ದರ್ಶನ್‌ ಅಣ್ಣ ಮನೆಯಲ್ಲಿ ಮುದ್ದು ರಾಕ್ಷಸಿ ಅಂತ ಕರೆದಿರುವುದು ನಾನೇ ನೋಡಿದ್ದೀನಿ: ಧನ್ವೀರ್

Published : Apr 08, 2025, 02:14 PM IST
ದರ್ಶನ್‌ ಅಣ್ಣ ಮನೆಯಲ್ಲಿ ಮುದ್ದು ರಾಕ್ಷಸಿ ಅಂತ ಕರೆದಿರುವುದು ನಾನೇ ನೋಡಿದ್ದೀನಿ: ಧನ್ವೀರ್

ಸಾರಾಂಶ

ನಟ ಧನ್ವೀರ್ ಅಭಿನಯದ 'ವಾಮನ' ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ. ನಟ ದರ್ಶನ್ ಈ ಚಿತ್ರದ 'ಮುದ್ದು ರಾಕ್ಷಸಿ' ಹಾಡನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದ್ದು, ಚಿತ್ರಮಂದಿರಗಳ ಕುರಿತು ವಿತರಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 'ವಾಮನ' ನಂತರ 'ಹಾಯಗ್ರೀವ' ಸಿನಿಮಾ ಬರಲಿದ್ದು, ದರ್ಶನ್ ಜೊತೆಗಿನ ಒಡನಾಟದ ಬಗ್ಗೆಯೂ ಧನ್ವೀರ್ ಮಾತನಾಡಿದ್ದಾರೆ.

ನಟ ಧನ್ವೀರ್ ನಟನೆಯ ವಾಮನ ಸಿನಿಮಾ ಏಪ್ರಿಲ್ 10ರಂದು ರಿಲೀಸ್‌ಗೆ ಸಜ್ಜಾಗಿದೆ. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸಿನಿಮಾ ಸುದ್ದಿಯಲ್ಲಿದೆ ಅದರಲ್ಲೂ ನಟ ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಚಿತ್ರದ ಒಂದು ಹಾಡನ್ನು ಸಖತ್ ಇಷ್ಟ ಪಟ್ಟಿದ್ದಾರೆ. ಅದುವೇ ಮುದ್ದು ರಾಕ್ಷಸಿ. ಈ ಹಾಡು ನನಗೆ ಇಷ್ಟ ನನ್ನ ಹೆಂಡತಿಗೂ ಮನೆಯಲ್ಲಿ ಕೆಲವೊಮ್ಮೆ ಮುದ್ದು ರಾಕ್ಷಸಿ ಎಂದು ಕರೆದಿದ್ದೀನಿ ಎಂದು ದರ್ಶನ್ ಹೇಳಿದ್ದರು. ಈ ವಿಚಾರವನ್ನು ನಟ ಧನ್ವೀರ್ ಕೂಡ ಹಂಚಿಕೊಂಡಿದ್ದಾರೆ.

'ಮದ್ದು ರಾಕ್ಷಸಿ ಹಾಡು ದರ್ಶನ್‌ಗೆ ತುಂಬಾ ಇಷ್ಟ ಆಗಿದೆ. ಟ್ರಾವಲ್ ಮಾಡುವ ಸಮಯದಲ್ಲಿ ಎರಡು ಮೂರು ಸಲ ಹಾಡು ಕೇಳಿರುವುದು ನಾನು ಕೇಳಿಸಿಕೊಂಡಿದ್ದೀನಿ. ಇನ್ನು ಅಣ್ಣ ಮನೆಯಲ್ಲಿ ಅಕ್ಕಂತೆ ಮುದ್ದು ರಾಕ್ಷಸಿ ಎಂದು ಕರೆದಿರುವುದನ್ನು ನಾನು ಕೇಳಿಸಿಕೊಂಡಿದ್ದೀನಿ. ಇಷ್ಟ ಆಗಿದೆ ಅನ್ನೋದು ಕೇಳಿ ಖುಷಿ ಆಯ್ತು. ಯಾವತ್ತು ನಾನು ದರ್ಶನ್‌ ಸರ್‌ನ ಬಳ್ಳಾರಿಯಿಂದ ಕರೆದುಕೊಂಡು ಬಂದ್ವಿ ಆ ದಿನ ಯಾವತ್ತೂ ಮರೆಯಲು ಆಗುವುದಿಲ್ಲ ಏಕೆಂದರೆ ಆ ಕಷ್ಟದ ದಿನಗಳನ್ನು ಹತ್ತಿರದಿಂದ ನೋಡಿದ್ದೀವಿ' ಎಂದು ಧನ್ವೀರ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಅಪ್ಪ ಫ್ಯಾಮಿಲಿಗೆ ಟೈಮ್ ಕೊಡಲ್ಲ ಫುಲ್ ಬ್ಯುಸಿ ಅಂದ್ಕೊಳ್ಳುತ್ತಾರೆ ಆದರೆ ಅದು ನಿಜ ಅಲ್ಲ: ನಿವೇದಿತಾ ಶಿವರಾಜ್‌ಕುಮಾರ್

ಸಿನಿಮಾ ರಿಲೀಸ್‌ಗೆ ಯಾವೆಲ್ಲಾ ಥಿಯೇಟರ್‌ಗಳು ಬೇಕು ಹಾಗೂ ಎಷ್ಟು ಬೇಕು ಎಂದು ವಿತರಕರ ಜೊತೆ ಮಾತುಕತೆ ನಡೆಯುತ್ತಿದೆ. ನಾನು ಖಂಡಿತ ಸಿನಿಮಾವನ್ನು ಜನರೊಟ್ಟಿಗೆ ಥಿಯೇಟರ್‌ನಲ್ಲಿ ನೋಡುತ್ತೀನಿ. ಮುಂದಕ್ಕೆ ನಾವು ಕೆಲಸ ಮಾಡಬೇಕು ಅಂದ್ರೆ ಜನರೊಟ್ಟಿಗೆ ಕುಳಿತಾಗ ಕೇಳಿ ಬರುವ ಶಿಳೆ ಮತ್ತು ಚಪ್ಪಾಳೆನೇ ಹುಮ್ಮಸು. ಅಣ್ಣ ಶೂಟಿಂಗ್‌ನಲ್ಲಿ ಇರುತ್ತಾರೆ ಫ್ರೀ ಆದ್ಮೇಲೆ ಸಿನಿಮಾ ತೋರಿಸುತ್ತೀನಿ. ಸಿನಿಮಾ ನೋಡುತ್ತೀನಿ ಎಂದು ಅಣ್ಣ ಹೇಳಿದ್ದಾರೆ ಅವರ ಡೇಟ್‌ಗಳನ್ನು ನೋಡಿಕೊಂಡು ದಿನ ಫಿಕ್ಸ್ ಮಾಡಬೇಕು ಎಂದು ಧನ್ವೀರ್ ಹೇಳಿದ್ದಾರೆ. 

ಸುಣ್ಣಬಣ್ಣ ಕಮ್ಮಿ ಮಾಡಿ ಮೇಡಂ..; 'ಲಕ್ಷಣ' ನಟಿ ಮೇಕಪ್‌ ಫೋಟೋಗಳು ವೈರಲ್

ವಾಮನ ಸಿನಿಮಾ ಆದ್ಮೇಲೆ ಬರುವುದು ಹಾಯಗ್ರೀವ ಸಿನಿಮಾ. ಶೂಟಿಂಗ್ ಮುಗಿಸಿದ್ದೀನಿ ಆ ಸಿನಿಮಾಗಳ ಕೆಲಸಗಳನ್ನು ಮುಗಿಸಬೇಕು ಆಂತರ ಪ್ರಮೋಷನ್ ಮತ್ತೆ ಶುರು ಮಾಡಬೇಕು. ದರ್ಶನ್ ಜೊತೆ ಇರುವುದಕ್ಕೆ ಹಲವರು ಮಾತನಾಡಿಕೊಳ್ಳಬಹುದು ಅವರು ಸದಾ ಹಿಂದೆನೇ ಮಾತನಾಡುವುದು. ನಾನು ಎದುರಿಗೆ ಸಿಗುತ್ತೀನಿ ಎದುರಿಗೆ ಮಾತನಾಡಲಿ ಎದುರಿಗೆ ಸರಿ ಮಾಡಿಕೊಳ್ಳೋಣ...ಎಲ್ಲಿ ಮಾತನಾಡುತ್ತಿದ್ದಾರೆ ಅದು ಎದುರಿಗೆ ಮಾತನಾಡಲಿ ಅಲ್ಲಿ ಉತ್ತರ ಕೊಡೋಣ ಎಂದಿದ್ದಾರೆ ಧನ್ವೀರ್. 

ಹೇರ್‌ಕಟ್ ಆದ್ಮೇಲೆ ಸಾವಿರಾರೂ ಫೋಟೋಗಳು ಬೇಕೇ ಬೇಕು...ಮಾಲಾಶ್ರೀ ಮಗಳ ಹೊಸ ಲುಕ್ ವೈರಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!