
ಜನವರಿ 29ರಂದು ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಂಡ ರಾಮಾರ್ಜುನ ಚಿತ್ರದ ಬಗ್ಗೆ ನಟ ಕಮ್ ನಿರ್ದೇಶಕ ಅನೀಶ್ ಮಾತನಾಡಿದ್ದಾರೆ. ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿ ತಾವೊಬ್ಬ ಬೆಸ್ಟ್ ಡೈರೆಕ್ಟರ್ ಎಂದು ಸಾಬೀತು ಮಾಡಿರುವ ಅನೀಶ್ ಮನನೊಂದು ತಮ್ಮ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಅನೀಶ್ ಮಾತುಗಳು:
'ಎಲ್ಲರಿಗೂ ನಮಸ್ಕಾರ. ಅಣ್ಣ ಸಿನಿಮಾ ಸೂಪರ್, ಕಾಮಿಡಿ ನೆಕ್ಸ್ಟ್ ಲೆವೆಲ್‌ಗೆ ವರ್ಕೌಟ್ ಆಗಿದೆ ಗುರು, ಗಿರಿ ಅವರ ಕಾಂಬಿನೇಷನ್ ಸೂಪರ್ ಆಗಿದೆ. ರಂಗಾಯಣ ರಘು ಸೀನ್ ನೋಡಿದಾಗ ಅಳು ಬಂತು ನಮಗೆ, ಇಂಟರ್ವಲ್ ಬ್ಲಾಕ್ ತುಂಬಾ ಬೇಜಾರ್ ಆಯ್ತು ಸರ್, ಮೈ ಜುಂ ಅಂತು, ಅಣ್ಣ ಸೆಕೆಂಡ್ ಹಾಫ್ ಹೋಗಿದ್ದೇ ಗೊತ್ತಾಗಲಿಲ್ಲ. ಕ್ಲೈ ಮ್ಯಾಕ್ಸ್ ಟ್ವಿಸ್ಟ್ ಬೆಂಕಿ ಗುರು, ಚಿಂದಿ ಫೈಟ್ ಅಲ್ಟಿಮೇಟ್. ಫಸ್ಟ್ ಟೈಮ್ ಸರ್ ಲೈಫಲ್ಲಿ ಇವೆಲ್ಲಾ ಕೇಳಿದ್ದು. ನನ್ನ ಸಿನಿಮಾ ಬಗ್ಗೆ ಇಷ್ಟೊಂದು ಪಾಸಿಟಿವ್ ಮಾತುಗಳು ಕೇಳಿದ್ದು. ಆದರೆ ಸೆಕೆಂಡ್ ವೀಕ್ ಥಿಯೇಟರ್ ರನ್ ಲಿಸ್ಟ್ ನೋಡಿದಾಗ ತುಂಬಾ ಬೇಜಾರು ಆಯ್ತು,' ಎಂದು ನಟ ಅನೀಶ್ ಮಾತನಾಡಿದ್ದಾರೆ.
'ನಾವು ಒಂದೊಳ್ಳೆ ಸಿನಿಮಾ ಕೊಟ್ಟರೂ ಸೋಲು ನೋಡ್ತಿದ್ದೀವಾ? ಮತ್ತೆ ಮಿಸ್ ಆಯ್ತಾ? ತುಂಬಾ ಬೇಜಾರ್ ಆಯ್ತು. ದಯಮಾಡಿ ಹೋಗಿ ಸಿನಿಮಾ ನೋಡಿ ಸರ್, ನಾನು ಹೇಳ್ತಿದ್ದೀನಿ ಅಂತ ಹೋಗಿ ನೋಡಬೇಡಿ. ಈ ಫಸ್ಟ್ ವೀಕ್‌ನಲ್ಲಿ ಯಾರೆಲ್ಲಾ, ಸಿನಿಮಾ ನೋಡಿದವರ ಅವ್ರ ಮಾತು ಕೇಳಿ, ಅವರಿಂದ ವಿಮರ್ಶೆ ತೆಗೆದುಕೊಳ್ಳಿ, ಅವರು ಏನು ಹೇಳುತ್ತಾರೆ ಸಿನಿಮಾ ಬಗ್ಗೆ ಅಂತ ಕೇಳ್ಕೊಂಡು ಆಮೇಲೆ ಹೋಗಿ ಸಿನಿಮಾ ನೋಡಿ. ಕಾಡಿ ಬೇಡಿ ಎರಡನೇ ವಾರಕ್ಕೂ ಒಂದಷ್ಟು ಥಿಯೇಟರ್‌ಗಳನ್ನು ಉಳಿಸಿಕೊಂಡಿದ್ದೀನಿ. ನೀವೆಲ್ಲಾ ನೋಡುತ್ತೀರಾ, ಬರ್ತೀರಾ ಅನ್ನೋ ವಿಶ್ವಾಸ ನಮಗೆ. ಇದು ನಮ್ಮ ಕೊನೆ ಪ್ರಯತ್ನ, ನಮ್ಮ ಕೈಯಿಂದ ಆಗುವಷ್ಟು ಪ್ರಯತ್ನ ಮಾಡಿದ್ದೀವಿ. ಈ ವಾರ ಬೇಡ ನೆಕ್ಸ್ಟ್ ವೀಕ್ ನೋಡೋಣ ಅನ್ನೋಷ್ಟರಲ್ಲಿ ನಮ್ಮನ್ನ ಕಿತ್ತು ಬಿಸಾಕಿರುತ್ತಾರೆ. ನಮ್ಮ ಕನ್ನಡ ಸಿನಿಮಾನ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ,' ಎಂದು ಮನನೊಂದು ಮಾತನಾಡಿದ್ದಾರೆ.
ಪ್ರೇಕ್ಷಕರು ಮೆಚ್ಚಿದ ರಾಮಾರ್ಜುನ: ಅನೀಶ್ ತೇಜೇಶ್ವರ್ ಹೇಳಿದ್ದಿಷ್ಟು
'ಅಣ್ಣಯ್ಯ ನೀವು ಮಾತಾಡೋದು ಕೇಳಿದ್ರೆ ನೋವಾಗುತ್ತೆ, ದಯಮಾಡಿ ಬೇಜಾರು ಮಾಡ್ಕೋಬೇಡಿ, ನಿಮ್ಮ ಸಿನಿಮಾ ನಿಜವಾಗ್ಲೂ ಹಿಟ್ ಆಗಿದೆ. ಕಲೆಕ್ಷನ್ ಕೂಡ ಆಗುತ್ತೆ, ಸ್ವಲ್ಪ ಧೈರ್ಯದಿಂದ ಇರಿ, ಇನ್ಮುಂದೆ ನಿಮ್ಮ ಎಲ್ಲ ಪ್ರಯತ್ನಕ್ಕೂ ಫಲ ಸಿಗಲಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿ ವೀಕ್ಷಕರು ಈ ಪ್ರತಿಭಾನ್ವಿತ ನಿರ್ದೇಶಕ ಮಾತಿಗೆ ಬೆಲೆ ಕೊಡಬೇಕಲ್ಲವೇ? ಚಿತ್ರಮಂದಿರಕ್ಕೆ ಹೋಗಿ ಸನಿಮಾ ನೋಡುವುದ ಮರೀಬೇಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.