ಅಗಸ್ತ್ಯ 'ಮಾರಿಗೆ ದಾರಿ'ಯಲ್ಲಿ ರಗಡ್‌ಎಂಟ್ರಿಗೆ ತಯಾರಾದ ಖಡಕ್ ರುದ್ರ ನಟ ಅನಂತ್‌ಕುಮಾರ್!

Published : Sep 01, 2024, 02:50 PM ISTUpdated : Sep 01, 2024, 02:51 PM IST
ಅಗಸ್ತ್ಯ 'ಮಾರಿಗೆ ದಾರಿ'ಯಲ್ಲಿ ರಗಡ್‌ಎಂಟ್ರಿಗೆ ತಯಾರಾದ ಖಡಕ್ ರುದ್ರ ನಟ ಅನಂತ್‌ಕುಮಾರ್!

ಸಾರಾಂಶ

ಸಲೀಸಾಗಿ ಅಂಥಾ ಊಹೆಗಳ ನಿಲುಕಿಗೆ ಸಿಗದ ರುದ್ರ ಎಂಬ ಪಾತ್ರದಲ್ಲಿ ಅನಂತ್ ಮಿಂಚಿದ್ದಾರಂತೆ. ಅದು ಮುಖ್ಯ ವಿಲನ್ ಅನ್ನು ಮೀರಿ, ನಾಯಕನನ್ನು ಸರಿಗಟ್ಟಿ ನಿಲ್ಲುವಂಥಾ ಪಾತ್ರ. ಹೆಚ್ಚು ಮಾತಿಲ್ಲದ ಮಾಸ್ ಸೀನುಗಳಲ್ಲಿ ಮಿಂದೆದ್ದ..

ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ `ಮಾರಿಗೆ ದಾರಿ'. ರೋಚಕ ಕಥನವೊಂದರ ಸುಳಿವಿನೊಂದಿದ್ದ ಸದ್ದು ಮಾಡಿದ್ದ ಈ ಚಿತ್ರ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಅಗಸ್ತ್ಯ ನಿರ್ದೇಶನ ಮಾಡಿ, ಅವರೇ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಹಿಂದೆ ಹೊಸಬರದ್ದೊಂದು ತಂಡವಿದೆ. ಈ ಮೂಲಕ ಒಂದಷ್ಟು ಪ್ರತಿಭಾನ್ವಿತರು ಚಿತ್ರರಂಗಕ್ಕೆ ಆಗಮಿಸಬಹುದಾದ ಲಕ್ಷಣಗಳೂ ಕಾಣಿಸುತ್ತಿವೆ. 

ನವ ಪ್ರತಿಭೆ ಅನಂತ್ ಕುಮಾರ್ ಈ ಹೀರೋಗೇ ಸರಿಸಮನಾದ ಖಡಕ್ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ. ನಿರ್ದೇಶಕರೂ ಆಗಿರುವ ಅಗಸ್ತ್ಯ ಹೀರೋಯಿಸಮ್ಮಿನ ಅಬ್ಬರಕ್ಕಷ್ಟೇ ಒತ್ತು ನೀಡದೆ, ಪಾತ್ರಗಳು ಒಂದಕ್ಕೊಂದು ಮೀರಿ ಮಿಂಚುವಂತೆ ಅವಕಾಶ ಮಾಡಿ ಕೊಟ್ಟಿದ್ದಾರಂತೆ. ಇದರಲ್ಲಿನ ಮುಖ್ಯವಾದ ವಿಲನ್ ಪಾತ್ರಕ್ಕೆ ಅನಂತ್ ಕುಮಾರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ವಿಲನ್ ಅಂದಾಕ್ಷಣವೇ ಪ್ರೇಕ್ಷಕರ ಮನಸಲ್ಲಿ ನಿಖರವಾದ ಚಿತ್ರವೊಂದು ಕದಲಿಬಿಡುತ್ತೆ. 

ನಾವು ಮಾಡೋ ಪ್ರತಿಯೊಂದು ಕೆಲ್ಸ ನಮ್ ಬಗ್ಗೆ ಪ್ರಪಂಚಕ್ಕೆ ಮೆಸೇಜ್ ಕೊಡುತ್ತೆ; ರಮೇಶ್ ಅರವಿಂದ್!

ಸಲೀಸಾಗಿ ಅಂಥಾ ಊಹೆಗಳ ನಿಲುಕಿಗೆ ಸಿಗದ ರುದ್ರ ಎಂಬ ಪಾತ್ರದಲ್ಲಿ ಅನಂತ್ ಮಿಂಚಿದ್ದಾರಂತೆ. ಅದು ಮುಖ್ಯ ವಿಲನ್ ಅನ್ನು ಮೀರಿ, ನಾಯಕನನ್ನು ಸರಿಗಟ್ಟಿ ನಿಲ್ಲುವಂಥಾ ಪಾತ್ರ. ಹೆಚ್ಚು ಮಾತಿಲ್ಲದ ಮಾಸ್ ಸೀನುಗಳಲ್ಲಿ ಮಿಂದೆದ್ದ ರುದ್ರ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ನಿರ್ದೇಶಕರ ಅಭಿಪ್ರಾಯ.

ಈ ಮೂಲಕ ಅಗಸ್ತ್ಯ ಮಾರಿಗೆ ದಾರಿ ಚಿತ್ರದ ಪ್ರಧಾನ ಪಾತ್ರವೊಂದನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಫಸ್ಟ್ ಲುಕ್ ಟೀಸರಿನಲ್ಲಿಯೇ ಇದೊಂದು ಮಾಸ್ ಸಬ್ಜೆಕ್ಟ್ ಹೊಂದಿರೋ ಸಿನಿಮಾ ಎಂಬ ವಿಚಾರ ಖಾತರಿಯಾಗಿತ್ತು. ಇದೀಗ ರುದ್ರನ ಚಹರೆಗಳ ಮೂಲಕ ಅದು ಮತ್ತೊಮ್ಮೆ ಮನದಟ್ಟಾಗಿದೆ. ವಿಶೇಷವೆಂದರೆ, ಈ ಪಾತ್ರವನ್ನು ನಿರ್ವಹಿಸಿರುವ ಅನಂತ್ ಕುಮಾರ್ ಈ ಚಿತ್ರದ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 

ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿ ನಟಿಸಿರುವ ಅನುಭವವನ್ನೂ ಹೊಂದಿದ್ದಾರೆ. ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಅನ್ನಿಸುವಂಥಾ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕುದಾದ ಒಂದಷ್ಟು ಅಂಶಗಳು ಈಗಾಗಲೇ ಪ್ರೇಕ್ಷಕರನ್ನು ತಲುಪಿವೆ. 

ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

ಇನ್ನುಳಿದಂತೆ, ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ಕಳೆಗಟ್ಟಿಕೊಂಡಿದೆ. ಜಗದೀಶ್ ಗೌಡ ಛಾಯಾಗ್ರಹಣ, ರಿಯೋ ಆಂಟನಿ ಸಂಗೀತ ನಿರ್ದೇಶನ,  ಜಗದೀಶ್ ಗೌಡ ಸಂಕಲನ ಈ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?