ಸಾಧನೆ ಕಡೆ ಗಮನ ಕೊಡಬೇಕು. ನಾವು ಕಷ್ಟದಲ್ಲಿ ಇದ್ದಾಗ ಯಾರೂ ಬರುವುದಿಲ್ಲ ಎಂದು ಸ್ವತಃ ದರ್ಶನ್ ಈ ಹಿಂದೆ ಹೇಳಿದ್ದರು, ಅದು ಇವಾಗ ಅವರಿಗೆ ಮನದಟ್ಟು ಮಾಡಿರುತ್ತದೆ ಆ ಜಾಗ ಅದನ್ನು ತಿಳಿಸಿಕೊಡುತ್ತದೆ. ಈಗ ತಾನು ಆಯ್ತು ತನ್ನ ಮಡದಿ ಆಯ್ತು ತನ್ನ ಮಗ ಆಯ್ತು ಎಂದು ಮೂರು ಜನನೇ ಒಟ್ಟಿಗಿದ್ದರೆ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ' ಎಂದು ರವಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.