ಅಂಬರೀಶ್‌ ನೆನಪಲ್ಲೇ ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ; ಅಭಿಷೇಕ್, ಅವಿವಾ ಬಿದ್ದಪ್ಪ ಮಗನ ಹೆಸರಿನ ಅರ್ಥ ಏನು?

ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ಮಗನ ನಾಮಕರಣ ಶಾಸ್ತ್ರ ನಡೆದಿದೆ. 


‘ರೆಬೆಲ್ ಸ್ಟಾರ್’ ಅಂಬರೀಷ್ ಮೊಮ್ಮಗನ ನಾಮಕರಣ  ಶಾಸ್ತ್ರ ನಡೆದಿದೆ. ಬೆಂಗಳೂರಿನ ಜೆಡಬ್ಲ್ಯೂ  ಮ್ಯಾರಿಯೆಟ್ ಹೋಟೆಲ್‌ನಲ್ಲಿ ಈ ಶುಭ ಸಮಾರಂಭ ನಡೆದಿದೆ. ಈ ಶಾಸ್ತ್ರದಲ್ಲಿ ಅನೇಕ ತಾರೆಯರು ಭಾಗಿಯಾಗಿದ್ದಾರೆ. ಅಂದಹಾಗೆ ಅಂಬಿ ಮೊಮ್ಮಗನಿಗೆ ಏನು ಹೆಸರು ಇಟ್ಟಿರಬಹುದು ಎಂದು ಕೆಲವರಿಗೆ ಸಂದೇಹ ಇರಬಹುದು. 

ಅಂಬಿ ಮೊಮ್ಮಗನ ಹೆಸರು ಏನು?
ರಾಣಾ ಅಮರ್‌ ಅಂಬರೀಶ್‌ ಎಂದು ನಾಮಕರಣ ಮಾಡಲಾಗಿದೆಯಂತೆ. ಈ ಮೂಲಕ ಮೊಮ್ಮಗನಿಗೂ ಅಂಬರೀಶ್‌ ಜೊತೆಯಲ್ಲಿ ಅಮರ್‌ ಹೆಸರನ್ನು ಕೂಡ ಸೇರಿಸಲಾಗಿದೆ. ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್‌ ಎಂಬ ವ್ಯಕ್ತಿಯೇ ಇಂದು ಅಂಬರೀಶ್‌ ಆಗಿ ಕನ್ನಡ ನಾಡಿಗೆ ಪರಿಚಿತರಾಗಿದ್ದಾರೆ. ಅಂದಹಾಗೆ ರಾಣಾ ಎಂದರೆ ಪರ್ಷಿಯನ್‌ ಶಬ್ದದಲ್ಲಿ ಕಾಂತಿಯುತವಾದ, ಹೊಳೆಯುವ ಎಂದರ್ಥ. 

Latest Videos

ವಿಶೇಷ ದಿನದಂದು ಮಗುವಿನ ಫೋಟೋ ಶೇರ್‌ ಮಾಡಿದ ಅವಿವಾ ಬಿದ್ದಪ್ಪ, ಅಭಿಷೇಕ್‌ ಅಂಬರೀಶ್!

ಕಿಚ್ಚ ಸುದೀಪ್‌ರ ವಿಶೇಷ ಗಿಫ್ಟ್!‌ 
ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ನಟ ಕಿಚ್ಚ ಸುದೀಪ್‌ ಅವರು ಆಗಮಿಸಿದ್ದಾರೆ. ಕಿಚ್ಚ ಸುದೀಪ್‌ ಅವರು ಪತ್ನಿ ಪ್ರಿಯಾ ಜೊತೆಗೆ ಬಂದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಂದಹಾಗೆ ಕಂದನಿಗೋಸ್ಕರ ಕಿಚ್ಚ ಸುದೀಪ್‌ ಅವರು ವಿಶೇಷ ಗಿಫ್ಟ್‌ ಕೂಡ ತಂದಿದ್ದಾರಂತೆ. ಒಂದಷ್ಟು ಗೊಂಬೆಗಳನ್ನು ಕೂಡ ನೀಡಿದ್ದಾರೆ. 

ಅಂಬಿ ಮನೆಗೆ ಹೊಸ ಅತಿಥಿ ಆಗಮನ ಕನ್ಫರ್ಮ್, ಲೀಕ್ ಆಯ್ತು ಅವಿವಾ ಬಿದ್ದಪ್ಪ ಸೀಮಂತದ ಒಂದು ಫೋಟೋ!

ನಟ ದರ್ಶನ್‌, ಯಶ್‌ ಗೈರು!
ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಬರಬಹುದು, ರಾಕಿಂಗ್‌ ಸ್ಟಾರ್ ಯಶ್ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇವರಿಬ್ಬರು ಗೈರು ಹಾಕಿದ್ದಾರೆ ಎನ್ನಲಾಗಿದೆ. ನಟ ಯಶ್‌ ಅವರು ʼಟಾಕ್ಸಿಕ್‌ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದಾರೆ. ಯಶ್‌ ಮಗಳಿಗೆ ಅಂಬರೀಶ್‌ ಅವರು ಕಲಘಟಗಿಯಿಂದ ತೊಟ್ಟಿಲು ತರಿಸಿಕೊಟ್ಟಿದ್ದರು. ಈಗ ಅದೇ ತೊಟ್ಟಿಲನ್ನು ಅಭಿ ಮಗನಿಗೆ ಯಶ್‌ ಅವರು ಮರಳಿ ನೀಡಿದ್ದಾರೆ. ಅಂದಹಾಗೆ ನಟ ದರ್ಶನ್ ಅವರು ಅನೇಕ ತಿಂಗಳುಗಳ ಬಳಿಕ ʼದಿ ಡೆವಿಲ್ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದಾರೆ. ಮೈಸೂರಿನ ಲಲಿತ್‌ ಮಹಲ್‌ನಲ್ಲಿ ಈ ಶೂಟಿಂಗ್‌ ನಡೆಯುತ್ತಿದೆ ಎನ್ನಲಾಗಿದೆ. 

ಸುಮಲತಾ ಕುಟುಂಬದ ಸದಸ್ಯರನ್ನು ಅನ್‌ಫಾಲೋ ಮಾಡಿದ್ರು! 
ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್‌ನಲ್ಲಿ ನಟ ದರ್ಶನ್‌ ಅವರು ಸುಮಲತಾ ಅಂಬರೀಷ್, ಅಭಿಷೇಕ್, ಅವಿವಾ ಬಿದ್ದಪ್ಪ, ಮಗ ನಿವೀಶ್ ಅವರನ್ನೂ ಅನ್‌ಫಾಲೋ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ ಅವರು, “ನನ್ನನ್ನು ಸೇರಿ ವಿನೀಶ್‌ ಅವರನ್ನು ಕೂಡ ದರ್ಶನ್‌ ಅನ್‌ಫಾಲೋ ಮಾಡಿದ್ದಾರೆ. ಇದು ದರ್ಶನ್‌ ಅವರ ವೈಯಕ್ತಿಕ ವಿಷಯ. ಬೇರೆ ಏನೂ ಗಾಸಿಪ್‌ ಹಬ್ಬಿಸಬೇಡಿ” ಎಂದು ಹೇಳಿಕೆ ಕೊಟ್ಟಿದ್ದರು.

ಪುಟ್ಟಕಂದನಿಂದ ಖುಷಿ 

ಸುಮಲತಾ ಅವರೀಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಅತ್ತ ಅಭಿಷೇಕ್‌ ಅವರು ಸಿನಿಮಾಗಳತ್ತ ಗಮನ ಕೊಡುತ್ತಿದ್ದಾರೆ. ಇನ್ನು ಅವಿವಾ ಬಿದ್ದಪ್ಪ ಅವರು ಫ್ಯಾಷನ್‌ ಲೋಕದಲ್ಲಿ ಬ್ಯುಸಿಯಿದ್ದಾರೆ. ಒಟ್ಟಿನಲ್ಲಿ ಈ ಮೂವರ ಪ್ರಪಂಚಕ್ಕೆ ಪುಟ್ಟ ಕಂದನ ಆಗಮನ ಆಗಿದೆ. ಕಳೆದ ನವೆಂಬರ್‌ನಲ್ಲಿ ಅವಿವಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. 

click me!