ನಟ ಪ್ರಥಮ್ 'ಡಿ ಬಾಸ್'ಗೆ ಹೆದರಿಕೊಂಡು ಬಕೆಟ್ ಹಿಡತವ್ನೆ ಎಂದ ಫ್ಯಾನ್ಸ್!

By Sathish Kumar KH  |  First Published Oct 14, 2024, 12:26 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲುವಾಸಿಯಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದೆ. ನಟ ಪ್ರಥಮ್ ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದು, ದರ್ಶನ್ ಅಭಿಮಾನಿಗಳು ಪ್ರಥಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಅ.14): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲುವಾಸಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಮಹ್ವತದ ದಿನವಾಗಿದೆ. ಜಾಮೀನು ಅರ್ಜಿ ಸಲ್ಲಿಕೆಯ ಮಹತ್ವದ ತೀರ್ಪು ಇಂದು ಹಿರಬರಲಿದ್ದು, ನಟ ಒಳ್ಳೆ ಹುಡುಗ ಪ್ರಥಮ್ ದರ್ಶನ್ ಬಿಡುಗಡೆ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ಜೈಲಿಗೆ ಹೋದಾಗ ಎಲ್ಲ ಅಭಿಮಾನಿಗಳಿಗೆ ಬೈದಿದ್ದು ಮರೆತೋಯ್ತಾ? ಇವಾಗ ಬಕೆಟ್ ಹಿಡಿಯೋದು ಬೇಡ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಪ್ರಥಮ್ 'ಈಶ್ವರನಲ್ಲಿ ಪಾಮಾಣಿಕ‌ ಪ್ರಾರ್ಥನೆ. ದರ್ಶನ್ ತೂಗುದೀಪ (@dasadarshan) ಸರ್ ಬಿಡುಗಡೆಯಾಗಿ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವಂತಾಗಲಿ. ಕೆಟ್ಟ ಕಾಲ ಎಲ್ಲರಿಗೂ ಬರುತ್ತದೆ. ಅದನ್ನು ದಾಟಿ ಅಭಿಮಾನಿಗಳನ್ನ ರಂಜಿಸಲಿ. ಅಂದಾಭಿಮಾನಿ ಅಂದಿದ್ದು ನೋವಾಗಿದ್ದರೆ ಮರೆತುಬಿಡಿ. ವ್ಯಂಗ್ಯ ಬೇಡ;ದೇವ್ರಾಣೆ ಬಿಡುಗಡೆಯಾಗಲಿ. ಮನಸಿನಿಂದ #ಈಶ್ವರನಲ್ಲಿ ಪ್ರಾರ್ಥನೆ' ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಇದಕ್ಕೆ ದರ್ಶನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

undefined

ನಟ ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಗಳು; 500ಕ್ಕೂ ಅಧಿಕ ಕಾಲ್, ಮೆಸೇಜ್

ಈ ಪೋಸ್ಟ್‌ ಮಾಡಿದಾಕ್ಷಣ ದರ್ಶನ್ ಅಭಿಮಾನಿಗಳು ನಟ ಪ್ರಥಮ್‌ಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಬದುಕ್ಬೇಕಲ್ಲ,, ಬಕೆಟ್ ಹಿಡಿತವ್ನೆ,,, ನಿನ್ನ ಪೌರುಷ ಬಾಸ್ ಬರೀವರ್ಗು ಮಾತ್ರಾನಾ? ಎಂದು ದರ್ಶನ್ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಎಲ್ಲಾ ವಿಷ್ಯದಲ್ಲೂ ಬಂದು ಮೂಗು ತೂರಿಸೋದು ಬಿಟ್ಟುಬಿಡು ಬ್ರೋ, ಇದು ನಿಂಗು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿಮ್ಮ ಈ ನಡೆಯಿಂದ ನಿಮ್ಮ ಕೆರಿಯರ್‌ಗೂ ಒಳ್ಳೆಯದಾಗಲಿ ಬ್ರೋ.. ನಮ್ಮ ಬಾಸ್ ಹೇಳಿರೋ ಒಂದು ಮಾತು 'ತಾನು ಬೆಳೆದು ತನ್ನವರನ್ನು ಬೆಳೆಸೋ ಈ ಗುಣ..' ಒಳ್ಳೆಯದಾಗಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹೀಗೂ ಟ್ರೋಲ್ ಮಾಡಬಹುದಾ??, ನೀನು ಹೇಳಿದೀಯ ಅಂದ್ರೆ ಬೇಲ್ ಸಿಗೊಲ್ಲ ಇವತ್ತು? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಈಶ್ವರನಲ್ಲಿ ಪಾಮಾಣಿಕ‌ ಪ್ರಾರ್ಥನೆ.
ನಾಳೆ sir ಬಿಡುಗಡೆಯಾಗಿ ಚಿತ್ರರಂಗದಲ್ಲಿ ಹೊಸ inningsಶುರು ಮಾಡುವಂತಾಗಲಿ🙏
ಕೆಟ್ಟ ಕಾಲ ಎಲ್ಲರಿಗೂ ಬರುತ್ತದೆ.ಅದನ್ನು ದಾಟಿ ಅಭಿಮಾನಿಗಳನ್ನ ರಂಜಿಸಲಿ🙏
ಅಂದಾಭಿಮಾನಿ ಅಂದಿದ್ದು ನೋವಾಗಿದ್ದರೆ ಮರೆತುಬಿಡಿ.ವ್ಯಂಗ್ಯ ಬೇಡ;ದೇವ್ರಾಣೆ ಬಿಡುಗಡೆಯಾಗಲಿ.ಮನಸಿನಿಂದ ಪ್ರಾರ್ಥನೆ🙏 pic.twitter.com/X9vDrETF6f

— Olle Hudga Pratham (@OPratham)

ಕಾಂಟ್ರವರ್ಸಿಗೆ ಕಾರಣವೇನು?
ನಟ ದರ್ಶನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದೊಯ್ದ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿದ್ದ ನಟ ಪ್ರಥಮ್ 'ದರ್ಶನ್ ಅವರನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ಕೆಲ ಅಂಧಾಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಬಾರಿಸಿ ಓಡಿಸಬೇಕು' ಎಂದು ಹೇಳಿದ್ದರು.  ಈ ಬಗ್ಗೆ ದರ್ಶನ್ ಅಭಿಮಾನಿಗಳು ಕೆಂಡಕಾರಿದ್ದರು. ಕೆಲವರು ಫೋನ್ ಕರೆಗಳನ್ನು ಮಾಡಿ ಬೆದರಿಸುತ್ತಿರುವುದಾಗಿ ಪ್ರಥಮ್ ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಮೇಲೆ ಪೊಲೀಸರಿಗೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ತಾರೆ ಎಂದು ಹೇಳಿದ್ದರು.

ಅಂಧಾಭಿಮಾನಿಗಳೇ Social Mediaದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ?: ಪ್ರಥಮ್

ಮುಂದುವರೆದು ಘಟನೆಗೆ ಪ್ರಥಮ್ ಪ್ರತಿಕ್ರಿಯಿಸಿ, ಅಂಧಾಭಿಮಾನಿಗಳೇ, ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ. ಮನೆಗೆ ಪೊಲೀಸ್ ನೋಟಿಸ್ ಬಂದ ಮೇಲೆ ಸ್ಟೇಷನ್‌ಗೆ ಬಂದು ನಾವು ಪ್ರಥಮ್ ಫ್ಯಾನ್, ಯಾರೋ ಫೇಕ್ ಪ್ರೊಫೈಲ್ ಮಾಡಿ ಬಿಟ್ಟಿದ್ದಾರೆ ಅಂತಾ ಕಾಲಿಗೆ ಬೀಳ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ದಿ ಕಲಿಯಲ್ಲ. ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನಟ ದರ್ಶನ್ ಬಿಡುಗಡೆ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

click me!