ಖಳನಟ ಸುಧೀರ್ ಬಗ್ಗೆ ಫ್ಯಾನ್ಸ್ ಕ್ರೇಜ್ ಹೀಗಿತ್ತು ಎಂದರೆ ಯಾರೂ ನಂಬಲಿಕ್ಕೇ ಅಸಾಧ್ಯ!

Published : Sep 01, 2024, 04:47 PM ISTUpdated : Sep 01, 2024, 04:48 PM IST
ಖಳನಟ ಸುಧೀರ್ ಬಗ್ಗೆ ಫ್ಯಾನ್ಸ್ ಕ್ರೇಜ್ ಹೀಗಿತ್ತು ಎಂದರೆ ಯಾರೂ ನಂಬಲಿಕ್ಕೇ ಅಸಾಧ್ಯ!

ಸಾರಾಂಶ

ಸುಧೀರ್ ಅಭಿನಯಿಸುತ್ತಿದ್ದ ನಾಟಕಗಳಲ್ಲಿ 'ಗೌಡರ ಗದ್ದಲ' ಬಹಳಷ್ಟು ಕ್ರೇಜ್ ಹುಟ್ಟುಹಾಕಿತ್ತು. ಆ ನಾಟಕದಲ್ಲಿ ನಟ ಸುಧೀರ್ ಅವರಿಗೆ ಅದೆಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು ಎಂದರೆ ಅವರಿಗಾಗಿಯೇ ಗೌಡರ ಗದ್ದಲ ನೋಡಲು ಜನಸಾಗರವೇ ದೂರದ ಊರುಗಳಿಂದ ಲಾರಿ, ಬಸ್‌...

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಖಳನಟರಲ್ಲಿ ಸುಧೀರ್ ಕೂಡ ಒಬ್ಬರು. ಅವರು ತೆರೆಯಲ್ಲಿ ತುಂಬಾ ರಫ್ ಅಂಡ್ ಟಫ್ ಅಂತ ಅನ್ನಿಸಿದರೂ ನಿಜ ಜೀವನದಲ್ಲಿ ಬಹಳ ಎನ್ನುವಷ್ಟು ಮೃದು ಸ್ವಭಾವ ಹೊಂದಿದ್ದರು. ಮೂಲತಃ ಅವರು ನಾಟಕರಂಗದ ಕಲಾವಿದರಾಗಿದ್ದು, ಬಳಿಕ ಸಿನಿಮಾ ನಟನೆಯನ್ನೂ ಶುರುಮಾಡಿದ್ದರು. ಆದರೂ ಕೂಡ, ಅವರು ಸಿನಿಮಾ ಜೊತೆಜೊತೆಗೆ ನಾಟಕಗಳಲ್ಲೂ ಆಗಾಗ ಅಭಿನಯಿಸುತ್ತಿದ್ದರು. 

ಸುಧೀರ್ ಅಭಿನಯಿಸುತ್ತಿದ್ದ ನಾಟಕಗಳಲ್ಲಿ 'ಗೌಡರ ಗದ್ದಲ' ಬಹಳಷ್ಟು ಕ್ರೇಜ್ ಹುಟ್ಟುಹಾಕಿತ್ತು. ಆ ನಾಟಕದಲ್ಲಿ ನಟ ಸುಧೀರ್ ಅವರಿಗೆ ಅದೆಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು ಎಂದರೆ ಅವರಿಗಾಗಿಯೇ ಗೌಡರ ಗದ್ದಲ ನೋಡಲು ಜನಸಾಗರವೇ ದೂರದ ಊರುಗಳಿಂದ ಲಾರಿ, ಬಸ್‌ ಹಾಗೂ ಎತ್ತಿನಗಾಡಿಗಳಲ್ಲಿ ಬರುತ್ತಿದ್ದರಂತೆ. ನಟ ಸುಧೀರ್ ಅವರನ್ನು ಹತ್ತಿರದಿಂದ ನೋಡಿ, ಮಾತನಾಡಿಸಿಕೊಂಡು ಹೋಗುತ್ತಿದ್ದರಂತೆ. 

ಎಲ್ಲಾ ದುರಭ್ಯಾಸಗಳಿಂದ ದೂರವಿದ್ದರೂ ಕನ್ನಡ ಖಳನಟ ಸುಧೀರ್ ಸತ್ತಿದ್ದು ಹೇಗೆ?

ಹಾಗೇ ಒಮ್ಮೆ ಮಂಗಳೂರಲ್ಲಿ ಗೌಡರ ಗದ್ದಲ ನಾಟಕ ನಡೆಯುತ್ತಿತ್ತು. ಅಲ್ಲೊಂದು ಕಹಿ ಘಟನೆ ಈ ಗೌಡರ ಗದ್ದಲ ನಾಟಕ ಮುಗಿದ ವೇಳೆ ನಡೆದುಬಿಟ್ಟಿತ್ತು ಎನ್ನಲಾಗಿದೆ. ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಜನರು ನಟ ಸುಧೀರ್ ಅವರ ಪಾತ್ರವನ್ನು ನೋಡಿ ಶಿಳ್ಳೆ-ಚಪ್ಪಾಳೆ ಮಳೆಗರೆದಿದ್ದರು ಎನ್ನಲಾಗಿದೆ. ಆದರೆ, ಅವರು ವಾಪಸ್ ಮನೆಗೆ ಹೋಗುವಾಗ ಜನಸಂದಣೆಯ ನೂಕುನುಗ್ಗಲಿನಲ್ಲಿ ಕೆಲವರು ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು ಅಸು ನೀಗಿದ್ದರು. 

ಆ ಘಟನೆಯಿಂದ ನಟ ಸುಧೀರ್ ಬಹಳಷ್ಟು ನೊಂದುಕೊಂಡಿದ್ದರು ಎನ್ನಲಾಗಿದೆ. ಅವರ ಕ್ರೇಜ್ ಆ ಬಳಿಕ ಕೂಡ ಕಮ್ಮಿ ಆಗದಿದ್ದರೂ, ಸ್ವತಃ ನಟ ಸುಧೀರ್ ಅವರು ಅಂದು ಪ್ರೇಕ್ಷಕರ ಸಾವಿನಿಂದ ಆದ ನೋವನ್ನು ಮರೆಯಲಾಗದೇ ತಮ್ಮ ಕೊನೆಯುಸಿರು ಇರೋವರೆಗೂ ಅದನ್ನು ಆತ್ಮೀಯರಲ್ಲಿ ಹೇಳಿಕೊಂಡು ಒದ್ದಾಡುತ್ತಿದ್ದರಂತೆ. ನನ್ನನ್ನು ನೋಡಲಿಕ್ಕೆ ಬಂದ ಅವರಿಗೆ ಹೀಗಾಗೋಯ್ತಲ್ಲ ಎಂದು ಕನಸಿನಲ್ಲಿ ಕೂಡ ಕೊರಗುತ್ತಿದ್ದರಂತೆ. 

ಎಐ ತಂತ್ರಜ್ಞಾನದಲ್ಲಿ ಕಾಣಿಸಿಕೊಂಡ ನಟ ಸುಧೀರ್‌! ಕಳೆದುಕೊಂಡ ಅಪ್ಪನನ್ನು ನೋಡಿ ತರುಣ್‌ ಕಣ್ಣೀರು

ಒಟ್ಟಿನಲ್ಲಿ, ಡಸ್ಟ್ ಅಲರ್ಜಿಯಿಂದ ಕೇವಲ 52 ವರ್ಷಕ್ಕೇ ಇಹಲೋಕ ತ್ಯಜಿಸಿದ ನಟ ಸುಧೀರ್ ಬದುಕಿದ್ದಷ್ಟೂ ದಿನ ತಮ್ಮ ಕಷ್ಟವನ್ನು ಮರೆತು ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ, ವಿಧಿ ಲಿಖಿತವನ್ನು ಯಾರೂ ಅಳಿಸಲು ಅಸಾಧ್ಯ ಎನ್ನುವಂತೆ, ಡಸ್ಟ್ ಅಲರ್ಜಿ ರೋಗಕ್ಕೆ ಗೊತ್ತಿದ್ದೂ ಕೂಡ ಬಲಿಯಾಗುವಂತಾಯ್ತು. ಕನ್ನಡ ಚಿತ್ರರಂಗ ಅಮೋಘ ಖಳನಟರೊಬ್ಬರನ್ನು ಆ ಮೂಲಕ ಕಳೆದುಕೊಂಡಿತು. ಇಂದು ಅವರ ಮಕ್ಕಳಾದ ನಂದ ಕಿಶೋರ್ ಹಾಗು ತರುಣ್ ಸುಧೀರ್ ಅವರು ಸಿನಿಮಾ ನಿರ್ದೇಶಕರಾಗಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!