'ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಸ್ವತಃ ಪಶುಪಕ್ಷಿಗಳ ಯೋಗಕ್ಷೇಮ ನೋಡಿಕೊಳ್ಳುವುದರ ಜತೆ ಊರಿನಲ್ಲಿ ಪಶು ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ. ಕಷ್ಟ ಎಂದು ಬಂದವರನ್ನು ಯಾವತ್ತೂ ಅಮ್ಮ-ಮಗ ಬರಿಗೈಲಿ ಕಳಿಸಿದ್ದೇ ಇಲ್ಲ.
ಮೂರು ದಿನಗಳ ಹಿಂದೆ ನಮ್ಮನ್ನಗಲಿದ ಹಿರಿಯ ನಟಿ, ಬಹುಭಾಷಾ ತಾರೆ ಲೀಲಾವತಿ ಅವರ ಬಗ್ಗೆ ಸೋಲದೇವನಹಳ್ಳಿ ಗ್ರಾಮಸ್ಥರು ತುಂಬಾ ಒಳ್ಳೆಯ ಮಾತುಗಳನ್ನು ಆಡುತ್ತಾರೆ.
ಲೀಲಾವತಿ ನಿಧನ ಹೊಂದಿದ್ದಕ್ಕೆ ಊರ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ಲೀಲಾವತಿ ಅಮ್ಮನವರೇ ಈ ಊರಿಗೆ ಬಸ್ ಬಿಡಿಸಿದ್ದು. ಅವರಿಂದಲೇ ಊರಿನಲ್ಲಿ ದಿನಕ್ಕೆ ಎಂಟು ಬಾರಿ ಬಿಎಂಟಿಸಿ ಬಸ್ ಓಡಾಡುತ್ತೆ. ನಮ್ಮ ಊರಿನಲ್ಲಿ ಬಿಎಂಟಿಸಿ ಬಸ್ ನಿಲ್ಲಸಲು ನಿಲ್ದಾಣ ಇರಲ್ಲ. ಅದಕ್ಕೂ ಅವರೇ ಅಮ್ಮ-ಮಗ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರು ಮಾಡಿರುವ ಉಪಕಾರ ಒಂದೆರಡಲ್ಲ. ನಿಜವಾಗಿ ಹೇಳಬೇಕು ಎಂದರೆ, ಈ ಊರಿನ ಜನರು ಲೀಲಾವತಿ ಅಮ್ಮನ ಹೆಸರು ಹೇಳಿಕೊಂಡೇ ಓಡಾಡಬೇಕು.
ಇನ್ನು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಅಮ್ಮ ಹಾಗು ಅವರ ಮಗ ವಿನೋದ್ ರಾಜ್ ಅವರಿಬ್ಬರೂ ಮಾಡಿರುವ ಸೇವೆಗೆ ಲೆಕ್ಕವೇ ಇಲ್ಲ. ಗ್ರಾಮಸ್ಥೆ ಲಕ್ಷ್ಮೀ 'ಅಮ್ಮನವರು ಇರೋ ತನಕ ಯಾವ್ದೇ ಭಯ ಇರಲಿಲ್ಲ, ಯಾವುದಕ್ಕೂ ಚಿಂತೆ ಮಾಡುವ ಅಗತ್ಯ ಇರಲಿಲ್ಲ. ಅವರು ಊರಿಗೆ ತುಂಬಾ ಕೊಡುಗೆ ಕೊಟ್ಟಿದ್ದಾರೆ. ಹಲವು ಜನರಿಗೆ ತುಂಬಾನೇ ಸಹಾಯ ಮಾಡಿದ್ದಾರೆ. ನನಗೆ ಹಸು ಕಟ್ಟಲು ಶೆಡ್ ಮಾಡಿಕೊಟ್ಟಿದ್ದಾರೆ. ಈಗ ಅವರು ಇಲ್ಲವಲ್ಲ ಎಂಬ ನೋವಿದೆ. ಹಸು ಕರುಗಳಿಗೆ ಕುಡಿಯಲು ನೀರಿನ ಸಂಪು ಮಾಡಿದ್ದಾರೆ. ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಮಾಡಿರೋ ಉಪಕಾರ ಕರೆಯಲಾಗದು' ಎಂದಿದ್ದಾರೆ.
ಕ್ಯಾಮೆರಾ ಎದುರು ಹೀಗೆ ಹೇಳಿದ್ರೆ ಮುಂಬರುವ ಸಿನಿಮಾ ನಿರ್ದೇಶಕರಿಗೆ ಸಮಸ್ಯೆ ಆಗುತ್ತೆ; ಪ್ರಿಯಾಂಕಾ ಚೋಪ್ರಾ
'ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಸ್ವತಃ ಪಶುಪಕ್ಷಿಗಳ ಯೋಗಕ್ಷೇಮ ನೋಡಿಕೊಳ್ಳುವುದರ ಜತೆ ಊರಿನಲ್ಲಿ ಪಶು ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ. ಕಷ್ಟ ಎಂದು ಬಂದವರನ್ನು ಯಾವತ್ತೂ ಅಮ್ಮ-ಮಗ ಬರಿಗೈಲಿ ಕಳಿಸಿದ್ದೇ ಇಲ್ಲ. ಈಗ ಅವರಿಲ್ಲ ಎಂಬುದು ತುಂಬಾ ನೋವಿನ ಸಂಗತಿ' ಎಂದಿದ್ದಾರೆ ಹಲವು ಗ್ರಾಮಸ್ಥರು. ಈಗ ಅಗಲಿರುವ ಲೀಲಾವತಿ ಅಂತ್ಯಕ್ರಿಯೆ, ಹಾಲುತುಪ್ಪದ ಶಾಸ್ತ್ರ ಎಲ್ಲದಕ್ಕೂ ಊರಿನ ಗ್ರಾಮಸ್ಥರು ಕುಟುಂಬಸ್ಥರ ಜತೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಲೀಲಾವತಿಯವರ ತೋಟದ ಮನೆಯಲ್ಲಿ ಆ ಊರಿನ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ ಎನ್ನಬಹುದು.
ಬಿಗ್ ಬಾಸ್‌ನಲ್ಲಿ ಎದ್ದಿರುವ ಹಲವು ಪ್ರಶ್ನೆಗಳಿಗೆ 'ಸೂಪರ್ ಸಂಡೇ ವಿತ್ ಸುದೀಪ' ಉತ್ತರ ಕೊಡಬಹುದೇ?
ಒಟ್ಟಿನಲ್ಲಿ, ತಾವು ಬದುಕಿದ್ದಾಗ ಮಾನವೀಯತೆಯೇ ಮೂರ್ತಿವೆತ್ತಂತೆ ಬದುಕಿದ್ದ ಲೀಲಾವತಿ ನಿಧನ ಹೊಂದಿಬ ಬಳಿಕ ಅವರು ಮಾಡಿದ ಎಲ್ಲಾ ಸಾಮಾಜಿಕ ಕಳಕಳಿ ಕೆಲಸಗಳ ಬಗ್ಗೆ ಒಂದೊಂದಾಗಿ ಮಾಹಿತಿ ಹೊರಬರುತ್ತಿದೆ. ಇದ್ದಾಗ ತಾವು ಮಾಡಿದ ಉಪಕಾರ ಯಾರಿಗೂ ಗೊತ್ತಾಗಬಾರದು ಎಂಬಂತೆ ಮಾಡಿದ್ದರು ಅವರು. ಆದರೆ, ಸತ್ತ ಬಳಿಕ ಸಹಜವಾಗಿಯೇ ಅವರಿಂದ ಸಹಾಯ ಪಡೆದ ಜನರು ಸ್ಮರಿಸದೇ ಇರಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಈಗ ಲೀಲಾವತಿಯವರ ಜನಪರ ಕಾಳಜಿ, ಕೆಲಸ ಹೊರಜಗತ್ತಿಗೆ ಅನಾವರಣ ಆಗುತ್ತಿದೆ.