ಕಿಚ್ಚ ಸುದೀಪ್ ವಿಶ್ವಾದ್ಯಂತ ಅಭಿಮಾನಿಗಳು. ಆದರೆ ಅವರು ಮಾತ್ರ ಮಗಳು ಸಾನ್ವಿಯ ಅಭಿಮಾನಿ. ಸದ್ಯಕ್ಕೀಗ ಅವರಿಗೆ ಮಗಳ ಬಗ್ಗೆ ಭಯ ಶುರುವಾಗಿದೆ.
'ಅವಳು ಎಂಥಾ ಪ್ರೀತಿಯ ಮಗು ಅಂದ್ರೆ, ಅವಳಿಗೆ ನನ್ನಂಥಾ ಅಪ್ಪ ಸಿಗಬಾರದಿತ್ತು' ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಹೀಗಂದುಬಿಟ್ಟರು. ಇದು ಅವರು ಮನನೊಂದು ಹೇಳಿದ್ದಲ್ಲ, ಮನದುಂಬಿ ಹೇಳಿದ್ದು. ಕಾರಣ ಅವರು ಮಗಳನ್ನು ಆ ಮಟ್ಟಿಗೆ ಪ್ರೀತಿಸುತ್ತಾರೆ. ಪ್ರತೀ ಹೆಣ್ಣೂ ಅವಳ ಅಪ್ಪನ ಕಣ್ಣಲ್ಲಿ ರಾಜಕುಮಾರಿಯೇ ಅನ್ನೋ ಮಾತಿದೆಯಲ್ಲಾ, ಇದಕ್ಕೆ ನಮ್ಮ ಕಿಚ್ಚ ಸುದೀಪ್ ಹೊರತಾಗಿಲ್ಲ. ಅವರಿಗೆ ಮಗಳಿಗೋಸ್ಕರ ತಾವೆಷ್ಟು ಪ್ರೀತಿ ಕೊಟ್ಟರೂ, ಮಗಳು ಕೊಡುವ ಪ್ರೀತಿಯ ಮುಂದೆ ಅದೇನೂ ಅಲ್ಲ ಅಂತ ಅನಿಸಿದೆ. ಹೀಗಾಗಿ ಇಷ್ಟು ಪ್ರೀತಿಸುವ ಮಗಳಿಗೆ ತಕ್ಕ ತಂದೆ ನಾನಾಗಲಿಲ್ಲ ಅನ್ನುವ ಸಣ್ಣ ಗಿಲ್ಟ್ ಈ ಅಭಿನಯ ಚಕ್ರವರ್ತಿಯನ್ನು ಕಾಡುತ್ತಿದೆ. ಜಗತ್ತಿಗೇ ಗ್ರೇಟ್ ನಟ ಅನಿಸಿಕೊಂಡರೂ ಮಗಳ ಮುಂದೆ ಪಕ್ಕಾ ಅಪ್ಪ. ಅಪ್ಪ ಮಗಳ ಪ್ರೀತಿ ಸಂಬಂಧಕ್ಕೆ ಯಾವತ್ತೂ ಈ ಯಶಸ್ಸಿನ ಕಿರೀಟ ಅಡ್ಡಿ ಆಗಲೇ ಇಲ್ಲ.
ಇಂಥಾ ಟೈಮ್ ನಲ್ಲಿ ಕಿಚ್ಚ ಸುದೀಪ್ ಮೀಡಿಯಾ ಮುಂದೆ ಸಣ್ಣ ಅಧೈರ್ಯದಲ್ಲೇ ಒಂದು ಮಾತು ಹೇಳಿದ್ರು. ಇತ್ತೀಚೆಗೆ ಮಗಳ ಬಗ್ಗೆ ಭಯ ಶುರುವಾಗಿದೆ ಅಂತ.
ಸಿನಿಮಾದಲ್ಲಿ ಎಂತೆಂಥಾ ರೌಡಿಗಳನ್ನೂ ಮಟ್ಟ ಹಾಕುವ ಸುದೀಪ್ಗೆ ಮಗಳ ಬಗ್ಗೆ ಭಯನಾ ಅಂತ ಕೇಳಬಹುದು. ಆದರೆ ಇದಕ್ಕಿರುವ ಕಾರಣ ಅರಿತರೆ ನಿಮಗೆ ಸುದೀಪ್‌ಗೆ ಯಾಕೆ ಈ ಭಯ ಅನ್ನೋದರ ಅರಿವಾಗುತ್ತೆ.
'ಮೈ ಆಟೋಗ್ರಾಫ್ ಸೋತಿದ್ರೆ ಮನೆ ಬಿಟ್ಟು ಹೋಗಬೇಕಿತ್ತು. ಸೂಟ್‌ಕೇಸ್ ರೆಡಿ ಮಾಡಿಟ್ಟಿದ್ದೆ' ...
ಇದಕ್ಕೆ ಪೂರಕವಾಗಿ ಒಂದೆರಡು ವಿಚಾರ ನೆನಪಿಸಿಕೊಳ್ಳೋಣ. ಮೊನ್ನೆ ಮೊನ್ನೆ ವಿರುಷ್ಕಾ ದಂಪತಿಗೆ ಮಗಳು ಹುಟ್ಟಿದಳಲ್ಲಾ, ಆಗ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಮನವಿ ನಿಮಗೆ ಗೊತ್ತಿರಬಹುದು. 'ನೀವು ನಮಗೆ ನೀಡುತ್ತಿರುವ ಪ್ರೀತಿ, ವಿಶ್ವಾಸಕ್ಕೆ ನಾವಿಬ್ಬರೂ ಋಣಿಗಳು. ನಮ್ಮ ಬದುಕಿನಲ್ಲಿ ಈಗ ಮಗಳು ಬಂದಿದ್ದಾಳೆ. ಈ ಖುಷಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಸಂತೋಷವಾಗುತ್ತದೆ. ಆದರೆ ಒಂದು ಮನವಿ, ನಮ್ಮ ಮಗುವಿನ ರಕ್ಷಣೆ ಹಾಗೂ ಪ್ರೈವೆಸಿಯನ್ನು ನಾವು ಕಾಪಾಡಿಕೊಳ್ಳಬೇಕಿದೆ. ಇದಕ್ಕೆ ನಿಮ್ಮ ಸಹಾಯ ಮತ್ತು ಸಪೋರ್ಟ್ ಬೇಕು' ಅಂದಿದ್ದರು. ಇದಕ್ಕೂ ಹಿಂದೆ, ಕರೀನಾ ಸೈಫ್ ಪುತ್ರ ತೈಮೂರ್‌ನ ಸ್ಥಿತಿ ನಮ್ಮ ಮಗುವಿಗೆ ಬರಬಾರದು ಎಂದೂ ಅನುಷ್ಕಾ ಹೇಳಿದ್ರು. ಬಾಲಿವುಡ್‌ನ ಪ್ರತೀ ಸೆಲೆಬ್ರಿಟಿಗಳೂ ತಮ್ಮ ಮಕ್ಕಳನ್ನು ಪಾಪರಾಜಿಗಳ ಕ್ಯಾಮರಾ ಕಣ್ಣಿಂದ ರಕ್ಷಿಸಲು ಪಡೋ ಪಾಡು ದೇವರಿಗೇ ಪ್ರೀತಿ. ಐಶ್ವರ್ಯಾ ರೈ ಮಗಳು ಆರಾಧ್ಯಳಿಗಂತೂ ಕ್ಯಾಮರಾ ಫ್ಲಾಶ್ ಕಂಡರೆ ಭಯವಾಗುತ್ತಿತ್ತು. ಇತ್ತೀಚೆಗೆ ಕರೀನಾ ಮಗ ತೈಮೂರ್ ಸಹ ಪಾಪರಾಜಿಗಳ ಕ್ಯಾಮರಾ ಫ್ಲಾಷಿಗೆ ಸಿಡಿಮಿಡಿ, ಸಿಟ್ಟು ಪ್ರದರ್ಶಿಸಿದ್ದ.
ಸುದೀಪ್ ಮಗಳು ಸಾನ್ವಿಯ ರೈಸ್ ಅಪ್ ಹಾಡಿಗೆ ಭಾರಿ ಮೆಚ್ಚುಗೆ ...
ಇಷ್ಟೇ ಆದರೆ ಪರವಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳ ಪ್ರೈವೇಟ್ ಲೈಫು, ಅವರ ಮಕ್ಕಳ ಬಗೆಗೆಲ್ಲ ಗಾಸಿಪ್ ಮಾಡೋದು, ಚರ್ಚಿಸೋದು ತೀರಾ ಕಾಮನ್ ಆಗಿಬಿಟ್ಟಿದೆ. ಹಿಂದೆ ಧೋನಿ ತನ್ನ ಜೀವವನ್ನೇ ಇಟ್ಟುಕೊಂಡಿರುವ ಮಗಳ ಜೀವಾ ಮೇಲೆ ನೀಚನೊಬ್ಬ ತೀರ ಅವಹೇಳನಕಾರಿಯಾಗಿ ಬೆದರಿಕೆ ಹಾಕಿದ್ದ. ಇಷ್ಟೆಲ್ಲ ಆಗುತ್ತಿರುವಾಗ ಸುದೀಪ್ಗೆ ತಾನೊಬ್ಬ ಪ್ರಸಿದ್ಧ ದಕ್ಷಿಣ ಭಾರತೀಯ ನಟನಾಗಿರೋದು ತನ್ನ ಮಗಳಿಗೆ ಶಾಪ ಆಗ್ತಿದೆಯಲ್ಲಾ ಅಂತ ಅನಿಸಿರೋದ್ರಲ್ಲಿ ತಪ್ಪಿಲ್ಲ ಅಲ್ವಾ.. ಅವರು ತಮ್ಮ ಈ ಭಯವನ್ನು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಜೊತೆಗೆ ತನ್ನ ಮಗಳಾಗಿ ಹುಟ್ಟಿರೋದಕ್ಕೆ ಸಾನ್ವಿಗೆ ಉಳಿದ ಮಕ್ಕಳಿಗಿರುವಂಥಾ ಸುರಕ್ಷಿತ ಭಾವ ನೀಡೋದಕ್ಕೆ ಆಗುತ್ತಿಲ್ಲ ಎಂಬ ಕೊರಗೂ ಇದೆ.
ಆದರೂ ಮಗಳು ಸಾನ್ವಿ ಬಹಳ ಜಾಣೆ, ಸಂವೇದನಾಶೀಲ ಹೆಣ್ಣುಮಗಳು, ಈ ಎಲ್ಲ ಅಡೆತಡೆಗಳ ನಡುವೆಯೂ ತನ್ನ ಲೈಫ್ಅನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳೋದು ಅವಳಿಂದ ಸಾಧ್ಯ ಎಂದೂ ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.
ಕಿಚ್ಚ-ಅಪ್ಪು ಬಾಲ್ಯದ ಫೋಟೋ ವೈರಲ್: ಏನಿದರ ಸೀಕ್ರೆಟ್ ...