ಅಪ್ಪು ಅಭಿಮಾನಿಗಳ ಜೊತೆ ಕುಳಿತು ನಟಿ ರಮ್ಯಾ, ಯುವ ಹಾಗೂ ವಿನಯ್ ರಾಜ್‌ಕುಮಾರ್ ಅವರು ಅಪ್ಪು ಚಿತ್ರವನ್ನು ಇಂದು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಎಮೋಶನಲ್ ಆಗುತ್ತಿದ್ದಾರೆ..
ಕನ್ನಟಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಅಪ್ಪು (Appu) ಚಿತ್ರವು ಮರುಬಿಡುಗಡೆ ಆಗಿದ್ದು ಗೊತ್ತೇ ಇದೆ. ಮೊನ್ನೆ 14 ಮಾರ್ಚ್ 2025ರಂದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಅಪ್ಪು ಚಿತ್ರವು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ನಟಿ ರಕ್ಷಿತಾ ಪ್ರೇಮ್ (ಅಪ್ಪು ಚಿತ್ರದ ನಾಯಕಿ) ಆಗಮಿಸಿದ್ದರು. ಇಂದು ಪುನೀತ್ ರಾಜ್‌ಕುಮಾr̥f ನಟನೆಯ 'ಆಕಾಶ್' ಚಿತ್ರದ ನಟಿ ರಮ್ಯಾ ಅವರು ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.
ಅದಾಗಲೇ ವೀರೇಶ್ ಚಿತ್ರಮಂದಿರದ ಎದುರು ನೂರಾರು ಅಪ್ಪು ಅಭಿಮಾನಿಗಳು ಜಮಾಯಿಸಿ ಹಾಡು-ನೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯವಾಗಿ, ಪುನೀತ್ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ನೃತ್ಯ ಮಾಡುತ್ತಿದ್ದಾರೆ. ನಾಳೆ ಪುನೀತ್ 50ನೇ ವರ್ಷದ ಹುಟ್ಟು ಹಬ್ಬ ಹಿನ್ನೆಲೆಯಯಲ್ಲಿ ಇಂದು ಅಪ್ಪು ಅಭಿಮಾನಿಗಳ ಖುಷಿ ಆಕಾಶಕ್ಕೇರಿದೆ. ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಗಳನ್ನು ಪ್ರದರ್ಶಿಸುತ್ತಿರುವ ಅಭಿಮಾನಿಗಳು, ಅಪ್ಪು ನೆನಪಲ್ಲಿ ಮಿಂದೇಳುತ್ತಿದ್ದಾರೆ.
Appu: ವೀರೇಶ್ ಥಿಯೇಟರ್‌ಗೆ ಬಂದ ರಕ್ಷಿತಾ ಪ್ರೇಮ್, ಬಂದ ದಾರಿ ಮರೆಯದೇ 'ಅಪ್ಪು' ಮರುಬಿಡುಗಡೆಗೆ ಹಾಜರಿ!
ಇಂದು ವೀರೇಶ್ ಚಿತ್ರಮಂದಿರಕ್ಕೆ ಪುನೀತ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಆಗಮಿಸಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಪುನೀತ್ ಅಭಿಮಾನಿಗಳ ಖುಷಿ ಹೆಚ್ಚಾಗಿದೆ. ಅಪ್ಪು ಅಭಿಮಾನಿಗಳ ಜೊತೆ ಕುಳಿತು ನಟಿ ರಮ್ಯಾ, ಯುವ ಹಾಗೂ ವಿನಯ್ ರಾಜ್‌ಕುಮಾರ್ ಅವರು ಅಪ್ಪು ಚಿತ್ರವನ್ನು ಇಂದು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಎಮೋಶನಲ್ ಆಗುತ್ತಿದ್ದಾರೆ, ಇದು ಸಹಜ ಕೂಡ.
ಹೌದು, ನಾಳೆ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಬದುಕಿದ್ದರೆ ಅವರೇ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರೇನೋ! ಆದರೆ, ಅವರಿಲ್ಲದೇ ಅವರ ಹುಟ್ಟುಹಬ್ಬವನ್ನು ಅವರ ಪತ್ನಿ ಅಶ್ವಿನಿ (Ashwini Puneeth Rajkumar) ಹಾಗೂ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಪ್ಪು ದಿವಂಗತರಾಗಿ 3 ವರ್ಷಗಳೇ ಕಳೆದುಹೋಗಿವೆ. ಆದರೂ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟುಹಬ್ಬ ಎಂಬಂತೆ ಆಚರಿಸುತ್ತ ಅದನ್ನು ಕರ್ನಾಕದ ಹಬ್ಬ ಎನ್ನವಂತೆ ಮಾಡಿದ್ದಾರೆ.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್‌ನಲ್ಲಿ ಜೋಡೆತ್ತು ನಾಪತ್ತೆ!
ಒಟ್ಟಿನಲ್ಲಿ, ನಾಳೆ (17 March) ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಆಚರಣೆ. ಬೆಂಗಳೂರು, ಹೊಸಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ 'ಕರ್ನಾಟಕ ರತ್ನ' ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಪುನೀತ್ ನಮ್ಮ ಜೊತೆಗಿಲ್ಲ ಎಂಬ ಕೊರಗು, ನೋವಿನ ಜೊತೆಜೊತೆಗೇ ಅವರ ಹುಟ್ಟುಹಬ್ಬದ ಆಚರಣೆ ನಡೆಯಲಿದೆ.