ರಾಜ್‌ಕುಮಾರ್ ಮತ್ತು ಲೀಲಾವತಿ ಅವರ ಸ್ನೇಹದ ಬಗ್ಗೆ ಈಗಾಗಲೇ ಸಾಕಷ್ಟು ಜನರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಆದರೆ ರಾಜ್ ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದವರು ಬಿ ಗಣಪತಿ, ಮತ್ತೊಂದು ರೀತಿಯ ವಿವರಣೆ ನೀಡಿದ್ದಾರೆ.
ಕನ್ನಡ ಚಿತ್ರರಂಗ ಕಲಾ ಸಾಮ್ರಾಟ್ ಡಾ. ರಾಜ್‌ಕುಮಾರ್ ಸಿನಿಮಾ ವಿಚಾರವಾಗಿ ಎಷ್ಟು ಸುದ್ದಿಯಲ್ಲಿದ್ದರೋ, ಅವರ ವೈಯಕ್ತಿಕ ವಿಚಾರವಾವೂ ಅಷ್ಟೇ ಸುದ್ದಿಯಲ್ಲಿರುತ್ತಿತ್ತು. ಇಡೀ ಮನೆ ಜವಾಬ್ದಾರಿಯನ್ನು ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ವಹಿಸಿಕೊಂಡಿದ್ದರು, ಪತಿಯ ಸಿನಿಮಾ ಕೆಲಸಗಳ ಜೊತೆಗೆ, ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಈ ನಡುವೆ ಇವರ ಜೀವನದಲ್ಲಿ ಪದೆ ಪದೇ ಕೇಳಿ ಬಂದಿದ್ದ ಹೆಸರು ನಟಿ ಲೀಲಾವತಿಯದ್ದು. ನಿಜಕ್ಕೂ ಆಗ ಆಗಿದ್ದೇನೆಂದು ಡಾ.ರಾಜ್‌ಕುಮಾರ್ ಕುಟುಂಬವನ್ನು ತುಂಬಾ ಹತ್ತಿರದಿಂದ ಬಲ್ಲವರಾದ ಬಿ ಗಣಪತಿ ಹಂಚಿಕೊಂಡಿದ್ದಾರೆ.
ಲೀಲಾವತಿ ಮಹಾನಟಿ:
'ಲೀಲಾವತಿಯ ವಿಚಾರವನ್ನು ನಾನು ಸತ್ಯವಾಗಿಯೂ ಮಾತನಾಡಬಾರದು. ಏಕೆಂದರೆ ಒಮ್ಮೆ ನಾನು ಮಾತನಾಡಿದ್ದಾಗ ಲೀಲಾವತಿ ಮತ್ತು ವಿನೋದ್ ರಾಜ್ ಅವರಿಗೆ ನೋವಾಗಿತ್ತು. ಸತ್ಯ ಯಾವಾಗಲೂ ಕಟುವಾಗಿರುತ್ತದೆ. ಲೀಲಾವತಿ ಅವರು ಒಬ್ಬ ಮಹಾನಟಿ, ಒಂದು ದೂಳಿನ ಕಣದಿಂದ ಹುಟ್ಟಿ ಬಂದು ಗಗನ ಚುಂಬಿಯಾಗಿ ಬೆಳೆದ ಕಲಾವಿದೆ. ರಾಜ್‌ಕುಮಾರ್ ಅವರನ್ನು ಲೀಲಾವತಿ ಭೇಟಿಯಾದಾಗ ಅವರಿಗೆ ಆಗಲೇ ಮದುವೆಯಾಗಿತ್ತು. ಒಬ್ಬ ಗೃಹಿಣಿ ರಾಜ್‌ಕುಮಾರ್ ಅವರನ್ನು ಪ್ರೀತಿಸುವುದು, ಅಂಥ ಗೃಹಿಣಿಯೊಟ್ಟಿಗೆ ರಾಜ್‌ಕುಮಾರ್ ಅವರು ಒಡನಾಟ ಇಟ್ಟುಕೊಳ್ಳುವುದು, ಒಬ್ಬ ಗೃಹಿಣಿ ರಾಜ್‌ಕುಮಾರ್‌ರನ್ನು ಸರ್ವಸ್ವ ಎಂದು ಭಾವಿಸುವುದು...ಅದಾದ ನಂತರ ನಡೆದ ಘಟನೆಗಳು ನೋಡಿದರೆ ಅದರಲ್ಲಿ ರಾಜ್‌ಕುಮಾರ್ ಅವರದ್ದು ಏನಾದರೂ ತಪ್ಪಿದೆ ಅನ್ಸುತ್ತಾ? ಇದು ಬಹಳ ಸೂಕ್ಷ್ಮವಾದ ವಿಚಾರ. ಈ ಹಿಂದೆಯೇ ವಿಡಿಯೋ ಒಂದರಲ್ಲಿ ಹೇಳಿದ್ದೀನಿ, DNA ಟೆಸ್ಟ್ ಮಾಡಿಬಿಡಿ ಎಂದು. ಒಂದು ಕೈಯಿಂದ ಚಪ್ಪಾಳೆ ಆಗುವುದಿಲ್ಲ ಎರಡೂ ಕೈ ಸೇರಬೇಕು,' ಎನ್ನುವ ಮೂಲಕ ಸ್ಯಾಂಡಲ್‌ವುಡ್‌ನ ಬಿಗ್ ಗಾಸಿಪ್ ಆಗಿದ್ದ ಸಂಬಂಧವೊಂದಕ್ಕೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.
undefined
ಮಲಯಾಳಂ ಚಿತ್ರರಂಗದಲ್ಲಿ ಜಡ್ಜ್ ಹೇಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಮಲಯಾಳಂ ಚಿತ್ರರಂಗದಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ವರದಿ ನೀಡಿದೆ. ಈ ವರದಿ ಬಹಿರಂಗವಾದ ನಂತರ ಹಲವು ನಟಿಯರು ತಮ್ಮ ವಿರುದ್ಧ ನಡೆದಿದೆ ಎಂದು ಹೇಳಲಾದ ಹಲವಾಲೂ ದೌರ್ಜನ್ಯದ ಬಗ್ಗೆ ಮೌನ ಮುರಿಯುತ್ತಿದ್ದಾರೆ. ಹಾಗಾಗಿ ಕನ್ನಡ ಚಿತ್ರಂಗವಾದ ಸ್ಯಾಂಡಲ್‌ವುಡ್‌ನಲ್ಲಿಯೂ ಮಹಿಳೆಯರಿಗೆ ಅನುಕೂಲವಾಗವಂಥ ಪರಿಸರ ಸೃಷ್ಟಿಸಲು, ಅಂಥದ್ದೊಂದು ಸಮಿತಿ ರಚನೆಯಾಗಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಈ ಬಗ್ಗೆ ಯೂಟ್ಯೂಬರ್ ಪ್ರಶ್ಸಿಸಿದಾಗ, ಬಿ ಗಣಪತಿ ಅವರು ಅದು ಬುಲ್ ಶಿಟ್, ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಗಂಡನಿಗೆ ಮೆಹಂದಿ ವಾಸನೆ ಅಂದ್ರೆ ಆಗಲ್ಲ ಅದಿಕ್ಕೆ ಮದುವೆಯಲ್ಲಿ ಹಾಕಿಕೊಂಡಿಲ್ಲ; ಸೋನಾಕ್ಷಿ ಸಿನ್ಹಾ
ರಾಜ್ ಮುಗ್ಧರು:
'ರಾಜ್‌ಕುಮಾರ್ ಅವರೊಟ್ಟಿಗೆ ಓನ್ ಟು ಓನ್ ಒಡನಾಟ ಮಾಡಲು ಪಾರ್ವತಮ್ಮ ಯಾರಿಗೂ ಬಿಟ್ಟಿರಲಿಲ್ಲ. ಕಾರಣ ಏನೆಂದರೆ ಸುಮಾರು ಪ್ರಯೋಗಗಳನ್ನು ಮಾಡಿ ಸೋತಿದ್ದರು. ರಾಜ್‌ಕುಮಾರ್ ಅವರಿಗೆ ವ್ಯವಹಾರದಲ್ಲಿಯೂ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅಷ್ಟು ಜಾಣತನವೂ ಅವರಲ್ಲಿ ಇರಲಿಲ್ಲ. ತಾವು ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ಏನು ಬರುತ್ತದೆ ಎಂದು ನೋಡಿಕೊಂಡು, ಮಾತನಾಡುವಂಥವರೂ ಆಗಿರಲಿಲ್ಲ. ಸಿನಿಮಾದಲ್ಲಿ ರಾಜ್‌ಕುಮಾರ್ ಎಂದು ಮೆರೆದರೂ, ಅವರ ಒಳಗೆ ಜೀವಂತವಾಗಿದ್ದದು ಮುತ್ತುರಾಜ್. 5,500 ಮತ್ತು 1000ರಕ್ಕೂ ಅವರಿಗೆ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಪಾರ್ತಮ್ಮ ಕರೆದಾಗ ಮನೆಗೆ ಹೋಗುತ್ತಿದ್ದೆ, ಸಂಜೆ 5 ಗಂಟೆವರೆಗೂ ಸಮಯ ಕಳೆಯುತ್ತಿದ್ದೆ. ಲೀಲಾವತಿ, ಭಾರತಿ....ಪ್ರತಿಯೊಂದೂ ವಿಚಾರವಾಗಿಯೂ ಅವರೊಟ್ಟಿಗೆ ಮನ ಬಿಚ್ಚಿ ಮಾತನಾಡಿದ್ದೇನೆ, ಆಫ್ ದಿ ರೆಕಾರ್ಡ್ ಮಾತನಾಡಿರುವುದನ್ನು ಯಾವುತ್ತೂ ವ್ಯಕ್ತಿ ಸಾಯುವವರೆಗೂ ಹೇಳಬಾರದು,' ಎಂದು ಗಣಪತಿ ತಮ್ಮ ವೃತ್ತಿ ಧರ್ಮವನ್ನು ಹೇಳಿ ಕೊಂಡಿದ್ದಾರೆ.
ಭಾರತದಿಂದ ಹೊರ ಹೋಗಬೇಕು ಪ್ಲೀಸ್ ಬೇಗ ಬಾ ಅಪ್ಪ; ಮಗನ ಪತ್ರ ಓದಿ ಕಿರಿಕ್ ಕೀರ್ತಿ ಕಣ್ಣೀರು