ಅ.1ಕ್ಕೆ ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಬಿಡುಗಡೆ

By Kannadaprabha NewsFirst Published Sep 29, 2021, 12:22 PM IST
Highlights
  • ಅ.1ಕ್ಕೆ ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಬಿಡುಗಡೆ
  • ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ತೆರೆ ಕಾಣಲಿದೆ ಸಿನಿಮಾ

ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅ.1ಕ್ಕೆ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಸಿನಿಮಾ ತೆರೆ ಕಾಣಲಿದೆ. ಹಿರಿಯ ಸಾಹಿತಿ ಬೊಳುವಾರು ಮೊಹಮ್ಮದ್‌ ಕುಂಞಿ ಅವರ ‘ಪಾಪು ಗಾಂಧಿ, ಗಾಂಧಿ ಬಾಪೂ ಆದ ಕತೆ’ ಕೃತಿಯಿಂದ ಪ್ರೇರಣೆಯಿಂದ ಮಾಡಿರುವ ಚಿತ್ರವಿದು.

ಗಾಂಧೀಜಿ ಅವರು ಬಾಲ್ಯಕಳೆದ ರಾಜಕೋಟ್‌ನ ಮನೆ, ಓದಿದ ಶಾಲೆಯಲ್ಲಿ ಈ ಚಿತ್ರ ಚಿತ್ರೀಕರಿಸಿದ್ದು ಹೆಚ್ಚುಗಾರಿಕೆ. ರಿಚರ್ಡ್‌ ಅಟೆನ್‌ಬರೋ ಅವರ ‘ಗಾಂಧಿ’ ಚಿತ್ರದ ಛಾಯಾಗ್ರಹಕರ ಯೂನಿಟ್‌ನಲ್ಲಿ ಕೆಲಸ ಮಾಡಿದ್ದ ಹಿರಿಯ ಛಾಯಾಗ್ರಾಹಕ ಜಿ ಎಸ್‌ ಭಾಸ್ಕರ್‌ ಅವರೇ ಈ ಚಿತ್ರಕ್ಕೆ ಕ್ಯಾಮರ ವರ್ಕ್ ಮಾಡಿದ್ದು ಮತ್ತೊಂದು ವಿಶೇಷ.

ಯಜಮಾನ, ಅಸುರ ಸಿನಿಮಾ ಟಿಕೆಟ್ ಬ್ಲಾಕ್‌ನಲ್ಲಿ ಮಾರಿದ್ದೆ: ರವಿ ಡಿ ಚನ್ನಣ್ಣನವರ್‌

ಚಿತ್ರ ಬಿಡುಗಡೆ ಕುರಿತು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ, ‘ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಈ ಚಿತ್ರವನ್ನು ಹೊರತರಲಾಗುತ್ತಿದೆ. ಇದು ಗಾಂಧಿ ಮಹಾತ್ಮನಾಗುವ ಮೊದಲಿನ ಬಾಲ್ಯದ ಕತೆ. 7 ರಿಂದ 14 ವರ್ಷದವರೆಗಿನ ಮೋಹನದಾಸನ ಕತೆ ಇಲ್ಲಿದೆ. ಸರ್ಕಾರ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಸಿನಿಮಾ ಥಿಯೇಟರ್‌ ಪ್ರವೇಶ ಎನ್ನುತ್ತಿದೆ. ಮಕ್ಕಳಿಗೆ ಈ ಸಿನಿಮಾ ತೋರಿಸಬೇಕು ಎಂಬ ನನ್ನ ಕನಸು ಈಡೇರುವಂತೆ ಕಾಣುತ್ತಿಲ್ಲ. ಆದರೂ ಶಾಲೆಯಲ್ಲಿ ಮಕ್ಕಳಿಗೆ ಈ ಚಿತ್ರ ತೋರಿಸುವ ಇರಾದೆ ಇದೆ’ ಎಂದರು.

ಈ ಚಿತ್ರದಲ್ಲಿ ಪುತಲೀಬಾಯಿ ಪಾತ್ರ ಮಾಡಿದ ಶ್ರುತಿ ಅವರು, ‘ಈ ಚಿತ್ರವನ್ನು ಮಕ್ಕಳಿಗೆ ತೋರಿಸಲು ಸರ್ಕಾರದಿಂದ ಯಾವ ಸಹಾಯ ಬೇಕೋ ಅದನ್ನು ಒದಗಿಸುವ ಜವಾಬ್ದಾರಿ ನನ್ನದು’ ಎಂದರು.

ರಂಜನಿ ರಾಘವನ್‌ ಕಥಾ ಸಂಕಲನ ‘ಕತೆ ಡಬ್ಬಿ’ ಇಂದು ಬಿಡುಗಡೆ

ಹಿರಿಯ ನಟ ದತ್ತಣ್ಣ ಅವರ 200ನೇ ಸಿನಿಮಾ ಇದಾಗಿದ್ದು, ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರಕ್ಕೆ ಪ್ರವೀಣ್‌ ಗೋಡ್ಕಿಂಡಿ ಸಂಗೀತವಿದೆ. ಸಮರ್ಥ, ಪರಮಸ್ವಾಮಿ, ಅನಂತ್‌ ಮಹಾದೇವನ್‌ ನಟಿಸಿದ್ದಾರೆ.

click me!