ನಾವು ಮಾಡೋ ಪ್ರತಿಯೊಂದು ಕೆಲ್ಸ ನಮ್ ಬಗ್ಗೆ ಪ್ರಪಂಚಕ್ಕೆ ಮೆಸೇಜ್ ಕೊಡುತ್ತೆ; ರಮೇಶ್ ಅರವಿಂದ್!

By Shriram Bhat  |  First Published Sep 1, 2024, 1:18 PM IST

ಆ ವಯಸ್ಸಲ್ಲಿ ನಂಗೆ ಅರ್ಥ ಆಗಿರ್ಲಿಲ್ಲ, ಈಗ ಅರ್ಥ ಆಗುತ್ತೆ.. ನಾವು ಮಾಡೋ ಪ್ರತಿಯೊಂದು ಕೆಲ್ಸ, ನಾವಾಡೋ ಪ್ರತಿಯೊಂದು ಮಾತು, ನಮ್ಮ ಪ್ರತಿಯೊಂದ ಹಾವ-ಭಾವ, ಸೋಷಿಯಲ್ ಮೀಡಿಯಾ, ಇನ್‌ಸ್ಟಾಗ್ರಾಂ ಪೋಸ್ಟ್ ಎಲ್ಲವೂ ನಮ್ಮ ಬಗ್ಗೆ ನಮಗೇ ಗೊತ್ತಿಲ್ದೇ..


ಕನ್ನಡ ಸೇರಿದಂತೆ ಸೌತ್ ಇಂಡಿಯನ್ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಟಿಪ್ಸ್ ಕೊಡುವುದರಲ್ಲಿ ಸಿದ್ಧಹಸ್ತರು ಎಂಬುದು ಬಹುತೇಕರಿಗೆ ಗೊತ್ತು. ರಮೇಶ್ ಈಗಂತೂ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ, ಜಗತ್ತೇ ನೋಡುವಂತೆ ಮಾತನಾಡುತ್ತಾರೆ. ಇದರಿಂದ ಅಗತ್ಯವಿರುವವರು ಎಲ್ಲಿ ಯಾವಾಗ ಬೇಕಾದರೂ ಕೇಳಿಸಿಕೊಳ್ಳಬಹುದು. ಕೆಲವೊಮ್ಮೆ ಕಥೆಯ ಮೂಲಕ ಶುರು ಮಾಡಿದರೆ, ಇನ್ನೂ ಕೆಲವೊಮ್ಮೆ ನೇರವಾಗಿ ವಿಷಯಕ್ಕೆ ಬರುತ್ತಾರೆ. 

ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು, ನಮ್ಮಜ್ಜಿ ಮನೆ ಟ್ರೇನ್ ತರ ಉದ್ದಕ್ಕೆ ಇರ್ತಾ ಇತ್ತು. ಹೊರಗಡೆ ನಮಗೆ ಯಾವ್ದೋ ಒಂದು ಒಡೆದೋಗಿರೋ ಹಲಗೆ, ಅದೇ ನಮ್ ಕ್ರಿಕೆಟ್ ಬ್ಯಾಟು! ಮನೆ ಒಳಗೆ ನಮ್ಮಜ್ಜಿ ಸಂಡಿಗೆ, ಬೊಂಡಾ, ಬಜ್ಜಿ ಏನೇನೋ ಮಾಡೋರು. ಆ ಸ್ಮೆಲ್ ನಮ್ಗೆ ಬಂದ ತಕ್ಷಣ, ಹೊರಗೆ ಬ್ಯಾಟ್ ಎಲ್ಲ ಬಿಸಾಕ್ಬಿಟ್ಟು ಒಳಗೆ ಅದನ್ನ ತಿನ್ನೋಕೆ ಓಡಿ ಹೋಗೋರು!

Tap to resize

Latest Videos

undefined

ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

ಅಜ್ಜ ತಡೆದು ಕೇಳೋರು.. ಎಲ್ಲಿಗೆ ಹೋಗ್ತಾ ಇದೀರ ಅಂತ.. ನಾವು ಅದಕ್ಕೆ ಅಜ್ಜಿ ಏನೋ ಮಾಡ್ತಾ ಇದಾರೆ, ತಿನ್ನೋಕೆ ಹೋಗ್ತಾ ಇದೀವಿ ಅನ್ನೋದು.. ನಿಮ್ಗೆ ಹೇಗೆ ಗೊತ್ತಾಯ್ತು? ಹೊರಗಡೆ ಬೋರ್ಡ್ ಹಾಕಿದಾರಾ? ಮೈಕ್‌ ತಗೊಂಡು ಅವ್ರೇನು ಹೇಳಿದ್ರಾ ಅಂತ ಕೇಳೋರು ಅಜ್ಜ. ಅದಕ್ಕೆ ನಾವು ಇಲ್ಲ, ವಾಸನೆ ಬಂತು ನಮಗೆ ಅಂತ. ಅದಕ್ಕೆ ಅಜ್ಜ ಹೇಳೋರು, ಅಡುಗೆ ಮಾತ್ರ ಅಲ್ಲ, ನೀನು ಮಾಡೋ ಪ್ರತಿಯೊಂದು ಕೆಲ್ಸದಿಂದಾನೂ ಪರಿಮಳ ಹರಡುತ್ತೆ ಜಗತ್ತಿಗೆ ಅಂತ..

ಆ ವಯಸ್ಸಲ್ಲಿ ನಂಗೆ ಅರ್ಥ ಆಗಿರ್ಲಿಲ್ಲ, ಈಗ ಅರ್ಥ ಆಗುತ್ತೆ.. ನಾವು ಮಾಡೋ ಪ್ರತಿಯೊಂದು ಕೆಲ್ಸ, ನಾವಾಡೋ ಪ್ರತಿಯೊಂದು ಮಾತು, ನಮ್ಮ ಪ್ರತಿಯೊಂದ ಹಾವ-ಭಾವ, ಸೋಷಿಯಲ್ ಮೀಡಿಯಾ, ಇನ್‌ಸ್ಟಾಗ್ರಾಂ ಪೋಸ್ಟ್ ಎಲ್ಲವೂ ನಮ್ಮ ಬಗ್ಗೆ ನಮಗೇ ಗೊತ್ತಿಲ್ದೇ ಒಂದು ಅದೃಶ್ಯವಾದ ಮೆಸೇಜನ್ನ ಪ್ರಪಂಚಕ್ಕೆ ಕಳಿಸ್ತಾ ಇರುತ್ತೆ.. ಅದೇ ನಮ್ಮ ಕ್ಯಾರೆಕ್ಟರ್ ಅಂತ ಜಗತ್ತು ಹೇಳುತ್ತೆ'' ಎಂದಿದ್ದಾರೆ ನಟ ರಮೇಶ್ ಅರವಿಂದ್. 

ನಾಗತಿಹಳ್ಳಿ 'ಅಮೆರಿಕಾ ಅಮೆರಿಕಾ' ಸಿನಿಮಾ ಸೂಪರ್ ಹಿಟ್ ಆಗಿದ್ದು ಹೇಗೆಂಬ ಗುಟ್ಟು ರಟ್ಟಾಯ್ತು..!

ಅಂದಹಾಗೆ, ನಟ ರಮೇಶ್ ಅರವಿಂದ್ ಅವರು 'ಹೆಲೋ ರಮೇಶ್ ಸ್ಪೀಕಿಂಗ್' ಎಂಬ ಪ್ರೋಗ್ರಾಂ ಒಂದನ್ನು ನಡೆಸುತ್ತಿದ್ದು, ಅದರಲ್ಲಿ ಇಂತಹ ಹಲವು ಸಂಗತಿಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾರೆ. ನಟ ರಮೇಶ್ ಅವರು ತಾವು ಆಡುವ ಪ್ರತಿಯೊಂದು ಮಾತಿನ ಬಗ್ಗೆಯೂ ಹೆಚ್ಚಿನ ಗಮನ ನೀಡುತ್ತಾರೆ ಎನ್ನಬಹುದು. ಈ ಕಾರಣಕ್ಕಾಗಿಯೇ ಅವರು 'ವೀಕೆಂಡ್ ವಿತ್ ರಮೇಶ್' ಎಂಬ ಕಾರ್ಯಕ್ರಮ ಕೂಡ ನಡೆಸಿಕೊಡಲು ಸಾಧ್ಯವಾಯಿತು ಎನ್ನಬಹುದು. 

click me!