ನಟ ವಿನೋದ್ ರಾಜ್ ಮೊನ್ನೆ ಅಮ್ಮನ ನಿಧನದ ಸುದ್ದಿ ತಿಳಿದು ನಿಂತಲ್ಲೇ ಕುಸಿದು ಬಿದ್ದಿದ್ದರು. ಅವರನ್ನು ಸಮಾಧಾನ ಪಡಿಸಲು ಬಹಳಷ್ಟು ಜನರು ಪ್ರಯತ್ನಿಸುತ್ತಿದ್ದರು. ಆಧುನಿಕ ಕಾಲದ ಶ್ರವಣ ಕುಮಾರ ಎಂದೇ ಕರೆಸಿಕೊಂಡಿರುವ ನಟ ವಿನೋದ್ ರಾಜ್ ಅವರು ಅಮ್ಮನ ಬಗ್ಗೆ ಅಪಾರವಾದ ಪ್ರೀತಿ-ಗೌರವಗಳನ್ನು ಹೊಂದಿದ್ದರು.
ಕನ್ನಡದ ಬಹುಭಾಷಾ ಹಿರಿಯ ನಟಿ ಲೀಲಾವತಿ ನಿಧನ ಹೊಂದಿ ಇಂದಿಗೆ 3 ದಿನವಾಯ್ತು. 8 ಡಿಸೆಂಬರ್ 2023ರಂದು ನಿಧನ ಹೊಂದಿರುವ ನಟಿ ಲೀಲಾವತಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂದು ಲೀಲಾವತಿ ಕುಟುಂಬ ಹಾಲು ತುಪ್ಪ ಕಾರ್ಯ ಮಾಡಲಿದ್ದಾರೆ. ಬೆಂಗಳೂರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಮಾಡಿಕೊಂಡಿರುವ ತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಇಂದು, 10 ಡಿಸೆಂಬರ್ 2023ರಂದು ಮಧ್ಯಾಹ್ನ 12 ಗಂಟೆಗೆ ಲೀಲಾವತಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಲಿದ್ದಾರೆ ಲೀಲಾವತಿ ಕುಟುಂಬಸ್ಥರು.
ಲೀಲಾವತಿ ಪುತ್ರ ನಟ ವಿನೋದ್ ರಾಜ್ ಕುಟುಂಬ ಹಾಗು ಸೋಲದೇವನಹಳ್ಳಿ ಗ್ರಾಮಸ್ಥರು ಹಾಲುತುಪ್ಪ ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ. ಹಾಲುತುಪ್ಪ ಕಾರ್ಯ ಮಾಡಲು ಸಿದ್ಧತೆ ವಿನೋದ್ ರಾಜ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಅಂಗವಾಗಿ ಸಮಾಧಿ ಅಕ್ಕ ಪಕ್ಕ ಇದ್ದ ಮಣ್ಣು ಕಸವನ್ನ ಗ್ರಾಮಸ್ಥರು, ಕುಟಂಬಸ್ಥರು ಸೇರಿ ಪರಸ್ಪರ ಸಹಕಾರದಿಂದ ಸರಿ ಮಾಡಿದ್ದಾರೆ.
undefined
ಉಕ್ಕಿನ ಮಹಿಳೆ ಇಂದಿರಾ ಗಾಂಧಿಯಿಂದಲೂ ಪ್ರಶಸ್ತಿ ಸ್ವೀಕರಿಸಿದ್ದರು ನಟಿ ಲೀಲಾವತಿ!
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ನಟ ವಿನೋದ್ ರಾಜ್ 'ಇವತ್ತು ಹಾಲು ತುಪ್ಪ ಕಾರ್ಯ ಇದೆ. 12 ಗಂಟೆಗೆ ಈ ಕಾರ್ಯ ಮಾಡುತ್ತೇವೆ. ಊರಿನ ಗ್ರಾಮಸ್ಥರು ಮತ್ತು ನಮ್ಮ ಕುಟುಂಬದ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ನನ್ನ ಅಮ್ಮ ಓಡಾಡಿದ ಜಾಗ ಇದು. ಇದನ್ನುಇನ್ಮುಂದೆ 'ಪುಣ್ಯ ಭೂಮಿ' ಎನ್ನಲಾಗುತ್ತದೆ. ಅಮ್ಮನ ಸಮಾಧಿ ಎದುರು ಈ ಊರಿನ ಜನರಿಗೆ ಕುಡಿಯುವ ನೀರಿನ ಘಟಕವನ್ನ ಹಾಕಲು ನಿರ್ಧರಿಸಿದ್ದೇವೆ. ಅಮ್ಮನ ಸ್ಮಾರಕ ನಿರ್ಮಾಣವನ್ನು ಕೂಡ ಆದಷ್ಟು ಬೇಗ ಮಾಡಲಾಗುತ್ತದೆ ' ಎಂದಿದ್ದಾರೆ.
ಕಣ್ಮರೆಯಾದ ಕನ್ನಡದ ಕಣ್ಮಣಿ ಲೀಲಾವತಿ ಕೃಷಿ ಕಾಯಕಕ್ಕೆ ಪ್ರಶಸ್ತಿಯೇ ಸಿಗಲಿಲ್ಲ!
ನಟ ವಿನೋದ್ ರಾಜ್ ಮೊನ್ನೆ ಅಮ್ಮನ ನಿಧನದ ಸುದ್ದಿ ತಿಳಿದು ನಿಂತಲ್ಲೇ ಕುಸಿದು ಬಿದ್ದಿದ್ದರು. ಅವರನ್ನು ಸಮಾಧಾನ ಪಡಿಸಲು ಬಹಳಷ್ಟು ಜನರು ಪ್ರಯತ್ನಿಸುತ್ತಿದ್ದರು. ಆಧುನಿಕ ಕಾಲದ ಶ್ರವಣ ಕುಮಾರ ಎಂದೇ ಕರೆಸಿಕೊಂಡಿರುವ ನಟ ವಿನೋದ್ ರಾಜ್ ಅವರು ಅಮ್ಮನ ಬಗ್ಗೆ ಅಪಾರವಾದ ಪ್ರೀತಿ-ಗೌರವಗಳನ್ನು ಹೊಂದಿದ್ದರು. ಅಮ್ಮ ತೀರಿಕೊಂಡ ಬಳಿಕವೂ ಅಷ್ಟೇ, ಅಮ್ಮನ ಸವಿನೆನಪಿಗಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿನೋದ್ ರಾಜ್ ನಿರ್ಧರಿಸಿದ್ದಾರೆ. ಲೀಲಾವತಿ ಹಾಗೂ ವಿನೋದ್ ರಾಜ್ ಬಗ್ಗೆ ಸೋಲದೇವನಹಳ್ಳಿ ಗ್ರಾಮಸ್ಥರು ಅಪಾರ ಗೌರವಾದರಗಳನ್ನು ಹೊಂದಿದ್ದಾರೆ.