ಫುಡ್ ಪಾಯಿಸನ್‌ ಆಗಿ ತಡೆಯಲಾಗದಷ್ಟು ಕಷ್ಟಗಳು, ದೇವರು ನನ್ನ ಕೈ ಬಿಟ್ಟಿಲ್ಲ; ನಟಿ ಆಶಿತಾ ಕಣ್ಣೀರು

Published : Apr 08, 2025, 03:42 PM ISTUpdated : Apr 08, 2025, 03:58 PM IST
ಫುಡ್ ಪಾಯಿಸನ್‌ ಆಗಿ ತಡೆಯಲಾಗದಷ್ಟು ಕಷ್ಟಗಳು, ದೇವರು ನನ್ನ ಕೈ ಬಿಟ್ಟಿಲ್ಲ; ನಟಿ ಆಶಿತಾ ಕಣ್ಣೀರು

ಸಾರಾಂಶ

ನಟಿ ಮಾರಿಯಾ ಆಶಿತಾ ಕ್ರಾಸ್ತಾ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಿದ್ದಾರೆ. ವಿಪರೀತ ನೋವಿನಿಂದ ಬಳಲುತ್ತಿದ್ದಾಗ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಕಷ್ಟದಲ್ಲಿ ದೇವರು ಸಹಾಯ ಮಾಡುವ ವ್ಯಕ್ತಿಯನ್ನು ಕಳುಹಿಸುತ್ತಾನೆ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳೊಂದಿಗೆ ತಮ್ಮ ದುಃಖ ಹಂಚಿಕೊಂಡಿದ್ದಾರೆ.

ಬಾ ಬಾರೋ ರಸಿಕ,  ಗ್ರೀನ್‌ ಸಿಗ್ನಲ್‌,  ಮೈ ಗ್ರೀಟಿಂಗ್ಸ್‌, ತವರಿನ ಸಿರಿ, ಆಕಾಶ್‌ ಸೇರಿದಂತೆ ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ ನಟಿ ಮಾರಿಯಾ ಆಶಿತಾ ಕ್ರಾಸ್ತಾ ಸದ್ಯ ತಮ್ಮ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್ ತೆರೆದ ನಟಿ ತಮ್ಮ ಲೈಫ್‌ನ ಪ್ರತಿಯೊಂದು ಅಪ್ಡೇಟ್‌ಗಳನ್ನು ನೀಡುತ್ತಾರೆ ಆದರೆ ಅವರ ಆರೋಗ್ಯದಲ್ಲಿ ಆದ ಸಮಸ್ಯೆಯನ್ನು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. 

ಹೌದು! ಈ ಹಿಂದೆ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ನಟಿ ಆಶಿತಾ ವೈದ್ಯರನ್ನು ಸಂಪರ್ಕಿಸುತ್ತಿರುವುದಾಗಿ ಹೇಳಿದರು ಆದರೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಹಲವು ದಿನಗಳ ನಂತರ ವಿಡಿಯೋ ಅಪ್ಲೋಡ್ ಮಾಡಿ ನಿಜಕ್ಕೂ ಏನ್ ಆಯ್ತು ಎಂದು ರಿವೀಲ್ ಮಾಡಿದ್ದಾರೆ. ಆಶಿತಾಗೆ ಇದ್ದಕ್ಕಿದ್ಧಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಔಷಧಿಗಳನ್ನು ತೆಗೆದುಕೊಂಡಿದ್ದಾರೆ. ಮನೆಗೆ ಬಂದ ಮೇಲೆ ಹೊಟ್ಟೆ ನೋವು ಹಾಗೂ ಪೀರಿಯಡ್ಸ್ ಆಗುತ್ತಿದ್ದ ಕಾರಣ ಆ ನೋವು ಕೂಡ ಸೇರಿಕೊಂಡು ಡಬಲ್ ನೋವಾಗಿದೆ. ವಿಪರೀತ ನೋವು ತಡೆಯಲಾಗದೆ ಸ್ನೇಹಿತರೊಬ್ಬರಿಗೆ ಕರೆ ಮಾಡಿದಾರೆ. ತಕ್ಷಣವೇ ಸ್ನೇಹಿತರು ಸಹಾಯಕ್ಕೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಮೇಲೆ ಆಶಿತಾರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ನೆನೆದು ಆಶಿತಾ ಕಣ್ಣೀರಿಟ್ಟಿದ್ದಾರೆ.

ದರ್ಶನ್‌ ಅಣ್ಣ ಮನೆಯಲ್ಲಿ ಮುದ್ದು ರಾಕ್ಷಸಿ ಅಂತ ಕರೆದಿರುವುದು ನಾನೇ ನೋಡಿದ್ದೀನಿ: ಧನ್ವೀರ್

'ನಾನು ನಂಬಿರುವುದು ಏನೆಂದರೆ ನಾವು ಕಷ್ಟದಲ್ಲಿ ಇದ್ದಾಗ ದೇವರು ಒಬ್ಬರನ್ನು ಕಳುಹಿಸುತ್ತಾನೆ ಎಂದು. ಯಾವುದೇ ದುಖಃ ಆಗಿರಬಹುದು ಯಾವುದೇ ಪರಿಸ್ಥಿತಿ ಇರಬಹುದು ನನ್ನನ್ನು ಒಬ್ಬಳೇ ಬಿಡುವುದಿಲ್ಲ. ದೇವರು ನನ್ನ ಕೈ ಬಿಡುವುದಿಲ್ಲ ಅಂತ ಗೊತ್ತಿತ್ತು. ಕಣ್ಣು ಮುಚ್ಚಿಕೊಂಡು ದೇವರಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಯಾಕೆ ನಾನು ವಿಡಿಯೋ ಮೂಲಕ ಹೇಳುತ್ತಿದ್ದೀನಿ ಅಂದ್ರೆ ನನ್ನ ಮನಸ್ಸಿನಲ್ಲಿ ಇದ್ದ ದುಖಃವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೀನಿ ಏಕೆಂದರೆ ನೀವು ನನಗೆ ಫ್ಯಾಮಿಲಿ ಆಗಿಬಿಟ್ಟಿದ್ದೀರಿ. ನನಗೆ ಒಬ್ಬಳೆ ಅನಿಸುವುದಿಲ್ಲ. ನಾನು ಒಬ್ಬಳ ಇರುವುದು ಸಂಕಷ್ಟ ಅನಿಸುವುದಿಲ್ಲ. ನಾನು ಒಬ್ಬಳೆ ಜೀವನ ನಡೆಸುತ್ತಿದ್ದೀನಿ ಹಾಗಂತ ನಾನು ಒಬ್ಬಂಟಿ ಅಲ್ಲ. ಈಗ 40 ವರ್ಷ ಮುಟ್ಟಿರುವುದರಿಂದ ವಯಸ್ಸಿನ ಪ್ರಕಾರ ಸ್ವಲ್ಪ ಎನರ್ಜಿ ಕಡಿಮೆ ಆಗುತ್ತದೆ ಅಷ್ಟೇ' ಎಂದು ಆಶಿತಾ ಕಣ್ಣೀರಿಟ್ಟಿದ್ದಾರೆ. 

ಅಪ್ಪ ಫ್ಯಾಮಿಲಿಗೆ ಟೈಮ್ ಕೊಡಲ್ಲ ಫುಲ್ ಬ್ಯುಸಿ ಅಂದ್ಕೊಳ್ಳುತ್ತಾರೆ ಆದರೆ ಅದು ನಿಜ ಅಲ್ಲ: ನಿವೇದಿತಾ ಶಿವರಾಜ್‌ಕುಮಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!