ಪತಿ ಜಗದೀಶ್‌ಗೆ ವಿಶೇಷವಾದ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಅಮೂಲ್ಯ.
ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಪತಿ ಜಗದೀಶ್‌ಗೆ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಗದೀಶ್ ಅವರ ಹಲವು ಫೋಟೋಗಳನ್ನು ಈ ವಿಡಿಯೋದಲ್ಲಿ ನೋಡಬಹುದು.
ದಿನೇ ದಿನೇ ನಟಿ ಅಮೂಲ್ಯ ಇಷ್ಟೊಂದು ಸ್ಟೈಲಿಶ್ ಆಗೋಕೆ ಕಾರಣವೇನು; ನೆಟ್ಟಿಗರಿಗೆ ಉತ್ತರ ಬೇಕೇ ಬೇಕು!
'ಹೇ ಮಿಸ್ಟರ್ Hardworker (ಶ್ರಮಜೀವಿ). ನಿಮ್ಮ ಜೊತೆಗೆ ವರ್ಷ ಕಳೆಯುತ್ತಿದ್ದಂತೆ ನಾನು ಒಂದು ವಿಚಾರ ಅರ್ಥ ಮಾಡಿಕೊಂಡಿರುವೆ. ದುಬಾರಿ ಶಾಪಿಂಗ್ ಮಾಡುತ್ತಿದ್ದ ವ್ಯಕ್ತಿ, ಈಗ ಅಗತ್ಯ ಹಾಗೂ ಅರ್ಥಪೂರ್ಣವಾದ ರೀತಿಯಲ್ಲಿ ಹಣ ಖರ್ಚು ಮಾಡುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ನೀವು ಮಾಡುವತ್ತಿರುವ ಕೆಲಸಗಳು ಒಂದು ದಿನ ನಿಮ್ಮನ್ನು ಒಂದೊಳ್ಳೆ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ನೀವು ನನಗೆಂದು ಮಾಡುವ ಪ್ರತಿಯೊಂದೂ ಕೆಲಸವನ್ನು ನಾನು ಮೆಚ್ಚಿಕೊಳ್ಳುತ್ತೀನಿ. ಮುಂಬರುವ ಎಲ್ಲಾ ದಿನಗಳನ್ನೂ ಹೀಗೆ ವಿಶೇಷವಾಗಿ ಆಚರಿಸಿಕೊಳ್ಳೋಣ. ಹ್ಯಾಪಿ ಬರ್ತಡೇ ಜೇ,' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
ಅಮೂಲ್ಯ ಬರೆದಿರುವ ಸಾಲುಗಳನ್ನು ಓಡಿ ಮೆಚ್ಚಿಕೊಂಡ ಜಗದೀಶ್ 'ನೀವು ನನ್ನ ದಿನವನ್ನು ಇನ್ನಷ್ಟು ಬೆಸ್ಟ್ ಮಾಡಿದ್ದೀರಾ. ಎಲ್ಲಾ ಕ್ಷಣದಲ್ಲೂ ನಮ್ಮ ಪರ ನಿಂತಿದ್ದೀರಿ. ಹಾಗೂ ನನಗಾಗಿ ನಿಂತಿದ್ದೀರಿ,' ಎಂದು ಬರೆದು ಲವ್ ಸಿಂಬಲ್ ಜೊತೆಗೆ ಬರೆದುಕೊಂಡಿದ್ದಾರೆ.
ರಾಮಂದಿರಕ್ಕೆ ಭಾರೀ ಮೊತ್ತದ ದೇಣಿಗೆ ಕೊಟ್ಟ ಅಮೂಲ್ಯ -ಜಗದೀಶ್; ರಶೀದಿ ಪೋಟೋ ಇಲ್ಲಿದೆ!
ಹುಟ್ಟುಹಬ್ಬದ ದಿನವೂ ಜಗದೀಶ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಕುಟುಂಬದ ವತಿಯಿಂದ 2 ಲಕ್ಷ 50 ಸಾವಿರ ದೇಣಿಗೆ ನೀಡಿದ್ದರು ಜಗದೀಶ್.